ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲಿಕಾರ್ಜುನ್ ಖೂಬಾಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಬೀದರ್, ಏಪ್ರಿಲ್ 02 : ಬಸವಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಬಿಜೆಪಿ ಸೇರಿದ ತಕ್ಷಣ ಟಿಕೆಟ್ ಸಿಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಹಲವು ಆಕಾಂಕ್ಷಿಗಳಿದ್ದಾರೆ. ಮಾಜಿ ಸಚಿವ ಬಸವರಾಜ್ ಪಾಟೀಲ್ ಅಟೂರ್, ಮಾಜಿ ಶಾಸಕ ಮಾರುತಿರಾವ್ ಮೂಳೆ, ಸಂಜಯ್ ಪಟವಾರಿ, ಯುವ ಮುಖಂಡ ಸುನಿಲ್ ಪಾಟೀಲ್ ಹಲವಾರು ಜನರು ಟಿಕೆಟ್ ಆಕಾಂಕ್ಷಿಗಳಪಟ್ಟಿಯಲ್ಲಿದ್ದಾರೆ.

ಜೆಡಿಎಸ್‌ ತೊರೆದ ಮಲ್ಲಿಕಾರ್ಜುನ ಖೂಬಾ, ಬಿಜೆಪಿಗೆ ಸೇರ್ಪಡೆಜೆಡಿಎಸ್‌ ತೊರೆದ ಮಲ್ಲಿಕಾರ್ಜುನ ಖೂಬಾ, ಬಿಜೆಪಿಗೆ ಸೇರ್ಪಡೆ

ಈ ಎಲ್ಲಾ ನಾಯಕರು ಬಿಜೆಪಿ ಪ್ರಭಲ ನಾಯಕರುಗಳೇ ಆಗಿದ್ದರಿಂದ ಜೆಡಿಎಸ್ ತೊರೆದು ಬಿಜೆಪಿ ಸೇರುವ ಮಲ್ಲಿಕಾರ್ಜುನ್ ಖೂಬಾ ಅವರಿಗೆ ಟಿಕೆಟ್ ಸಿಗುವುದು ಮಾತ್ರ ಕಷ್ಟ ಸಾಧ್ಯ. ಖೂಬಾ ಇವರು ಬಿಜೆಪಿ ಸೇರುವುದು ಪಕ್ಷದ ಕಾರ್ಯಕರ್ತರಿಗೆ ಕೊಂಚ ಅಸಮಾಧಾನ ಉಂಟುಮಾಡಿದೆ.

Will Mallikarjuna Kuba get BJP ticket in Basavakalyan

ಈ ಕ್ಷೇತ್ರದಲ್ಲಿ ಬಿಜೆಪಿಗೆ ಬೆಳೆಸಿ, ಉಳಿಸಿದ ಕೀರ್ತಿ ನಮಗೆ ಸಲ್ಲಬೇಕು ಅದಲ್ಲದೆ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರಿಗಳಿಗೆ ಟಿಕೆಟ್ ನೀಡಿದರೆ ನಾವೇನು ಮಾಡಬೇಕು? ಎಂದು ಕಾರ್ಯಕರ್ತರು ಪ್ರಶ್ನೆ ಮುಂದಿಟ್ಟಿದ್ದಾರೆ.

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಎರಡೂ ಬಾರಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ಖೂಬಾ ಒಬ್ಬ ಅಧಿಕಾರ ದಾಹಿ ಮನುಷ್ಯ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾನೆ. ಅದಲ್ಲದೆ ರಾಜ್ಯ ಸಭಾ ಚುನಾವಣೆಯಲ್ಲಿ ಮತ ನೀಡಲು 5 ಕೋಟಿ ಡಿಮ್ಯಾಂಡ್ ಮಾಡಿದ್ದ ಆರೋಪ ಅವರ ಮೇಲೆ ಇದ್ದು ಇನ್ನು ಸಿಬಿಐ ತನಿಖೆ ನಡೆಸುತ್ತಿದೆ ಎಂದು ಕಾರ್ಯರ್ತರು ಆರೋಪ ಮಾಡಿದ್ದಾರೆ.

ಕ್ಷೇತ್ರ ಪರಿಚಯ : ಬಸವ ಕಲ್ಯಾಣದಲ್ಲಿ ಗೆಲ್ಲುವವರು ಯಾರು?ಕ್ಷೇತ್ರ ಪರಿಚಯ : ಬಸವ ಕಲ್ಯಾಣದಲ್ಲಿ ಗೆಲ್ಲುವವರು ಯಾರು?

ಕಳೆದ ಬಾರಿ ಸೋಲುವ ಸಂದರ್ಭದಲ್ಲಿ ಗೆದ್ದ ಖೂಬಾ ಅವರಿಗೆ ಬಿಜೆಪಿ ಮೇಲೆ ಇಷ್ಟೂಂದು ಒಲವು ಏಕೆ?, ಬಿಜೆಪಿಯ ನಾಯಕರು ಅವರ ಬಗ್ಗೆ ಏಕೆ ಪ್ರೀತಿ ತೋರಿಸುತ್ತಿದ್ದಾರೆ? ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

ಟಿಕೆಟ್ ಕೈ ತಪ್ಪಿದರೆ ಬಸವರಾಜ್ ಪಾಟೀಲ್ ಅಟೂರ, ಮಾರುತಿರಾವ್ ಮೂಳೆ ಅವರು ಸುಮ್ಮನಿರುವುದಿಲ್ಲ. ಅವರು ಪ್ರಬಲ ಅಭ್ಯರ್ಥಿಗಳಾಗಿದ್ದು ಸ್ವತಂತ್ರ ಪಕ್ಷದಿಂದ ಗೆಲ್ಲುವ ಭರವಸೆ ಅವರಿಗಿದೆ ಎನ್ನುತ್ತಿದ್ದಾರೆ ಕಾರ್ಯಕರ್ತರು.

English summary
Basavakalyan JD(S) MLA Mallikarjuna Kuba resigned party primary membership. He will join BJP soon and he is aspirant for BJP ticket. More than 3 leaders in the race for Basavakalyan ticket for Karnataka assembly elections 2018. Who will get ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X