ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: ಚಂದಾಪೂರ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಫೆಬ್ರವರಿ 22 : ಜನ ಓಡಾಡೋ ರಸ್ತೆಯಲ್ಲಿ ಹುಲಿ ಓಡಾಡುತ್ತಿದ್ದರೆ ಯಾರಾದರೂ ಬೆವತು ಹೋಗುತ್ತಾರೆ. ಅಂಥಹದರಲ್ಲಿ ನಟ್ಟ ನಡುರಾತ್ರಿ ಚಿಂಚೋಳಿ ತಾಲೂಕಿನ ಚಂದಾಪುರ ಅರಣ್ಯ ಪ್ರದೇಶದ ಹತ್ತಿರದಲ್ಲಿರುವ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದೆ.

ತಡರಾತ್ರಿ ಗ್ರಾಮದ ಹೊರವಲಯದಲ್ಲಿ ಹುಲಿ ಓಡಾಡುತ್ತಿದ್ದುದನ್ನು ಕೆಲವರು ಕಂಡಿದ್ದಾರೆ. ಅದರ ಫೋಟೋ ತೆಗೆದು, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಹುಲಿ ಕಂಡೋರಷ್ಟೇ ಅಲ್ಲದೆ, ಫೋಟೋ ನೋಡಿದೋರು ಕೂಡ ಹುಲಿ ಇದೆ ಅಂತ ಭಯಗೊಂಡು ಮನೆ ಬಿಟ್ಟು ಆಚೆ ಬಂದಿಲ್ಲ. ರಾತ್ರಿ ಇಡೀ ಸುತ್ತಮುತ್ತಲ ಗ್ರಾಮಸ್ಥರು ಮನೆಗೆ ಬೀಗ ಹಾಕಿಕೊಂಡು ಕಾಲ ಕಳೆದಿದ್ದಾರೆ.

ಇನ್ನೂ, ಹುಲಿ ಪ್ರತ್ಯಕ್ಷವಾಗಿದ್ದರ ಬಗ್ಗೆ ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಬೆಳಗಿನ ಜಾವದವರೆಗೆ ಚಿಂಚೋಳಿ-ಚಂದಾಪುರ ರಸ್ತೆ ಬಂದ್‌ ಮಾಡಿದ್ದರು. ಆದರೆ, ಅವರಿಗೆ ಎಲ್ಲೂ ಹುಲಿ ಕಾಣಿಸಿಕೊಂಡಿಲ್ಲ.

Tiger spotted near Chandapura forest

'ಹುಲಿ ಪ್ರತ್ಯಕ್ಷ ಕೇವಲ ವದಂತಿ'
ಇದಾದ ಬಳಿಕ ಹುಲಿ ಕಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ಚಿಂಚೋಳಿ ಆರ್​ಎಫ್​ಒ ಸುನೀಲ್ ಕುಮಾರ್, ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು ಕೇವಲ ವದಂತಿ. ಚಿಂಚೋಳಿ-ಚಂದಾಪುರ ರಸ್ತೆಯ ಜಬ್ಬಾರ್‌ ಪೆಟ್ರೋಲ್‌ಬಂಕ್ ಬಳಿ ಹುಲಿ ಪ್ರತ್ಯಕ್ಷವಾಗಿದೆ ಎಂದು ಮಾಹಿತಿ ಬಂದಿತ್ತು.

ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹುಲಿ‌ ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಒಂದು ವೇಳೆ ಅಲ್ಲಿ ಹುಲಿ ಓಡಾಡಿದ್ದರೆ ಹೆಜ್ಜೆ ಗುರುತು ಇರುತ್ತಿತ್ತು. ಬೇರೆ ಯಾವುದೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗಾಗಿ ಸಾರ್ವಜನಿಕರು ಭಯ‌ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

English summary
Tiger spotted in Chandapura forest in chincholli taluk of Kalaburagi district. Villagers were captured photographs and video and uploaded in social media. But range Forest officer Sunil kumar denied that there were no tiger existing in Chandapura forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X