ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: ಗ್ರಹಣ ಕೇಡೆಂದು ಮಕ್ಕಳನ್ನು ತಿಪ್ಪೆಯಲ್ಲಿ ಹೂತರು

|
Google Oneindia Kannada News

ಕಲಬುರಗಿ, ಡಿಸೆಂಬರ್ 26: ಗ್ರಹಣದಿಂದ ಕೇಡಾಗುತ್ತದೆಂದು ನಂಬಿ ಸಣ್ಣ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಈ ಕಂಕಣ ಗ್ರಹಣದಿಂದ ಮಕ್ಕಳಿಗೆ ಕೇಡಾಗುತ್ತದೆ ಎಂಬ ವದಂತಿ ಹರಿದಾಡಿದ ಪರಿಣಾಮ ಸಣ್ಣ ಮಕ್ಕಳನ್ನು ತಾಯಂದಿರೇ ತಿಪ್ಪೆಯಲ್ಲಿ ಹೂತಿಟ್ಟದ್ದಾರೆ.

 ಮಕ್ಕಳನ್ನು ಮಣ್ಣಿನಲ್ಲಿ ಹೂತ ಮೂಡನಂಬಿಕೆ ಆಚರಣೆ ಮಕ್ಕಳನ್ನು ಮಣ್ಣಿನಲ್ಲಿ ಹೂತ ಮೂಡನಂಬಿಕೆ ಆಚರಣೆ

ವರದಿಗೆಂದು ತೆರಳಿದ್ದ ಕೆಲ ಪತ್ರಕರ್ತರ ಮನವಿಯ ಮೇರೆಗೆ ಕೆಲವು ತಾಯಂದಿರುವ ಮಕ್ಕಳನ್ನು ತಿಪ್ಪೆಯಿಂದ ಹೊರಗೆ ತೆಗೆದರು. ಆದರೆ ಇನ್ನೂ ಕೆಲವರು ತೆಗೆಯಲಿಲ್ಲ.

Solar Eclipse: People In Kalburgi Followed Superstition

ಗ್ರಹಣದ ದಿನ ಅಂಗವೈಕಲ್ಯ ಇರುವ ಮಕ್ಕಳನ್ನು ಮಣ್ಣಿನಲ್ಲಿ ಹೂತರೆ ಅಂಗವೈಕಲ್ಯ ದೂರಾಗುತ್ತದೆ ಎಂಬ ನಂಬಿಕೆಯೂ ಕೆಲವು ಕಡೆ ಇದ್ದು, ಅದರ ಪ್ರಯೋಗವೂ ಕೆಲವು ಕಡೆ ಆಗಿದೆ.

ಅಂಗವೈಕಲ್ಯ ಇದ್ದ ಮಕ್ಕಳನ್ನು ಮಣ್ಣಿನಲ್ಲಿ ಕತ್ತಿನವರೆಗೆ ಹೂತಿಟ್ಟ ಘಟನೆಗಳೂ ಸಹ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವರದಿ ಆಗಿದೆ.

ಒಬ್ಬನೇ ಮಗನಿದ್ದರೆ ಅವನಿಗೆ ಗ್ರಹಣ ಕೇಡಾಗುತ್ತದೆಂದು ಸಗಣಿ ಕಲಸಿದ ನೀರಿನಲ್ಲಿ ಸ್ನಾನ ಮಾಡಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಈ ಮೇಲಿನವೆಲ್ಲಾ ಮೂಢನಂಬಿಕೆಗಳಾಗಿದ್ದು, ಗ್ರಹಣವು ಪ್ರಾಕೃತಿಕ ಸಹಜ ಕ್ರಿಯೆ ಅದರ ಪ್ರಭಾವ ಮನುಷ್ಯರ, ಪ್ರಾಣಿಗಳ ಮೇಲೆ ಆಗದು ಎಂದು ವಿಜ್ಞಾನಿಗಳು ಹೇಳುತ್ತಾರೆ.

English summary
In Kalburgi some mothers followed solar eclipse superstition and kept their children under soil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X