ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking news; ಕಲಬುರಗಿ ಡಿಸಿ ಕಚೇರಿ ಮುಂದೆ ಮಹಿಳೆ ಬಂಧನ

|
Google Oneindia Kannada News

ಕಲಬುರಗಿ, ಮೇ 04; ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನುಚಿತವಾಗಿ ವರ್ತಿಸಿದ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣವೊಂದರ ವಿಚಾರಣೆ ನಡೆಸದಂತೆ ಕಲಬುರಗಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿಗಳಿಗೆ ನೋಟೀಸ್ ನೀಡಿದ್ದಲ್ಲದೆ, ಕಚೇರಿ ಮುಂದೆ ಅನುಚಿತವಾಗಿ ವರ್ತಿಸಿ ರಂಪಾಟ ಮಾಡಿದ ಮಹಿಳೆಯನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದರು.

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬಂಧಿತ ಮಹಿಳೆಯನ್ನು ಸಪ್ನಾ ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ರಾಜಶೇಖರ ಮಂಗಲಗಿ. ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಅಧಿನಿಯಮ-2007ರ ಕಲಂ 16ರ ಅಡಿ ಸಲ್ಲಿಸಲಾಗಿರುವ ಮೇಲ್ಮನವಿಗೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ದಂಡಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಚಾರಣೆಗೆ ಮಹಿಳೆ ಹಾಜರಾಗಿದ್ದರು.

9 ವರ್ಷವಾದರೂ ರಚನೆಯಾಗದ ಸಿಎಸ್‌ಬಿ: ಐಪಿಎಸ್, ಐಎಎಸ್ ವರ್ಗಾವಣೆಗಿಲ್ಲ ಬ್ರೇಕ್..! 9 ವರ್ಷವಾದರೂ ರಚನೆಯಾಗದ ಸಿಎಸ್‌ಬಿ: ಐಪಿಎಸ್, ಐಎಎಸ್ ವರ್ಗಾವಣೆಗಿಲ್ಲ ಬ್ರೇಕ್..!

Woman Arrested In Kalaburagi DC Office

ಈ ಸಂದರ್ಭದಲ್ಲಿ 30 ದಿನಗಳ ಕಾಲ ಮೇಲ್ಮನವಿಯ ವಿಚಾರಣೆ ಮಾಡಬಾರದು ಹಾಗೂ ಸದರಿ ಪ್ರಕರಣವನ್ನು ಬೇರೊಂದು ಪ್ರಾಧಿಕಾರಕ್ಕೆ ವರ್ಗಾಯಿಸಬೇಕೆಂದು ಜಿಲ್ಲಾ ದಂಡಾಧಿಕಾರಿಗಳಿಗೆ ನೋಟೀಸ್ ನೀಡಿದ್ದರು ಜೊತೆಗೆ ನನ್ನ ವಿರುದ್ಧ ತೀರ್ಪು ನೀಡುತ್ತೀರಿ ಎಂದೆಲ್ಲಾ ಮಹಿಳೆ ಕಚೇರಿ ಮುಂದೆ ರಂಪಾಟ ಮಾಡಿದ್ದರಿಂದ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.

ಬಳ್ಳಾರಿ: ನಂದಿನಿ ಕೆ.ಆರ್. ಸೇರಿದಂತೆ 3 ಐಎಎಸ್ ಅಧಿಕಾರಿಗಳಿಗೆ ಬೀಳ್ಕೊಡುಗೆಬಳ್ಳಾರಿ: ನಂದಿನಿ ಕೆ.ಆರ್. ಸೇರಿದಂತೆ 3 ಐಎಎಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ

ಪ್ರಕರಣದ ಹಿನ್ನಲೆ: ಶಿವಶರಣಪ್ಪ ತಂದೆ ಶಿವಲಿಂಗಪ್ಪ ಮಂಗಲಗಿ ತನ್ನ ಮಗ ರಾಜಶೇಖರ ಮಂಗಲಗಿ ಹಾಗೂ ಆತನ ಪತ್ನಿ ಸಪ್ನಾ ತನ್ನನ್ನು ಹಾಗೂ ತನ್ನ ಪತ್ನಿಯನ್ನು ಪೋಷಣೆ ಮಾಡುತ್ತಿಲ್ಲ. ಆಳಂದ ರಸ್ತೆಯ ವಿಜಯ ನಗರ ಕಾಲೋನಿಯಲ್ಲಿ ಇರುವ ಸ್ವ-ಅರ್ಜಿತ ಮನೆಯನ್ನು ಸೊಸೆ ಮತ್ತು ಮಗ ಕಬ್ಜಾ ಮಾಡಿಕೊಂಡಿದ್ದು, ತನಗೆ ವಹಿಸಿಕೊಡುವಂತೆ ಹಿರಿಯ ನಾಗರಿಕರ ನಿರ್ವಹಣಾ ಮಂಡಳಿಯ ಅಧ್ಯಕ್ಷರೂ ಆಗಿರುವ ಕಲಬುರಗಿ ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಸಪ್ನಾ ಮತ್ತು ರಾಜಶೇಖರ ಮಂಗಲಗಿ ವಿಚ್ಛೇದನ ಪಡೆದಿರುವ ಕಾರಣ ಕಲಬುರಗಿ ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು ಅನಧಿಕೃತವಾಗಿ ಕಬ್ಜಾ ಮಾಡಿರುವ ಮನೆಯನ್ನು ಶಿವಲಿಂಗಪ್ಪ ಮಂಗಲಗಿ ಅವರಿಗೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದರು.

ಆದೇಶ ನೀಡಿದ್ದರೂ ಸಹ ಮನೆಯನ್ನು ತನ್ನ ಅತ್ತೆಯಾದ ಪುಷ್ಪಾವತಿ ಅವರಿಗೆ ವಹಿಸದೇ ಅನಧಿಕೃತವಾಗಿ ತಾನೇ ವಾಸವಾಗಿದ್ದಲ್ಲದೆ, ಕಲಬುರಗಿ ಉಪ ವಿಭಾಗೀಯ ದಂಡಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರ ಆದೇಶದ ವಿರುದ್ಧ ಜಿಲ್ಲಾ ದಂಡಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು.

English summary
Woman arrested in-front of Kalaburagi deputy commissioner office. Police probing the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X