ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು

|
Google Oneindia Kannada News

ಬೆಂಗಳೂರು, ಜುಲೈ 03 : ಎರಡನೇ ಹಂತದಲ್ಲಿ ರೈಲುಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿದೆ. ಕರ್ನಾಟಕದಿಂದ 12 ಖಾಸಗಿ ರೈಲುಗಳು ದೇಶದ ವಿವಿಧ ನಗರಗಳಿಗೆ ಸಂಚಾರವನ್ನು ನಡೆಸಲಿವೆ.

ಕರ್ನಾಟಕದಿಂದ ಸಂಚಾರ ನಡೆಸುವ ಎಲ್ಲಾ ರೈಲಗಳು ಬೆಂಗಳೂರಿನಿಂದಲೇ ಹೊರಡಲಿವೆ. ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ರೈಲು ಹೊರಡಲಿದ್ದು, ನಿಲ್ದಾಣದ ಕಾಮಗಾರಿ ಈ ವರ್ಷದ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದೆ.

ದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆ

ಖಾಸಗಿಯವರು ಉಸ್ತುವಾರಿ ವಹಿಸಿಕೊಂಡರೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲಿದ್ದಾರೆ. ಆದರೆ, ರೈಲುಗಳ ದರಗಳು ಎಷ್ಟಾಗಲಿವೆ? ಎಂಬ ಬಗ್ಗೆ ಜನರು ಚಿಂತಿಸುತ್ತಿದ್ದಾರೆ. ದರ ಹೆಚ್ಚಳವಾದರೆ ಕೆಳ, ಮಧ್ಯಮ ವರ್ಗದವರು ಸಂಚಾರ ನಡೆಸುವುದು ಕಷ್ಟವಾಗಲಿದೆ.

150 ರೈಲುಗಳ ನಿರ್ವಹಣೆ ಖಾಸಗಿಯವರಿಗೆ150 ರೈಲುಗಳ ನಿರ್ವಹಣೆ ಖಾಸಗಿಯವರಿಗೆ

ಕೇಂದ್ರ ಸರ್ಕಾರ 109 ರೈಲುಗಳ ಖಾಸಗೀಕರಣದ ಪ್ರಕ್ರಿಯೆ ಆರಂಭಿಸಿದೆ. ಬುಧವಾರ ಖಾಸಗಿಯವರಿಂದ ಮೊದಲ ಹಂತದ ಪ್ರಕ್ರಿಯೆಯಾಗಿ ಆರ್‌ಎಫ್‌ಕ್ಯೂಗೆ ಬಿಡ್ ಆಹ್ವಾನಿಸಲಾಗಿದೆ. ಒಟ್ಟು ಎರಡು ಹಂತದಲ್ಲಿ ಖಾಸಗೀಕರಣ ಪ್ರಕ್ರಿಯೆ ನಡೆಯಲಿದೆ.

ಬೆಂಗಳೂರು-ಬೆಳಗಾವಿ ನಡುವೆ ಜೂ.26ರಿಂದಲೇ ರಾತ್ರಿ ರೈಲು ಸಂಚಾರ ಬೆಂಗಳೂರು-ಬೆಳಗಾವಿ ನಡುವೆ ಜೂ.26ರಿಂದಲೇ ರಾತ್ರಿ ರೈಲು ಸಂಚಾರ

ವಿವಿಧ ನಗರಗಳಿಗೆ ಖಾಸಗಿ ರೈಲು

ವಿವಿಧ ನಗರಗಳಿಗೆ ಖಾಸಗಿ ರೈಲು

ಖಾಸಗಿ ರೈಲುಗಳ ಸಂಚಾರ ಪ್ರಕ್ರಿಯೆಗೆ ಅನುಮತಿ ಸಿಕ್ಕಿದ ಬಳಿಕ ಗೌಹಾತಿ, ದೆಹಲಿ, ಹೌರಾ, ರಾಂಚಿ, ಪಾಟ್ನಾ, ಗೋರಖ್‌ಪುರ್, ಪ್ರಯಾಗ್‌ರಾಜ್, ವಿಶಾಖಪಟ್ಟಣಂ, ಜೈಪುರ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಬೆಂಗಳೂರಿನಿಂದ ಸಂಚಾರ ನಡೆಸಬಹುದಾಗಿದೆ.

ಕಲಬುರಗಿ, ಮೈಸೂರು, ಮಂಗಳೂರು

ಕಲಬುರಗಿ, ಮೈಸೂರು, ಮಂಗಳೂರು

ಬೆಂಗಳೂರು-ರಾಂಚಿ-ಬೆಂಗಳೂರು (ವಾರಕ್ಕೆ 2 ಬಾರಿ), ಮಂಗಳೂರು-ಚೆನ್ನೈ-ಮಂಗಳೂರು (ವಾರಕ್ಕೆ 1 ಬಾರಿ), ಮೈಸೂರು-ಭುವನೇಶ್ವರ-ಮೈಸೂರು (ಪ್ರತಿದಿನ), ಕಲಬುರಗಿ-ಮುಂಬೈ-ಕಲಬುರಗಿ (ವಾರಕ್ಕೆ 6 ದಿನ) ಹೀಗೆ ವಿವಿಧ ಮಾರ್ಗದಲ್ಲಿ ಖಾಸಗಿ ರೈಲುಗಳು ಸಂಚಾರ ನಡೆಸಲಿವೆ.

ಯಾವ-ಯಾವ ಮಾರ್ಗ?

ಯಾವ-ಯಾವ ಮಾರ್ಗ?

ಸದ್ಯ ರೈಲ್ವೆ ಇಲಾಖೆಯು ಬೆಂಗಳೂರು-ಪಾಟ್ನಾ-ಬೆಂಗಳೂರು (ವಾರದಲ್ಲಿ 5 ದಿನ), ಬೆಂಗಳೂರು-ಗೋರಖ್‌ಪುರ್-ಬೆಂಗಳೂರು (ವಾರಕ್ಕೆ 2ದಿನ), ಬೆಂಗಳೂರು-ಪ್ರಯಾಗ್‌ರಾಜ್-ಬೆಂಗಳೂರು (ವಾರಕ್ಕೆ 2 ದಿನ), ಬೆಂಗಳೂರು-ವಿಶಾಖಪಟ್ಟಣಂ-ಬೆಂಗಳೂರು (ವಾರಕ್ಕೆ 3 ದಿನ) ಖಾಸಗಿ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ.

ಬೆಂಗಳೂರು-ದೆಹಲಿ-ಬೆಂಗಳೂರು

ಬೆಂಗಳೂರು-ದೆಹಲಿ-ಬೆಂಗಳೂರು

ಖಾಸಗಿ ರೈಲುಗಳು ಬೆಂಗಳೂರು-ಜೈಪುರ-ಬೆಂಗಳೂರು (ವಾರಕ್ಕೊಮ್ಮೆ), ಬೆಂಗಳೂರು-ಗೌಹಾತಿ-ಬೆಂಗಳೂರು (ವಾರಕ್ಕೆ 3 ದಿನ), ಬೆಂಗಳೂರು-ದೆಹಲಿ-ಬೆಂಗಳೂರು (ಪ್ರತಿದಿನ), ಬೆಂಗಳೂರು-ಹೌರಾ-ಬೆಂಗಳೂರು (ಪ್ರತಿದಿನ) ನಡುವೆ ಸಂಚಾರ ನಡೆಸಲಿವೆ.

ಪ್ರಾರಂಭಿಕ ಹಂತದಲ್ಲಿದೆ

ಪ್ರಾರಂಭಿಕ ಹಂತದಲ್ಲಿದೆ

109 ಖಾಸಗಿ ರೈಲುಗಳ ಸಂಚಾರಕ್ಕೆ ಬುಧವಾರ ಬಿಡ್ ಕರೆಯಲಾಗಿದೆ. ಈ ಪ್ರಕ್ರಿಯೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಮುಂದಿನ 2 ಅಥವ 3 ತಿಂಗಳಿನಲ್ಲಿ ಖಾಸಗಿ ರೈಲುಗಳ ಸಂಚಾರದ ಬಗ್ಗೆ ಪೂರ್ಣ ಮಾಹಿತಿ ಸಿಗಲಿದೆ.

English summary
12 Private train will operate from Karnataka. Union ministry of railways invited request for RFQs for operation of 109 pairs of passenger trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X