ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ : ಬಾನಂಗಳದಲ್ಲಿ ಮತದಾನ ಜಾಗೃತಿ ಅಭಿಯಾನ

|
Google Oneindia Kannada News

ಕಲಬುರಗಿ, ಮಾರ್ಚ್ 26 : ಕಲಬುರಗಿ ಸ್ವೀಪ್ ಸಮಿತಿ ವತಿಯಿಂದ ವಿನೂತನವಾಗಿ ಪ್ಯಾರಾ ಮೋಟರಿಂಗ್ ಮೂಲಕ ಕಲಬುರಗಿ ನಗರದ ಬಾನಂಗಳದಲ್ಲಿ ಹಾರಾಡಿ ಮತದಾನದ ಜಾಗೃತಿ ಮೂಡಿಲಾಯಿತು. ಏಪ್ರಿಲ್ 23 ರಂದು ಮತದಾನ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾಧವ್ ಅವರು ಸ್ವತ: ಪ್ಯಾರಾ ಮೋಟರಿಂಗ್ ಕೈಗೊಳ್ಳುವ ಮೂಲಕ ನಗರದ ಎನ್.ವಿ. ಮೈದಾನದಲ್ಲಿ ಮಂಗಳವಾರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಪ್ಪ-ಅಮ್ಮಾ ತಪ್ಪದೇ ಮತದಾನ ಮಾಡಿ, ಮಕ್ಕಳ ಪತ್ರಅಪ್ಪ-ಅಮ್ಮಾ ತಪ್ಪದೇ ಮತದಾನ ಮಾಡಿ, ಮಕ್ಕಳ ಪತ್ರ

Voter awareness campaign through paramotoring

ಪ್ಯಾರಾ ಮೋಟರಿಂಗ್ ಮೂಲಕ ನಗರದ ಬಾನಂಗಳದಲ್ಲಿ ಹಾರಾಡಿ ಪ್ರಮುಖ ವೃತ್ತ ಮತ್ತು ಸ್ಥಳಗಳಲ್ಲಿ ಬಾನಿನಿಂದಲೇ ಕರಪತ್ರಗಳನ್ನು ಹಾರಿ ಬಿಟ್ಟು ಮತದಾರರಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಲಾಯಿತು.

ಧಾರವಾಡ : ಹಾಲಿನ ಪ್ಯಾಕೆಟ್ ಮೂಲಕ ಮತದಾನದ ಜಾಗೃತಿಧಾರವಾಡ : ಹಾಲಿನ ಪ್ಯಾಕೆಟ್ ಮೂಲಕ ಮತದಾನದ ಜಾಗೃತಿ

Voter awareness campaign through paramotoring

ಕಲಬುರಗಿ ಜಿಲ್ಲೆಯ ಜೇವರ್ಗಿ, ಸೇಡಂ, ವಾಡಿ, ಚಿತ್ತಾಪುರ ಪಟ್ಟಣಗಳಲ್ಲಿಯೂ ಸಹ ಪ್ಯಾರಾ ಮೋಟರಿಂಗ್ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಪಟ್ಟಣ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ಪ್ಯಾರಾ ಮೋಟರಿಂಗ್ ಬಾನಿನಲ್ಲಿ ಅತೀ ಹತ್ತಿರದಿಂದ ಸಂಚರಿಸಿದಾಗ ಜನರು ಆಕರ್ಷಿತರಾದರು.

ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್, ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಪಿ. ರಾಜಾ, ಮಹಾನಗರ ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಲಬುರಗಿ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯಿಂದ ಡಾ.ಉಮೇಶ್ ಜಾಧವ್ ಕಣದಲ್ಲಿದ್ದಾರೆ.

English summary
Kalaburagi Systematic Voter's Education and Electoral Participation (SVEEP) conducted voting awareness campaign by paramotoring. Voting for 2019 Lok sabha elections will be held on April 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X