• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ: 2020ರಲ್ಲಿ ನಿವೃತ್ತರಾಗಲಿರುವ 12 ಐಪಿಎಸ್ ಅಧಿಕಾರಿಗಳು

|

ಬೆಂಗಳೂರು, ಜನವರಿ 03 : ಕರ್ನಾಟಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ 12 ಐಪಿಎಸ್ ಅಧಿಕಾರಿಗಳು 2020ರಲ್ಲಿ ನಿವೃತ್ತರಾಗಲಿದ್ದಾರೆ. ಡಿಜಿ & ಐಜಿಪಿಯಾಗಿರುವ ನೀಲಮಣಿ ಎನ್. ರಾಜು ಅವರು ಸಹ ಜನವರಿ 31ಕ್ಕೆ ನಿವೃತ್ತರಾಗಲಿದ್ದಾರೆ.

2020ರ ವಿವಿಧ ತಿಂಗಳಿನಲ್ಲಿ ರಾಜ್ಯದ 12 ಐಪಿಎಸ್ ಅಧಿಕಾರಿಗಳು ನಿವೃತ್ತರಾಗಲಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ನಿವೃತ್ತರಾಗಲಿದ್ದು, ಹೊಸ ಡಿಜಿ & ಐಜಿಪಿ ಆಯ್ಕೆಗೆ ಈಗಾಗಲೇ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.

ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರು ಯಾರು?

ಕರ್ನಾಟಕ ಸರ್ಕಾರ ಕೇಂದ್ರ ಲೋಕಸಭಾ ಆಯೋಗಕ್ಕೆ ಮೂವರು ಐಪಿಎಸ್ ಅಧಿಕಾರಿಗಳ ಹೆಸರು ಶಿಫಾರಸು ಮಾಡಿದೆ. ಸೇವಾ ಹಿರಿತನದ ಆಧಾರದ ಮೇಲೆ ಹೊಸ ಡಿಜಿ & ಐಜಿಪಿ ನೇಮಕಾತಿ ನಡೆಯಲಿದ್ದು, ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಸ್ಥಾನಕ್ಕೆ ಯಾರ ನೇಮಕವಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಉಡುಪಿ; ಒಂದೇ ದಿನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬದಲಾವಣೆ

ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ. ಎಂ. ಪ್ರಸಾದ್, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಮತ್ತು ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಸಿಪಿ ಪದಮ್ ಕುಮಾರ್ ಗರ್ಗ್ ಹೆಸರನ್ನು ಡಿಜಿ & ಐಜಿಪಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.

ಕರ್ನಾಟಕ; ಎಲ್ಲಾ ನ್ಯಾಯಾಲಯದ ಸಮಯಗಳ ಪರಿಷ್ಕರಣೆ

ನೀಲಮಣಿ ಎನ್. ರಾಜು

ನೀಲಮಣಿ ಎನ್. ರಾಜು

* ಕರ್ನಾಟಕದ ಡಿಜಿ & ಐಜಿಪಿಯಾಗಿರುವ ನೀಲಮಣಿ ಎನ್. ರಾಜು ಅವರು ಜನವರಿ 31ಕ್ಕೆ ನಿವೃತ್ತರಾಗಲಿದ್ದಾರೆ. ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

* ಕಲಬುರಗಿ ಪೊಲೀಸ್ ಆಯುಕ್ತರಾಗಿರುವ ಎಂ. ಎನ್. ನಾಗರಾಜ್ 31/5/2020ಕ್ಕೆ ನಿವೃತ್ತರಾಗಲಿದ್ದಾರೆ.

* ಎಡಿಜಿಪಿಯಾಗಿರುವ ರವಿರಾಜ್ ಪ್ರತಾಪ್ ಶರ್ಮಾ 31/12/2020ರಂದು ನಿವೃತ್ತರಾಗಲಿದ್ದಾರೆ.

ಎಂ. ಎನ್. ರೆಡ್ಡಿ ನಿವೃತ್ತಿ

ಎಂ. ಎನ್. ರೆಡ್ಡಿ ನಿವೃತ್ತಿ

* ಗೃಹ ರಕ್ಷಕ ದಳದ ಡಿಜಿಪಿಯಾಗಿರುವ ಎಂ. ಎನ್. ರೆಡ್ಡಿ 31/1/2020ರಂದು ನಿವೃತ್ತರಾಗಲಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ, ಅಗ್ನಿ ಶಾಮಕ ದಳ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ.

* ಡಿಸಿಆರ್‌ಇ ಡಿಐಜಿಪಿ ಆಗಿರುವ ಮಂಜುನಾಥ ಅಣ್ಣಿಗೇರಿ 31/5/2020ಕ್ಕೆ ನಿವೃತ್ತರಾಗಲಿದ್ದಾರೆ.

* ಡಿಐಜಿಪಿ ಆಗಿರುವ ಟಿ. ಆರ್. ಸುರೇಶ್ 31/7/2020ರಂದು ನಿವೃತ್ತರಾಗಲಿದ್ದಾರೆ.

ರಾಘವೇಂದ್ರ ಔರಾದ್ಕರ್

ರಾಘವೇಂದ್ರ ಔರಾದ್ಕರ್

* ಹೌಸಿಂಗ್ ಕಾರ್ಪೊರೇಷನ್ ಡಿಜಿಪಿಯಾಗಿರುವ ರಾಘವೇಂದ್ರ ಔರಾದ್ಕರ್ 31/1/2020ರಂದು ನಿವೃತ್ತರಾಗಲಿದ್ದಾರೆ.

* ಎಡಿಜಿಪಿ ಟಿ. ಸುನೀಲ್ ಕುಮಾರ್ 31/10/2020ರಂದು ನಿವೃತ್ತರಾಗಲಿದ್ದಾರೆ.

* ಪಿ. ರಾಜೇಂದ್ರ ಪ್ರಸಾದ್ 31/1/2020ರಂದು ನಿವೃತ್ತಿ

ಎನ್. ಎಸ್. ಮೇಘರಿಕ್ ನಿವೃತ್ತಿ

ಎನ್. ಎಸ್. ಮೇಘರಿಕ್ ನಿವೃತ್ತಿ

* ಬಂಧಿಖಾನೆ ಇಲಾಖೆ ಎಡಿಜಿಪಿ ಎನ್. ಎಸ್. ಮೇಘರಿಕ್ 31/7/2020ರಂದು ನಿವೃತ್ತರಾಗಲಿದ್ದಾರೆ.

* ಡಾ. ಎಸ್. ಪರಶಿವಮೂರ್ತಿ 30/9/2020ರಂದು ನಿವೃತ್ತಿ

* ಡಿಜಿಪಿಯಾಗಿರುವ ಆಶಿತ್ ಮೋಹನ್ ಪ್ರಸಾದ್ 31/10/2020 ನಿವೃತ್ತಿ

English summary
12 IPS officers inducing DG & IGP of Karnataka Neelamani Raju will retire in the year 2020. Who will new DG & IGP of Karnataka government proposed 3 names for the union government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X