ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ 14 ತಿಂಗಳಲ್ಲಿ ಆಂಬ್ಯುಲೆನ್ಸ್‌ಗಳಲ್ಲಿ 1700 ಶಿಶುಗಳ ಜನನ

|
Google Oneindia Kannada News

ಬೆಂಗಳೂರು, ಮಾರ್ಚ್ 02: ರಾಜ್ಯ ಸರ್ಕಾರದ ಆರೋಗ್ಯ ಕವಚ ಆಂಬ್ಯುಲೆನ್ಸ್‌ನಲ್ಲಿ ಕಳೆದ 14 ತಿಂಗಳುಗಳಲ್ಲಿ 1,700 ಶಿಶುಗಳ ಜನನವಾಗಿದೆ.

ಪ್ರತಿ ತಿಂಗಳು ಆಂಬ್ಯುಲೆನ್ಸ್‌ನಲ್ಲಿ ಕನಿಷ್ಠವೆಂದರೂ ಸುಮಾರು 150 ಶಿಶುಗಳ ಜನನವಾಗುತ್ತದೆ, ನಮಗೆ ಬರುವ ಮೊಬೈಲ್ ಕರೆಗಳಲ್ಲಿ ಶೇ.35 ರಿಂದ 40ರಷ್ಟು ಗರ್ಭಿಣಿಯರಿಗೆ ಸಂಬಂಧಿಸಿದ ಕರೆಗಳಾಗಿರುತ್ತವೆ.

10ನೇ ತರಗತಿ ಪರೀಕ್ಷೆ ವೇಳೆ ಮಗುವಿಗೆ ಜನ್ಮ ನೀಡಿದ ಮಹಿಳೆ 10ನೇ ತರಗತಿ ಪರೀಕ್ಷೆ ವೇಳೆ ಮಗುವಿಗೆ ಜನ್ಮ ನೀಡಿದ ಮಹಿಳೆ

'ಕೇವಲ ಹಳ್ಳಿ ಪ್ರದೇಶ, ಆಸ್ಪತ್ರೆಗಳು ತುಂಬಾ ದೂರವಿರುವ ಸಂದರ್ಭ ಮಾತ್ರವಲ್ಲದೆ, ನಗರಗಳಲ್ಲಿ ರಸ್ತೆ ಹಾಳಾಗಿರುವುದು, ಟ್ರಾಫಿಕ್‌ನಿಂದಾಗಿಯೂ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾಗುವ ಪ್ರಕರಣಗಳು ಹೆಚ್ಚಿವೆ' ಎಂದು 108 ಪ್ರೋಗ್ರಾಮ್ ಮ್ಯಾನೇಜರ್ ಮೊಹಮ್ಮದ್ ಆಸಿಫ್ ಹೇಳಿದ್ದಾರೆ.

1,700 Babies Delivered In The Last 14 Months On The Move 108 Ambulances

ಆಂಬ್ಯುಲೆನ್ಸ್‌ಗಳಲ್ಲಿ ಸ್ಟಾಫ್ ನರ್ಸ್ ಇರಲೇಬೇಕು, ಅವನು ಅಥವಾ ಅವಳು ಜನರಲ್ ನರ್ಸಿಂಗ್ ಮಿಡ್ ವೈಫರಿ ಕೋರ್ಸ್ ಮಾಡಿರಲೇಬೇಕು.

ಕರ್ನಾಟಕದಲ್ಲಿ ಅಂತಹ 1 ಸಾವಿರ ನರ್ಸ್‌ಗಳಿದ್ದಾರೆ. ಅದರಲ್ಲಿ ಪುರುಷರೇ ಹೆಚ್ಚು. ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಬಳ್ಳಾರಿ, ರಾಯಚೂರು, ಕಲಬುರಗಿ ಮಾರ್ಗದಲ್ಲಿ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಪ್ರಕರಣಗಳು ಹೆಚ್ಚಿವೆ.

ಆಂಬುಲೆನ್ಸ್‌ನಲ್ಲಿ ಹೆರಿಗೆ: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಆಂಬುಲೆನ್ಸ್‌ನಲ್ಲಿ ಹೆರಿಗೆ: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಅವರು ಹೆರಿಗೆ ನೋವು ಹೆಚ್ಚಾದ ಬಳಿಕ ಕರೆ ಮಾಡುತ್ತಾರೆ, ಹೀಗಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆಯೇ ಹೆರಿಗೆಯಾಗಿಬಿಡುತ್ತದೆ. ಆದರೆ ತಾಯಿ ಹಾಗೂ ಶಿಶುವಿಗೆ ಯಾವುದೇ ತೊಂದರೆಯಾಗಿರುವ ಘಟನೆ ಇಲ್ಲಿಯವರೆಗೂ ನಡೆದಿಲ್ಲ.

ಇಎಂಟಿ,ಬೆಂಗಳೂರು ಯೋಗೇಶ್ ಮಾತನಾಡಿ, 'ನನಗೆ ಘಟನೆಯೊಂದು ಇನ್ನೂ ನೆನಪಿದೆ, ನೇಪಾಳದ ದಂಪತಿ, ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ, ಅವರಿಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ ಆದರೆ ಏನು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ಸಮಯ ಹಿಡಿಯಿತು'.

Recommended Video

ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ ವಿಚಾರ-ಡಿಕೆಶಿ -ಸಿದ್ದು ಜೊತೆ ಮಧು ಯಕ್ಷಿ ಗೌಡ ಪ್ರತ್ಯೇಕ ಸಮಾಲೋಚನೆ | Oneindia Kannada

'ಮೊದಲು ವಿಳಾಸವನ್ನು ಪಡೆದು ಅಲ್ಲಿಗೆ ಹೋದೆವು ಅಷ್ಟರಲ್ಲಾಗಲೇ ಅವರಿಗೆ ವಿಪರೀತ ನೋವು ಶುರುವಾಗಿತ್ತು, ಆಸ್ಪತ್ರೆಗೆ ತೆರಳಲು 40 ನಿಮಿಷಗಳ ಬೇಕಾಗಿತ್ತು. ಬಳಿಕ ಆಶಾ ಕಾರ್ಯಕರ್ತೆಯರ ಸಹಾಯ ಪಡೆದು ಆಂಬ್ಯುಲೆನ್ಸ್‌ನಲ್ಲೇ ಹರಿಗೆ ಮಾಡಿಸಲಾಯಿತು, ಶಿಶುಗಳ ಮರಣ ಪ್ರಮಾಣವೂ ಕಡಿಮೆಯಾಗಿದೆ 'ಎಂದರು.

English summary
In the last 14 months, 1,740 babies have been delivered in the State-run 108 Arogya Kavacha emergency response ambulances. This means at least four babies are delivered every day in the ambulances.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X