ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ-ಲಾತೂರ; ನೂತನ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ

|
Google Oneindia Kannada News

ಕಲಬುರಗಿ, ನವೆಂಬರ್ 23: ಕಲಬುರಗಿ ಮತ್ತು ಲಾತೂರ ನಡುವಿನ ನೂತನ ರೈಲು ಮಾರ್ಗದ ಸಮೀಕ್ಷೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. 187 ಕಿ. ಮೀ. ಉದ್ದ ಮಾರ್ಗ ಇದಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಪರ್ಕ ಕಲ್ಪಿಸಲಿದೆ.

ಕರ್ನಾಟಕದ ಕಲಬುರಗಿ ಮತ್ತು ಮಹಾರಾಷ್ಟ್ರದ ಲಾತೂರ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ನವೆಂಬರ್ 24 ಮತ್ತು 25ರಂದು ಸಮೀಕ್ಷೆ ನಡೆಯಲಿದೆ. ಈ ರೈಲು ಮಾರ್ಗಕ್ಕಾಗಿ ಹಲವು ವರ್ಷಗಳಿಂದ ಜನರು ಬೇಡಿಕೆ ಇಟ್ಟಿದ್ದರು.

ಇತಿಹಾಸ ನಿರ್ಮಾಣ ಮಾಡಲಿದೆ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ ಇತಿಹಾಸ ನಿರ್ಮಾಣ ಮಾಡಲಿದೆ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ

ಕಲಬುರಗಿ, ಬಬಲಾದ್ ರೈಲು ನಿಲ್ದಾಣ, ಅಳಂದ, ಉಮರ್ಗಾ, ನೀಲಂಗಾ, ಅನಂತವಾಲ್, ಶಿರೂರ, ಭತಂಗಳಿ ಮೂಲಕ ಹಾದು ಹೋಗುವ ರೈಲು ಮಾರ್ಗ ಲಾತೂರ ತಲುಪಲಿದೆ. ರೈಲು ಮಾರ್ಗ ನಿರ್ಮಾಣ ಯೋಜನೆ ಸಾಧ್ಯವೇ? ಎಂದು ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ.

ಯಶವಂತಪುರ-ವಾಸ್ಕೋ ನಡುವೆ ಪ್ರತಿದಿನದ ವಿಶೇಷ ರೈಲು ಯಶವಂತಪುರ-ವಾಸ್ಕೋ ನಡುವೆ ಪ್ರತಿದಿನದ ವಿಶೇಷ ರೈಲು

Survey For New Railway Line Between Kalaburagi And Latur

ಬೀದರ್ ಸಂಸದ ಭಗವಂತ ಖೂಬಾ ಕಲಬುರಗಿ ಮತ್ತು ಲಾತೂರ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ನೀಡಿರುವುದಕ್ಕೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದ ಅಳಂದ ಮೂಲಕ ರೈಲು ಮಾರ್ಗ ಹಾದು ಹೋಗಲಿದೆ. ಈಗ ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗಕ್ಕೆ ಒಪ್ಪಗೆ ದೊರೆಯಲಿದೆ ಎಂದು ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಟಿಕೆಟ್ ಮೇಲೆ ಶೇ 20ರ ರಿಯಾಯಿತಿ: ಯಾರಿಗೆ ಸಿಗಲಿದೆ ಈ ಆಫರ್?ರೈಲ್ವೆ ಟಿಕೆಟ್ ಮೇಲೆ ಶೇ 20ರ ರಿಯಾಯಿತಿ: ಯಾರಿಗೆ ಸಿಗಲಿದೆ ಈ ಆಫರ್?

Recommended Video

Samsung ಭಾರತದಲ್ಲಿ ನೂತನವಾಗಿ 5 ಸಾವಿರ ಕೋಟಿ ಹೂಡಿಕೆ | Oneindia Kannada

ಕೇಂದ್ರ ರೈಲ್ವೆ ವಿಭಾಗದ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಲಿದೆ. ಜಿಲ್ಲಾಧಿಕಾರಿಗಳು, ವಾಣಿಜೋದ್ಯಮಿಗಳು, ಎಪಿಎಂಸಿ, ಬಸ್ ಡಿಪೋ, ಟ್ರಾನ್ಸ್‌ಪೋರ್ಟ್ ಆಪರೇಟರ್‌ಗಳ ಜೊತೆ ಮಾತುಕತೆ ನಡೆಸಲಿದೆ.

English summary
Railway ministry approved for the survey of new line between Kalaburagi and Latur of Maharashtra. Proposed railway line is 187 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X