ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ: ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 03: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ನಿನ್ನೆ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿತ್ತು. ಆದರೆ ಇಂದಿನ ಆರೋಗ್ಯ ಇಲಾಖೆ ವರದಿಯಲ್ಲಿ ಕೊರೊನಾ ಹೊಸ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡಿನ ಆತಂಕದ ನಡುವೆಯೇ ನಿನ್ನೆಗಿಂತ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಹೊಸ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕರ್ನಾಟಕದ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಕೊಡಗು ಬಾರ್ಡರ್‌ಗಳಲ್ಲಿ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಆಗಸ್ಟ್ 03: ಕೊವಿಡ್19 ರಿಂದ ಚೇತರಿಕೆ ಟಾಪ್ 10 ದೇಶಗಳ ಪಟ್ಟಿಆಗಸ್ಟ್ 03: ಕೊವಿಡ್19 ರಿಂದ ಚೇತರಿಕೆ ಟಾಪ್ 10 ದೇಶಗಳ ಪಟ್ಟಿ

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 1674 ಕೊರೊನಾ ಸೋಂಕು ಪತ್ತೆಯಾಗಿದ್ದು, 1376 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 38 ಆಗಿದೆ.

1285 New Covid- 19 Positive Cases Reported In Karnataka On August 3rd

ರಾಜ್ಯದಲ್ಲಿ ಈವರೆಗೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 29,09,958ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ- 36,650 ಆಗಿದೆ. ಇಲ್ಲಿಯವರೆಗೆ ಒಟ್ಟು 28,49,003 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದ ಪಾಸಿಟಿವಿಟಿ ದರ ಶೇ. 1.38ಕ್ಕೆ ಏರಿಕೆಯಾಗಿದ್ದು, ಕೋವಿಡ್ ಡೆತ್ ರೇಟ್ ಶೇ.2.27ರಷ್ಟಾಗಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ವರದಿ ಮಾಡಿದೆ.

ವಿವಿಧ ಜಿಲ್ಲೆಗಳ ಕೋವಿಡ್ ವರದಿ

ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 477 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಇದು ಹಿಂದಿನ ದಿನಕ್ಕಿಂತ ಇಂದು ಹೆಚ್ಚಾಗಿರುವುದು ರಾಜಧಾನಿಗೆ ಆತಂಕ ತರಿಸಿದೆ. ಒಟ್ಟು ಸೋಂಕಿತರ ಸಂಖ್ಯೆ 12,28,515ಕ್ಕೆ ಏರಿದ್ದರೆ, ಸಕ್ರಿಯ ಪ್ರಕರಣಗಳು 8986 ಇವೆ. ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ತರಲಾಗಿದೆ.

ಇನ್ನು ಕೇರಳ ಗಡಿ ಹಂಚಿಕೊಂಡಿರುವ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ 307 ಪ್ರಕರಣಗಳು, ಮೈಸೂರು ಜಿಲ್ಲೆಯಲ್ಲಿ 147 ಪ್ರಕರಣಗಳು, ಉಡುಪಿ ಜಿಲ್ಲೆಯಲ್ಲಿ 104 ಪ್ರಕರಣಗಳು, ತುಮಕೂರು ಜಿಲ್ಲೆಯಲ್ಲಿ 80 ಪ್ರಕರಣಗಳು, ಬೆಳಗಾವಿ 36, ಶಿವಮೊಗ್ಗ 26 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 21, ಚಿಕ್ಕಮಗಳೂರು 61, ಹಾಸನ 104, ಕೊಡಗು 94, ಕೋಲಾರ 17, ಮಂಡ್ಯ ಜಿಲ್ಲೆಯಲ್ಲಿ 44 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಬಾಗಲಕೋಟೆ 1, ಬಳ್ಳಾರಿ 8, ಬೀದರ್ 0 ಪ್ರಕರಣಗಳು ಪತ್ತೆಯಾಗಿವೆ. ಚಾಮರಾಜನಗರ 19, ಚಿಕ್ಕಬಳ್ಳಾಪುರ 6, ಚಿತ್ರದುರ್ಗ 15, ಧಾರವಾಡ 9, ಗದಗ 3, ಹಾವೇರಿ 1, ಕಲಬುರಗಿ 3, ಕೊಪ್ಪಳ 4, ದಾವಣಗೆರೆಯಲ್ಲಿ 12 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 60 ಸೋಂಕು ಪ್ರಕರಣಗಳು, ಯಾದಗಿರಿಯಲ್ಲಿ 0, ರಾಯಚೂರು ಜಿಲ್ಲೆಯಲ್ಲಿ 0 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಸಾರ್ವಜನಿಕರಿಗೆ ಮನವಿ:

ಕೋವಿಡ್- 19 ಸೋಂಕಿತ ವ್ಯಕ್ತಿಯೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿದ್ದಲ್ಲಿ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು ಹಾಗೂ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳುವುದು ಅಥವಾ 14410 ಆಪ್ತಮಿತ್ರ ಆರೋಗ್ಯ ಸಹಾಯವಾಣಿಗೆ ಕರೆಮಾಡಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‍ನ ಸೂಕ್ತ ನಡವಳಿಕೆಗಳಾದ, ವೈಯ್ಯಕ್ತಿಕ ನೈರ್ಮಲ್ಯ, ಮೂಗು ಮತ್ತು ಬಾಯಿ ಎರಡನ್ನೂ ಆವರಿಸುವ ಮುಖಕವಚವನ್ನು ಧರಿಸಿ, ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ / ಟಿಶ್ಯೂ ಪೇಪರನ್ನು ಬಳಸಿ, ಆಗಾಗ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.

Recommended Video

CM ಗೆ ಶುರು ಆಯ್ತು ಹೊಸ ತಲೆನೋವು !! | Oneindia Kannada

ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಬಳಸುವುದರೊಂದಿಗೆ, ದೈಹಿಕ ಅಂತರವನ್ನು ಪಾಲಿಸಿ, ಸಾಮೂಹಿಕ ಸಾಮಾಜಿಕ ಗುಂಪು-ಕೂಟಗಳಿಗೆ ಹಾಜರಾಗುವುದನ್ನು ನಿಷೇಧಿಸುವುದರ ಮೂಲಕ ಕೋವಿಡ್- 19ರ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

English summary
In Karnataka 1674 cases of coronavirus were reported in the last 24 hours and 1376 infected persons were cured and released from hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X