ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕೇವಲ 4 ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಜುಲೈ 22: ಕರ್ನಾಟಕದಲ್ಲಿ ಕೇವಲ 4 ತಿಂಗಳುಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.

ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ಕೊರೊನಾ ಎರಡನೇ ಅಲೆಯಲ್ಲಿ ಸುಮಾರು 2 ಲಕ್ಷ ಮಕ್ಕಳಿಗೆ ಈಗಾಗಲೇ ಸೋಂಕು ತಗುಲಿದೆ ಎನ್ನುವ ವಿಚಾರ ಆತಂಕವನ್ನು ಹೆಚ್ಚಿಸಿದೆ.

ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆ ಪ್ರಭಾವ; ಏನೇನು ಮಾಡಬೇಕಿದೆ?ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆ ಪ್ರಭಾವ; ಏನೇನು ಮಾಡಬೇಕಿದೆ?

ಪ್ರಾಥಮಿಕ ಶಾಲೆಗಳನ್ನು ಪುನರಾಂಭಿಸಲು ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕ ಬಲರಾಮ್ ಭಾರ್ಗವ್ ಸೂಚನೆ ನೀಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

 ಐಸಿಎಂಆರ್ ವರದಿ

ಐಸಿಎಂಆರ್ ವರದಿ

ಐಸಿಎಂಆರ್ ರಾಷ್ಟ್ರೀಯ ಸಮೀಕ್ಷೆ ನೀಡಿರುವ ವರದಿಯಲ್ಲಿ ಮಾರ್ಚ್ 1 ರಿಂದ ಜೂನ್ 29ರವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ 18,91,775 ಮಂದಿ ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ 1,88,612(ಶೇ.9.97)ರಷ್ಟು ಮಕ್ಕಳು ಕರ್ನಾಟಕದವರಾಗಿದ್ದಾರೆ.

 ಶೇ.8ರಷ್ಟು ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ

ಶೇ.8ರಷ್ಟು ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ

ಮೊದಲ ಅಲೆಯಲ್ಲಿ ಒಟ್ಟು ಸೋಂಕಿತರಲ್ಲಿ ಶೇ.8ರಷ್ಟು ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಆದರೆ, ಎರಡನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ತುತ್ತಾದ ಪ್ರಮಾಣ ಶೇ.2ರಷ್ಟು ಹೆಚ್ಚಾಗಿತ್ತು ಎಂದು ಮಕ್ಕಳ ತಜ್ಞ ಡಾ. ಜೆಟಿ ಶ್ರೀಕಾಂತ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

 ಆರೋಗ್ಯ ಇಲಾಖೆಯ ಮಾಹಿತಿ

ಆರೋಗ್ಯ ಇಲಾಖೆಯ ಮಾಹಿತಿ

ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಫೆಬ್ರವರಿ 28ರವರೆಗೆ 81,596 ಮಕ್ಕಳು ಸೋಂಕಿಗೆ ಒಳಗಾಗಿದ್ದು, 118 ಮಕ್ಕಳು ಮೃತಪಟ್ಟಿದ್ದರು. ಐಸಿಎಂಆರ್ ರಾಷ್ಟ್ರೀಯ ಸಮೀಕ್ಷೆ ಪ್ರಕಾರ, 6-9 ವಯೋಮಾನದ 2,892 ಮಕ್ಕಳಲ್ಲಿ ಶೇ.57.2 ಮತ್ತು 10-17 ವಯೋಮಾನದ 2,799 ಮಕ್ಕಳಲ್ಲಿ ಶೇ.61.6ರಷ್ಟು ಸೋಂಕು ಪತ್ತೆಯಾಗಿರುವುದಾಗಿ ಕಂಡುಬಂದಿದೆ.

 ರಾಜ್ಯದಲ್ಲಿ 1,212 ಮಕ್ಕಳು ಸಾವು

ರಾಜ್ಯದಲ್ಲಿ 1,212 ಮಕ್ಕಳು ಸಾವು

ರಾಜ್ಯದಲ್ಲಿ ಇದುವರೆಗೆ ಕೋವಿಡ್‌ನಿಂದ 1,212 ಮಕ್ಕಳು ಸಾವನ್ನಪ್ಪಿದ್ದಾರೆ, ಹಾಗೆಯೇ ಆಗಸ್ಟ್‌ನಿಂದ ಕೋವಿಡ್ ಮೂರನೇ ಅಲೆ ಹರಡುವ ಸಾಧ್ಯತೆಗಳಿದ್ದು, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.

English summary
A day after the Indian Council of Medical Research (ICMR) Director-General Balram Bhargava suggested reopening primary schools after ring immunisation, the state health department's data revealed that as many as 1.88 lakh kids were infected in the past four months accounting for 10 per cent of the total Covid infections reported from March to June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X