ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ: ಹೊರಾಂಗಣ 200, ಒಳಾಂಗಣ 100 ಜನರಿಗೆ ಅವಕಾಶ

|
Google Oneindia Kannada News

ಬೆಂಗಳೂರು, ಜ.4: ಕೋವಿಡ್‌ ಪ್ರಕರಣಗಳು ಏರಿಕೆ ಆಗುತ್ತಿರುವ ಸಂದರ್ಭದಲ್ಲಿ ಮದುವೆಗಳಿಗೆ ಸಮಾರಂಭಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಹೊರಾಂಗಣದಲ್ಲಿ ಆಗುವ ಮದುವೆಗಳಿಗೆ 200 ಜನರ ಮಿತಿಯನ್ನು ವಿಧಿಸಲಾಗಿದೆ. ಒಳಾಂಗಣದಲ್ಲಿ ನಡೆಯುವಂತಹ ಮದುವೆಗಳಿಗೆ 100 ಜನರ ಮಿತಿ ವಿಧಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಮೊದಲು ಓದಿ: ಕರ್ನಾಟಕದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಕಠಿಣ ನಿಯಮಮೊದಲು ಓದಿ: ಕರ್ನಾಟಕದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಕಠಿಣ ನಿಯಮ

ಮದುವೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಹ ಎರಡು ಡೋಸ್ ಲಸಿಕೆ ಪೂರ್ಣಗೊಂಡಿರಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ.

100 people allowed indoor weddings 200 for outdoor weddings funeral 20 people allowed

ರಾಜ್ಯದಲ್ಲಿ ಸದ್ಯ ಮದುವೆ ಸೀಜನ್ ಆರಂಭವಾಗುತ್ತಿದ್ದು, ಹೆಚ್ಚಿನ ಜನ ಸೇರುವುದರಿಂದ ಹೆಚ್ಚಿನ ಜನ ಸೇರುತ್ತಾರೆ. ಈ ನಿಟ್ಟಿನಲ್ಲಿ ಮದುವೆಗಳ ಮೇಲೆ ಸರ್ಕಾರ ವಿಶೇಷ ನಿಗಾ ವಹಿಸಿ ನಿಯಂತ್ರಣಕ್ಕೆ ಸೂಚಿಸಿದೆ.

ದೇವಸ್ಥಾನಗಳಿಗೂ ನಿರ್ಬಂಧ:
ಇನ್ನು ದೇವಸ್ಥಾನಗಳಿಗೂ ಭಕ್ತರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ದೇವಸ್ಥಾನಗಳು, ಮಂದಿರ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಪೂಜೆ ಪುನಸ್ಕಾರ, ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಅಲ್ಲಿನ ಸೇವೆಗಳು ಎಂದಿನಂತೆ ನಡೆಯುತ್ತವೆ. ಆದರೆ, ಭಕ್ತರ ಪ್ರವೇಶಕ್ಕೆ ಮಾತ್ರ ಮಿತಿ ಇರಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದರು.

ಜಾತ್ರೆಗಳನ್ನು ನಡೆಸುವಂತಿಲ್ಲ:
ಜಾತ್ರೆ ಮತ್ತು ಉತ್ಸವಗಳನ್ನು ನಡೆಸಲು ನಿರ್ಬಂಧ ವಿಧಿಸಲಾಗಿದೆ. ಹೆಚ್ಚಿನ ಜನಜಂಗುಳಿ ಸೇರುವಂತಹ ಜಾತ್ರೆ ಮತ್ತುಉತ್ಸವಗಳನ್ನು ಈ ಕೂಡಲೇ ರದ್ದು ಮಾಡುವಂತೆ ಎಲ್ಲ ಜಿಲ್ಲೆಗಳಿಗೂ ಸೂಚಿಸಲಾಗಿದೆ. ಕೇವಲ ಸಾಂಪ್ರದಾಯಿಕ ಆಚರಣೆಗಳು ಮಾತ್ರ ನಡೆಯಬಹುದು. ಆದರೆ, ಜನ ಗುಂಪಾಗಿ ಉತ್ಸವಗಳನ್ನು ನಡೆಸುವುದು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

Recommended Video

ತಜ್ಞರ ಜೊತೆ ಮಹತ್ವದ ಸಭೆ ಮಾಡಲಿರುವ ಮುಖ್ಯ ಮಂತ್ರಿ! | Oneindia Kannada

English summary
Only 100 people allowed for indoor weddings, 200 for outdoor weddings, 20 people for funeral in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X