ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಲನ್ನು ಕೆತ್ತಿ ಶಿಲೆ ಮಾಡುವವರ ಬದುಕು ಕಷ್ಟದಲ್ಲಿದೆ!

|
Google Oneindia Kannada News

ಕಲಬುರಗಿ, ಏಪ್ರಿಲ್ 10 : ಇವರು ಎಲ್ಲಿಯವರು ಎಂದು ಸ್ಥಳೀಯರಿಗೆ ಗೊತ್ತಿಲ್ಲ. ಕಲ್ಲಿನಲ್ಲಿ ಗೃಹೋಪಯೋಗಿ ಸಾಮಾನುಗಳನ್ನು ಕೆತ್ತನೆ‌ ಮಾಡುವ ಇವರು ಅಲೆಮಾರಿಗಳು. ಕೆತ್ತನೆ ಮಾರಾಟದಿಂದ ಬರುವ ಅಲ್ಪ ಹಣದಲ್ಲಿ ಬದುಕು ಸಾಗಿಸುವ ಕಷ್ಟದ ಜೀವಿಗಳು.

ಕೊರೊನಾ ಹರಡದಂತೆ ನಿಯಂತ್ರಿಸಲು ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಲಾಕ್ ಡೌನ್ ವೇಳೆ ಈ ಅಲೆಮಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆತ್ತನೆಗಳನ್ನು ಕೊಳ್ಳುಲು ಜನರಿಲ್ಲ. ಅದನ್ನು ಹೋತ್ತು ಬೇರೆ ಕಡೆ ಹೋಗಿ ಮಾರಾಟ ಮಾಡಲು ಸಾಧ್ಯವಿಲ್ಲ.

21 ದಿನದ ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ 21 ದಿನದ ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ

ಲಾಕ್ ಡೌನ್ ಪರಿಣಾಮದಿಂದಾಗಿ ಬರುವ ಆದಾಯಕ್ಕೂ ಕತ್ತರಿ ಬಿದ್ದಿದೆ. ಇಂತಹ ಅಲೆಮಾರಿಗಳ ನೆರವಿಗೆ ತಹಶೀಲ್ದಾರ್ ಬಂದಿದ್ದಾರೆ. ಇದು ಕಲಬುರಗಿ ಜಿಲ್ಲೆಯ ಶಹಾಬಾದ ತಹಶೀಲ್ದಾರ್ ಸುರೇಶ ವರ್ಮಾ ಅವರ ಕಾರ್ಯ ವೈಖರಿ.

 ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ

Tahsildar Distributes Grocery For Migrant Workers

ಶುಕ್ರವಾರ ಸುರೇಶ ವರ್ಮಾ ಪಟ್ಟಣದ ಬಸವೇಶ್ವರ ಚೌಕ್, ಜೇವರ್ಗಿ ರಸ್ತೆಯ ಬೆಟ್ಟ ಪ್ರದೇಶ, ಭಂಕೂರ ಗ್ರಾಮದಲ್ಲಿ‌ ಟೆಂಟ್ ಹಾಕಿ ನೆಲೆಸಿರುವ ಅಲೆಮಾರಿ ಜನಾಂಗದವರನ್ನು ಭೇಟಿ ಮಾಡಿದರು. ಬಡ‌ ಕೂಲಿ ಕಾರ್ಮಿಕರಿಗೆ ತರಕಾರಿ, ಅಕ್ಕಿ, ಬೇಳೆ‌ ಅಗತ್ಯ ವಸ್ತುಗಳನ್ನು ನೀಡಿದರು.

ಮಕ್ಕಳ ಭವಿಷ್ಯಕ್ಕಾಗಿ ಗುಳೆ ಹೋಗಿದ್ದ ಗಂಗಮ್ಮ ವಾಪಸ್ ಬರಲಿಲ್ಲ ಮಕ್ಕಳ ಭವಿಷ್ಯಕ್ಕಾಗಿ ಗುಳೆ ಹೋಗಿದ್ದ ಗಂಗಮ್ಮ ವಾಪಸ್ ಬರಲಿಲ್ಲ

ಲಾಕ್ ಡೌನ್ ಪರಿಣಾಮ‌ದಿಂದ ಅಲೆಮಾರಿ, ಭಿಕ್ಷುಕರು, ನಿರ್ಗತಿಕರಿಗೆ ಆಹಾರದ ಸಮಸ್ಯೆ ಆಗುತ್ತಿದೆ. ಕಲಬುರಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಇಂತವರಿಗೆ ಅಹಾರ ಸರಬರಾಜು ಮಾಡಲು ಕ್ರಮ‌ಗಳನ್ನು ಕೈಗೊಂಡಿದೆ.

Tahsildar Distributes Grocery For Migrant Workers

ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಸಿದ್ಧ ಆಹಾರ, ಸ್ವಚ್ಚ ಕುಡಿಯುವ ನೀರನ್ನು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ನೀಡುತ್ತಿದ್ದು, ಅವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದೆ.

English summary
Kalaburagi district Shahabad tahsildar distributed grocery formigrant workers. After lockdown announcement migrant workers in trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X