ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರ್ಗಿಯ ಅಜ್ಜನಿಗೆ ಕೊರೊನಾ ವೈರಸ್ ಶಂಕೆ

|
Google Oneindia Kannada News

ಕಲಬುರ್ಗಿ, ಮಾರ್ಚ್ 11: ಕರ್ನಾಟಕದಲ್ಲಿಯೂ ಕೊರೊನಾ ವೈರಸ್ ಹಬ್ಬುತ್ತಿದೆ. ಕಲಬುರ್ಗಿಯ ಒಬ್ಬ ಅಜ್ಜನಿಗೆ ಕೊರೊನಾ ವೈರಸ್ ಶಂಕೆ ವ್ಯಕ್ತಪಡಿಸಲಾಗಿದೆ.

75 ವರ್ಷದ ವೃದ್ಧ ಅನಾರೋಗ್ಯ ಕಾರಣದಿಂದ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿದ್ದು, ವೈದ್ಯರು ಪರೀಕ್ಷೆ ನಡೆಸಿದರು. ನಂತರ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಆರೋಗ್ಯ ತಪಾಸಣೆಯ ವಿವರ ಕಳುಹಿಸಿದ್ದರು.

ವಿಕ್ಟೋರಿಯ ಆಸ್ಪತ್ರೆಯಿಂದ ವರದಿ ಬರುವ ಮುನ್ನವೇ ವೃದ್ಧವನ್ನು ಹೈದರಾಬಾದ್ ಶಿಫ್ಟ್ ಮಾಡಲಾಗಿದೆ. ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿ, ಕುಟುಂಬದವರು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ.

ಭಾರತೀಯನನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್‌ಭಾರತೀಯನನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್‌

ವೃದ್ಧ ಇತ್ತೀಚಿಗೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಬಂದಿದ್ದರು. ಅಲ್ಲಿಂದ ಬಂದ ಮೇಲೆ ಅನಾರೋಗ್ಯ ಶುರು ಆಗಿದ್ದು, ಇದೀಗ ಕೊರೊನಾ ವೈರಸ್ ಶಂಕೆ ವ್ಯಕ್ತವಾಗಿದೆ.

Suspected Coronavirus Infection In Gulbarga

ಆರೋಗ್ಯ ಅಧಿಕಾರಿಗಳು ಕುಟುಂಬದ ಜೊತೆಗೆ ಸಂಪರ್ಕದಲ್ಲಿ ಇದ್ದು, ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ವಿಕ್ಟೋರಿಯ ಆಸ್ಪತ್ರೆಯಿಂದ ವರದಿ ಇನ್ನು ಬಾರದೆ ಇರುವ ಕಾರಣ ಅಜ್ಜನ ಆರೋಗ್ಯ ಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ.

ಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗ

ಅಂದಹಾಗೆ, ಈಗಾಗಲೆ ಕರ್ನಾಟಕದಲ್ಲಿ ನಾಲ್ಕು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಕಲಬುರ್ಗಿ ಅಜ್ಜನ ಪ್ರಕರಣ ಐದನೇಯದಾಗಿದೆ.

English summary
A 75 years old man Suspected coronavirus infection in gulbarga. Now he shifted to hyderabad hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X