ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಪಿಎಲ್ ಕಾರ್ಡ್‌ದಾರರಿಗೆ ಮೇ 1ರಿಂದ ಪಡಿತರ ಹಂಚಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 17 : 'ಕರ್ನಾಟಕದಲ್ಲಿ ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೂ ಮೇ 1ರಿಂದ ಪಡಿತರ ಹಂಚಿಕೆ ಮಾಡಲಾಗುತ್ತದೆ. ಶೇ 91ರಷ್ಟು ಪಡಿತರ ಅಂಗಡಿಗಳಲ್ಲಿ ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಲಾಗಿದೆ" ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ. ಗೋಪಾಲಯ್ಯ ಹೇಳಿದರು.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, " ಪ್ರತಿ ಕೆಜಿಗೆ 15 ರೂ.ಗಳ ದರದಲ್ಲಿ 10 ಕೆಜಿ ಅಕ್ಕಿಯನ್ನು ಮೇ 1ರಿಂದ ಎಪಿಎಲ್ ಕಾರ್ಡ್ ಹೊಂದಿರುವವರಿಗೂ ವಿತರಣೆ ಮಾಡಲಾಗುತ್ತದೆ" ಎಂದರು.

 ಆಹಾರ ಕಿಟ್ಟಲ್ಲಿ ಪುತ್ತೂರಿನ ಹುಡುಗನಿಗೆ ಸಿಕ್ಕಿತ್ತು ಅಮೂಲ್ಯ ವಸ್ತು ಆಹಾರ ಕಿಟ್ಟಲ್ಲಿ ಪುತ್ತೂರಿನ ಹುಡುಗನಿಗೆ ಸಿಕ್ಕಿತ್ತು ಅಮೂಲ್ಯ ವಸ್ತು

"ಉಜ್ವಲ ಹಾಗೂ ಸಿಎಂ ಅನಿಲ ಭಾಗ್ಯ ಯೋಜನೆಯನ್ನು ಮುಂದಿನ ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ. ಶೇಕಡಾ 91ರಷ್ಟು ಪಡಿತರ ಅಂಗಡಿಗಳಲ್ಲಿ ಎರಡು ತಿಂಗಳುಗಳ ಪಡಿತರ ವಿತರಣೆಯನ್ನು ಈಗಾಗಲೇ ಮಾಡಲಾಗಿದೆ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿರುವ 1.9 ಕೋಟಿ ಅರ್ಜಿದಾರರಿಗೆ ಶನಿವಾರದಿಂದ 10 ಕೆಜಿ ಅಕ್ಕಿ ವಿತರಣೆ ಆಗಲಿದೆ" ಎಂದು ಮಾಹಿತಿ ನೀಡಿದರು.

ಒನ್ ಇಂಡಿಯಾ ಫಲಶ್ರುತಿ: ಬಡವರ ಮನೆ ತಲುಪಿದ ಆಹಾರ ಸಾಮಗ್ರಿಒನ್ ಇಂಡಿಯಾ ಫಲಶ್ರುತಿ: ಬಡವರ ಮನೆ ತಲುಪಿದ ಆಹಾರ ಸಾಮಗ್ರಿ

10 Kg Rice For APL Card Holders From May 1

"ಮುಂದಿನ ಮೇ ಹಾಗೂ ಜೂನ್ ತಿಂಗಳಿನಲ್ಲಿಯೂ ತಲಾ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಕಾಪಿ ಹಾಗೂ ಒಟಿಪಿ ಪಡೆದು ಕಾರ್ಡ್‌ಗೆ ಅರ್ಜಿ ಹಾಕಿದವರಿಗೆ ಪಡಿತರ ಹಂಚಿಕೆ ಮಾಡಲಾಗುತ್ತಿದೆ. 2.22 ಲಕ್ಷ ಜನರು ಹೊಸ ಕಾರ್ಡ್‌ ಪಡೆಯಲು ಅರ್ಜಿ ಹಾಕಿದ್ದಾರೆ" ಎಂದು ಸಚಿವ ಕೆ. ಗೋಪಾಲಯ್ಯ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ವ್ಯವಸ್ಥೆಮೈಸೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ವ್ಯವಸ್ಥೆ

English summary
Karnataka food and civil supplies minister K.Gopalaiah said that from May 1, 2020 APL card holders will get 10 kg rice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X