ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರದಲ್ಲಿ ತಾನೇ ಮೋರಿ ಸ್ವಚ್ಛಗೊಳಿಸಿದ ಬಾಲಕಿ

By Manjunatha
|
Google Oneindia Kannada News

ಚಿಕ್ಕಬಳ್ಳಾಪುರ, ಡಿಸೆಂಬರ್ 14: ಮೋರಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿ-ಮಾಡಿ ಸಾಕಾಗಿ ಕೊನೆಗೆ ಬಾಲಕಿಯೊಬ್ಬಳು ಸ್ವತಃ ತಾನೇ ಮೋರಿಗೆ ಇಳಿದು ಸ್ವಚ್ಚಗೊಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಗೌರಿಬಿದನೂರು ತಾಲ್ಲೂಕಿನ ಗೌಡನಗೆರೆಯಲ್ಲಿ ಕುಟುಂಬವೊಂದು ತಮ್ಮ ಮನೆಯ ಮುಂದಿನ ಮೋರಿ ಸ್ವಚ್ಛಗೊಳಿಸುವಂತೆ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದ್ದಾರೆ, ಆದರೆ ಗ್ರಾ.ಪಂ ಅಧಿಕಾರಿ ಈ ಬಗ್ಗೆ ಗಮನವೇ ಹರಿಸಿಲ್ಲ.

13 year girl cleans Drainage in Chikkaballapura

ಮೋರಿಯ ದುರ್ವಾಸನೆಗೆ ಬೇಸತ್ತು ಕೊನೆಗೆ 13 ವರ್ಷದ ಕವಿತಾ ಮೋರಿಗೆ ಇಳಿದು ಮೋರಿ ಸ್ವಚ್ಚಗೊಳಿಸಿದ್ದಾಳೆ. ಮನೆಯ ಮುಂದಿನ ಮೋರಿ ಕಟ್ಟಿಕೊಟ್ಟದ್ದರಿಂದ ಸೊಳ್ಳೆಗಳು ಹೆಚ್ಚಾಗಿ ಕುಟುಂಬ ಸದಸ್ಯರಿಗೆ ಡೆಂಗ್ಯೂ ಬಂದಿತ್ತು, ಮೋರಿಯ ವಾಸನೆಗೆ ಮನೆಯಲ್ಲಿ ಇರುವುದೇ ಕಷ್ಟಕರವಾಗಿ ಪರಿಣಮಿಸಿತ್ತು ಹಾಗಾಗಿ ಮೋರಿ ಸ್ವಚ್ಛಗೊಳಿಸಲು ಮುಂದಾದೆ ಎಂದು ಬಾಲಕಿ ಕವಿತಾ ಹೇಳಿದ್ದಾಳೆ.

13 year girl cleans Drainage in Chikkaballapura

ಕವಿತಾ ಚರಂಡಿ ಸ್ವಚ್ಛ ಗೊಳಿಸುತ್ತಿರುವ ಚಿತ್ರಗಳು ಈಗ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಕಷ್ಟಕ್ಕೆ ಕಿವಿಗೊಡದ ಪಂಚಾಯಿತಿ ಅಧಿಕಾರಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

English summary
In Chikkaballapur district, Gowribidanur talluk's Gowdanagere village a 13 year old girl cleaned drainage. She and her Family requested many times to Panchayat officers to clean drainage but they didn't respond so the little girl cleaned it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X