ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ; ಜಯದೇವದಿಂದ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣ

|
Google Oneindia Kannada News

ಕಲಬುರಗಿ, ನವೆಂಬರ್ 27 : ಕಲಬುರಗಿಯ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಜಯದೇವ ಸಂಸ್ಥೆಯ 300 ಹಾಸಿಗೆಯ ಹೊಸ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಿದೆ. 2016ರಲ್ಲಿ ನಗರದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯು ಆಸ್ಪತ್ರೆಯನ್ನು ಆರಂಭಿಸಿದೆ.

ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ ಈ ಕುರಿತು ಮಾಹಿತಿ ನೀಡಿದ್ದಾರೆ. "ಪ್ರಸ್ತುತ ಇರುವ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಳವಕಾಶದ ಸಮಸ್ಯೆ ಕಾಡುತ್ತಿದೆ" ಎಂದು ಹೇಳಿದರು.

ವೈದ್ಯ ಲೋಕದ ಅಚ್ಚರಿ; 7.4 ಕೆ.ಜಿ. ಕಿಡ್ನಿ ಹೊರತೆಗೆದ ವೈದ್ಯರು! ವೈದ್ಯ ಲೋಕದ ಅಚ್ಚರಿ; 7.4 ಕೆ.ಜಿ. ಕಿಡ್ನಿ ಹೊರತೆಗೆದ ವೈದ್ಯರು!

"ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂಸ್ಥೆಯ 300 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. 2020ರ ಫೆಬ್ರವರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತದೆ" ಎಂದರು.

ಗ್ಯಾಸ್ಟ್ರಿಕ್ ಗೆ ಮಾತ್ರೆ ತೆಗೆದುಕೊಳ್ತೀರಾ..? ಕಿಡ್ನಿ ವೈಫಲ್ಯವಾದೀತು ಜೋಕೆ!ಗ್ಯಾಸ್ಟ್ರಿಕ್ ಗೆ ಮಾತ್ರೆ ತೆಗೆದುಕೊಳ್ತೀರಾ..? ಕಿಡ್ನಿ ವೈಫಲ್ಯವಾದೀತು ಜೋಕೆ!

"ರಾಜ್ಯದಲ್ಲಿರುವ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಸಣ್ಣ ಪ್ರಮಾಣದ ಹೃದ್ರೋಗ ಘಟಕ ತೆರೆಯಲು ಮುಂದೆ ಬಂದಲ್ಲಿ ಅವರಿಗೆ ಸಂಸ್ಥೆಯಿಂದ ಎಲ್ಲಾ ರೀತಿಯ ತಾಂತ್ರಿಕ ಸಲಹೆ ನೀಡಲು ಬದ್ಧ" ಎಂದು ಡಾ.ಸಿ.ಎನ್.ಮಂಜುನಾಥ ಸ್ಪಷ್ಟಪಡಿಸಿದರು.

ಕಲಬುರಗಿ; ವಿಮಾನ ನಿಲ್ದಾಣಕ್ಕೆ ಚಾಲನೆ ಕೊಟ್ಟ ಯಡಿಯೂರಪ್ಪಕಲಬುರಗಿ; ವಿಮಾನ ನಿಲ್ದಾಣಕ್ಕೆ ಚಾಲನೆ ಕೊಟ್ಟ ಯಡಿಯೂರಪ್ಪ

ಸಚಿವ ಸಂಪುಟದ ಅನುಮೋದನೆ

ಸಚಿವ ಸಂಪುಟದ ಅನುಮೋದನೆ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 150 ಕೋಟಿ ರೂ. ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ. ಕಟ್ಟಡ ಉದ್ಘಾಟನೆ ನಂತರ ಈಗಿರುವ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಆಸ್ಪತ್ರೆಗೆ ಬೇಕಾಗುವ ಉಪಕರಣಗಳು ಸೇರಿದಂತೆ ಇನ್ನಿತರ ವೆಚ್ಚಕ್ಕೆ ಸಂಸ್ಥೆಯ ಆಂತರಿಕ ಸಂಪನ್ಮೂಲ ಬಳಕೆ ಮಾಡಿಕೊಳ್ಳಲಾಗುತ್ತದೆ.

2016ರಲ್ಲಿ ಜಯದೇವ ಆಸ್ಪತ್ರೆ ಆರಂಭ

2016ರಲ್ಲಿ ಜಯದೇವ ಆಸ್ಪತ್ರೆ ಆರಂಭ

2016ರಲ್ಲಿ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಘಟಕ ಆರಂಭವಾಯಿತು. 8 ಹೃದ್ರೋಗ ತಜ್ಞರು ಹಾಗೂ 5 ಹೃದ್ರೋಗ ಶಸ್ತ್ರ ಚಿಕಿತ್ಸಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ದಿನ 250 ರಿಂದ 350 ರಂತೆ 2 ಲಕ್ಷಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 135 ಹಾಸಿಗೆಯ ಈ ಆಸ್ಪತ್ರೆಯಲ್ಲಿ 16351 ಜನರು ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 411 ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಜಯದೇವದ 3 ಘಟಕಗಳು

ಜಯದೇವದ 3 ಘಟಕಗಳು

ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಗಳಿವೆ. ಬೆಂಗಳೂರಲ್ಲಿ 700, ಮೈಸೂರಲ್ಲಿ 400 ಹಾಗೂ ಕಲಬುರಗಿಯಲ್ಲಿ 300 ಸೇರಿದಂತೆ ಪ್ರತಿನಿತ್ಯ ಜಯದೇವ ಆಸ್ಪತ್ರೆಯ ಮೂರು ಸಂಸ್ಥೆಗಳಲ್ಲಿ 1400 ರಿಂದ 1500 ಹೊರ ರೋಗಿಗಳನ್ನು ಆಸ್ಪತ್ರೆಗೆ ಬಂದ ಒಂದು ಗಂಟೆಯಲ್ಲಿಯೆ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಸ್ಪತ್ರೆಯ ಆವರಣದಲ್ಲಿಯೆ ಹೆಚ್ಚುವರಿಯಾಗಿ 300 ಹಾಸಿಗೆವುಳ್ಳ ಆಸ್ಪತ್ರೆ ತೆರೆಯಲು ಇನ್ಫೋಸಿಸ್ ಪ್ರತಿಷ್ಠಾನ ಮುಂದೆ ಬಂದಿದೆ.

ಉತ್ತಮ ಚಿಕಿತ್ಸೆ ಪ್ರಥಮಾದ್ಯತೆ

ಉತ್ತಮ ಚಿಕಿತ್ಸೆ ಪ್ರಥಮಾದ್ಯತೆ

ಜಯದೇವ ಆಸ್ಪತ್ರೆಗೆ ಬರುವ ಪ್ರತಿ ರೋಗಿಗೂ ಗುಣಮಟ್ಟದ ಚಿಕಿತ್ಸೆ ನೀಡುವುದು ಆದ್ಯತೆಯಾಗಿದೆ. ಬಹುತೇಕ ಆರೋಗ್ಯ ಸೇವೆಗಳು ಕಡಿಮೆ ದರದಲ್ಲಿ ಸಿಗುತ್ತವೆ. ಬಿಪಿಎಲ್ ಕುಟುಂಬಕ್ಕೆ ಶಸ್ತ್ರಚಿಕಿತ್ಸೆ ಸಹ ಉಚಿತವಾಗಿ ವಿವಿಧ ಆರೋಗ್ಯ ಯೋಜನೆಗಳಡಿ ನೀಡಲಾಗುತ್ತಿದೆ.

English summary
Director of the Sri Jayadeva Institute of Cardiovascular Sciences and Research Dr. C. N. Manjunath said that Jayadeva Institute will built 300 bed new hospital in Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X