ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ; ಜೆಡಿಎಸ್ ಆಸ್ತಿಯಲ್ಲಿ ಏರಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10 : ದೇಶದ ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರಗಳನ್ನು ಎಡಿಆರ್ ಬಹಿರಂಗ ಪಡಿಸಿದೆ. ಎಡಿಆರ್ ವರದಿ ಪ್ರಕಾರ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಸ್ತಿಯ ವಿಚಾರದಲ್ಲಿ 9ನೇ ಸ್ಥಾನದಲ್ಲಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 11 ಪುಟಗಳ ವರದಿಯನ್ನು ಬಿಡುಗಡೆ ಮಾಡಿದೆ. 2016-17 ಮತ್ತು 2017-18ರಲ್ಲಿ ಪ್ರಾದೇಶಿಕ ಪಕ್ಷಗಳ ಆಸ್ತಿ ಎಷ್ಟಿತ್ತು?, ಎಷ್ಟು ಏರಿಕೆಯಾಗಿದೆ?, ಸಾಲವೆಷ್ಟು? ಎಂಬ ಮಾಹಿತಿಗಳು ಬಹಿರಂಗವಾಗಿವೆ.

ಉಪಚುನಾವಣೆ: ಐದು ಕ್ಷೇತ್ರಗಳ ಮೇಲಷ್ಟೆ ಜೆಡಿಎಸ್ ಕಣ್ಣುಉಪಚುನಾವಣೆ: ಐದು ಕ್ಷೇತ್ರಗಳ ಮೇಲಷ್ಟೆ ಜೆಡಿಎಸ್ ಕಣ್ಣು

ದೇಶದ 10 ಪ್ರಾದೇಶಿಕ ಪಕ್ಷಗಳ ಆಸ್ತಿಯ ವಿವರಗಳನ್ನು ಎಡಿಆರ್ ಬಿಡುಗಡೆ ಮಾಡಿದೆ. 2017-18 ರಲ್ಲಿ 583.29 ಕೋಟಿ ಆಸ್ತಿಯನ್ನು ಹೊಂದಿರುವ ಸಮಾಜವಾದಿ ಪಕ್ಷ ಹೊಂದಿದ್ದು, ಪ್ರಾದೇಶಿಕ ಪಕ್ಷಗಳಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ಪಕ್ಷವಾಗಿದೆ.

ಬೇರೆಯವರ ಆಸ್ತಿಯನ್ನು ನಮ್ಮ ಆಸ್ತಿ ಎನ್ನುತ್ತಿದ್ದಾರೆ: ಡಿ.ಕೆ.ಸುರೇಶ್ಬೇರೆಯವರ ಆಸ್ತಿಯನ್ನು ನಮ್ಮ ಆಸ್ತಿ ಎನ್ನುತ್ತಿದ್ದಾರೆ: ಡಿ.ಕೆ.ಸುರೇಶ್

ತಮಿಳುನಾಡಿನ ಎರಡು ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ. 13.78 ಕೋಟಿ ಆಸ್ತಿಯನ್ನು ಹೊಂದಿರುವ ಜೆಡಿಯು 10ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಆಸ್ತಿ ಎಷ್ಟು ಹೆಚ್ಚಾಗಿದೆ? ಎಂಬ ಅಂಶವೂ ಬಿಡುಗಡೆಯಾಗಿದೆ.

ಒಂದು ಸೋಲಿನಿಂದ ನೈತಿಕ ಬಲ ಕುಂದಿಲ್ಲ: ದೇವೇಗೌಡಒಂದು ಸೋಲಿನಿಂದ ನೈತಿಕ ಬಲ ಕುಂದಿಲ್ಲ: ದೇವೇಗೌಡ

ಆಸ್ತಿ ಮೌಲ್ಯದಲ್ಲಿ ಹೆಚ್ಚಳ

ಆಸ್ತಿ ಮೌಲ್ಯದಲ್ಲಿ ಹೆಚ್ಚಳ

ದೇಶದ 10 ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ 2016-17ನೇ ಸಾಲಿನಲ್ಲಿ 117.07 ಕೋಟಿ. 2017-18ನೇ ಸಾಲಿನಲ್ಲಿ ಒಟ್ಟು ಆಸ್ತಿಯ ಮೌಲ್ಯ 125.25 ಕೋಟಿಗೆ ಏರಿಕೆಯಾಗಿದೆ. ಸಮಾಜವಾದಿ ಪಕ್ಷ, ಡಿಎಂಕೆ ಪಕ್ಷದ ಆಸ್ತಿಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕರ್ನಾಟಕದ ಪ್ರಾದೇಶಿಕ ಪಕ್ಷ

ಕರ್ನಾಟಕದ ಪ್ರಾದೇಶಿಕ ಪಕ್ಷ

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ಆಸ್ತಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಹೆಚ್ಚಾಗಿದೆ. 2016-17ರಲ್ಲಿ ಜೆಡಿಎಸ್ ಪಕ್ಷದ ಆಸ್ತಿ 7.61 ಕೋಟಿ ರೂ.ಗಳು., 2017-18ನೇ ಸಾಲಿನಲ್ಲಿ ಪಕ್ಷದ ಆಸ್ತಿಯ ಮೌಲ್ಯ 15.44 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜೆಡಿಎಸ್ ಪಕ್ಷದ ಆಸ್ತಿ 102.09ರಷ್ಟು ಏರಿಕೆಯಾಗಿದೆ ಎಂದು ಎಡಿಆರ್ ವರದಿ ಹೇಳಿದೆ.

ಜೆಡಿಎಸ್ ಪಕ್ಷದ ಸಾಲದ ಮೊತ್ತ

ಜೆಡಿಎಸ್ ಪಕ್ಷದ ಸಾಲದ ಮೊತ್ತ

ದೇಶದ 10 ಪ್ರಮುಖ ಪ್ರಾದೇಶಿಕ ಪಕ್ಷಗಳ ಪೈಕಿ ಆಮ್ ಆದ್ಮಿ ಪಕ್ಷದ ಸಾಲದ ಮೊತ್ತ ಇಳಿಕೆಯಾಗಿದೆ. 2016-17ರಲ್ಲಿ 1.22 ಕೋಟಿ ಇದ್ದ ಸಾಲ ಈಗ 0.96 ಕೋಟಿಗೆ ಇಳಿಕೆಯಾಗಿದೆ.

2016-17ನೇ ಸಾಲಿನಲ್ಲಿ ಜೆಡಿಎಸ್ ಪಕ್ಷದ ಸಾಲ 7.004 ಕೋಟಿ ಇತ್ತು. 2017-18ನೇ ಸಾಲಿನಲ್ಲಿ 7.008 ಕೋಟಿ ಸಾಲವಿದೆ. ಪಕ್ಷದ ಆಸ್ತಿ ಮೌಲ್ಯ ಹೆಚ್ಚಾದರೂ ಸಾಲದ ಹೊರೆ ಮಾತ್ರ ಕಡಿಮೆಯಾಗಿಲ್ಲ.

ಜೆಡಿಎಸ್ ಪಕ್ಷದ ಕಾಯ್ದಿಟ್ಟ ನಿಧಿಯಲ್ಲಿ ಶೇ 1281.97ರಷ್ಟು ಏರಿಕೆಯಾಗಿದೆ. 2016-17ರಲ್ಲಿ 0.61 ಕೋಟಿ ಇದ್ದ ನಿಧಿ, 2017-18ಕ್ಕೆ 8.43 ಕೋಟಿಗೆ ಏರಿಕೆ ಕಂಡಿದೆ.

ಟಾಪ್ 10 ಆಸ್ತಿ ಹೊಂದಿರುವ ಪಕ್ಷಗಳು

ಟಾಪ್ 10 ಆಸ್ತಿ ಹೊಂದಿರುವ ಪಕ್ಷಗಳು

* ಸಮಾಜವಾದಿ ಪಕ್ಷ 583.29 ಕೋಟಿ
* ಡಿಎಂಕೆ 191.64 ಕೋಟಿ
* ಎಐಎಡಿಎಂಕೆ 189.54 ಕೋಟಿ
* ಟಿಡಿಪಿ 131.59 ಕೋಟಿ
* ಎಸ್‌ಎಚ್‌ಎಸ್ 51.92 ಕೋಟಿ
* ಟಿಆರ್‌ಎಸ್ 29.04 ಕೋಟಿ
* ಬಿಜೆಡಿ 25.17 ಕೋಟಿ
* ಆರ್‌ಎಲ್‌ಡಿ 21.06 ಕೋಟಿ
* ಜೆಡಿಎಸ್ 15.44 ಕೋಟಿ
* ಜೆಡಿಯು 13.78 ಕೋಟಿ

English summary
Association for Democratic Reforms (ADR) report said that The Janata Dal (Secular) party asset hiked to 7.61 crore to 15.44 core in the year 2017-18 compered to 2016-17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X