ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಯೂರು ಸಮೀಪ ರೈಲು ಸಂಚರಿಸುವಾಗ ಭೂ ಕುಸಿತ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್.17: ರೈಲು ಸಾಗುವ ವೇಳೆಯಲ್ಲಿಯೇ ರೈಲ್ವೆ ಟ್ರ್ಯಾಕ್ ಅಡಿ ಭೂ ಕುಸಿತ ಸಂಭವಿಸಿದ್ದು, ಕೂದಲೆಳೆಯಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ. ತರೀಕೆರೆ ಸಮೀಪದ ಹಳೆಯೂರು ಸಮೀಪ ಭಾನುವಾರ(ಸೆ.16)ಸಂಜೆ ಈ ಘಟನೆ ಸಂಭವಿಸಿದೆ.

ರೈಲು ಸಂಚರಿಸುವ ವೇಳೆಯೇ ಸುಮಾರು ಹತ್ತು ಅಡಿ ಭೂಮಿ ಕುಸಿದಿರುವುದು ಬೆಳಕಿಗೆ ಬಂದಿದೆ. ಭೂ ಕುಸಿತ ಉಂಟಾದ ಪರಿಣಾಮ ಕೆಲಕಾಲ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದರು.

ಭೂ ಕುಸಿತ: 1 ತಿಂಗಳವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ಅನುಮಾನಭೂ ಕುಸಿತ: 1 ತಿಂಗಳವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ಅನುಮಾನ

ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಎನ್.ಆರ್.ಪುರ ತಾಲೂಕಿನ ಖಾಂಡ್ಯ ಬಳಿಯ ಬಿದರೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿತ್ತು.

10 feet of land has collapse during the train is moving.

ಕಳೆದ ತಿಂಗಳು ಮಳೆಯ ನಂತರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತಲೇ ಇತ್ತು. ಇದರಿಂದಾಗಿ ಜನ ಯಾವಾಗಾ ಏನಾಗುತ್ತೋ ಅನ್ನೋ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದರು.

 ರಣಗಾಳಿಗೆ ಬೆಚ್ಚಿಬಿದ್ದ ಮಲೆನಾಡಿಗರು, ಕಾಫಿನಾಡಲ್ಲಿ ಹೆಚ್ಚಾಯ್ತು ಭೂ ಕುಸಿತ ರಣಗಾಳಿಗೆ ಬೆಚ್ಚಿಬಿದ್ದ ಮಲೆನಾಡಿಗರು, ಕಾಫಿನಾಡಲ್ಲಿ ಹೆಚ್ಚಾಯ್ತು ಭೂ ಕುಸಿತ

ಅಷ್ಟೇ ಅಲ್ಲ, ಬಿದಿರೆ ಗ್ರಾಮದ ಸತೀಶ್ ಭಟ್ ಎಂಬವರ ಕಾಫಿ ತೋಟದಲ್ಲಿ ಏಕಾಏಕಿ ಭೂ ಕುಸಿತವುಂಟಾಗಿದ್ದು, ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿದ್ದವು.

ಮಂಗಳೂರು- ಬೆಂಗಳೂರು ರೈಲ್ವೆ ಮಾರ್ಗದಲ್ಲಿ 17 ಕಡೆ ಗುಡ್ಡ ಕುಸಿತ ಮಂಗಳೂರು- ಬೆಂಗಳೂರು ರೈಲ್ವೆ ಮಾರ್ಗದಲ್ಲಿ 17 ಕಡೆ ಗುಡ್ಡ ಕುಸಿತ

ಭೂ ಕುಸಿತದಿಂದಾಗಿ ರೈತ ಕಂಗಾಲಾಗಿ ಹೋಗಿದ್ದು, ಮತ್ತೆ ಎಲ್ಲಿ ಭೂ ಕುಸಿತವಾಗುತ್ತದೆಯೋ ಎನ್ನುವ ಭೀತಿ ಎದುರಿಸುತ್ತಿದ್ದರು. ಇಷ್ಟು ದಿನ ಜಿಲ್ಲೆಯಲ್ಲಿ ಗದ್ದೆ , ತೋಟ, ರಸ್ತೆಯಲ್ಲಿ ಬಿರುಕು ಬಿಟ್ಟು ಭೂ ಕುಸಿತ ಉಂಟಾಗುತ್ತಿತ್ತು. ಇದೀಗ ರೈಲ್ವೆ ಟ್ರ್ಯಾಕ್ ಅಡಿ ಕುಸಿತ ಸಂಭವಿಸಿರುವುದು ಆತಂಕಕ್ಕೆ ಎಡೆ ಮಾಡಿದೆ.

English summary
It has come to light that about 10 feet of land has collapse during the train is moving. The incident took place on Sunday evening (16th) near haleyuru in Tarikere in Chikmagalur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X