ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಅವಧಿಯಲ್ಲಿ ಆರು ಬಾರಿ ದಾಳಿ ನಡೆಸಲಾಗಿತ್ತು: ಖರ್ಗೆ

|
Google Oneindia Kannada News

ಕಲಬುರಗಿ, ಫೆಬ್ರವರಿ 26: ಪಾಕಿಸ್ತಾನಕ್ಕೆ ಉಗ್ರರ ಅಡ್ಡೆಯ ಮೇಲೆ ದಾಳಿ ಮಾಡಿರುವ ಭಾರತೀಯ ಸೇನೆಯ ಭಾಗವಾದ ವಾಯುಸೇನೆಯ ಶೌರ್ಯವನ್ನು ಮಲ್ಲಿಕಾರ್ಜುನ ಖರ್ಗೆ ಕೊಂಡಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಚಲನವಲನಗಳ ಬಗ್ಗೆ ಪದೇ-ಪದೇ ಸಾಕ್ಷ್ಯಗಳನ್ನು ನೀಡಿದರೂ ಸಹ ಪಾಕಿಸ್ತಾನ ಆ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ, ಈಗ ನಡೆಸಿರುವ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಿದೆ ಎಂದರು.

ಉಗ್ರರ ನೆಲೆ ನಾಶ : ಸೇನೆಗೆ ಸೆಲ್ಯೂಟ್‌ ಎಂದ ಕರ್ನಾಟಕದ ನಾಯಕರು ಉಗ್ರರ ನೆಲೆ ನಾಶ : ಸೇನೆಗೆ ಸೆಲ್ಯೂಟ್‌ ಎಂದ ಕರ್ನಾಟಕದ ನಾಯಕರು

ಉಗ್ರರನ್ನು ನಿಯಂತ್ರಿಸಲು ಎಲ್ಲಾ ಸರ್ಕಾರಗಳು ಈ ರೀತಿಯ ದಾಳಿಗಳನ್ನು ಕಾಲ ಕಾಲಕ್ಕೆ ಮಾಡುತ್ತವೇ ಬಂದಿವೆ. ನಮ್ಮ ಆಡಳಿತದ ಸಮಯದಲ್ಲಿ ಆರು ಬಾರಿ ಈ ರೀತಿ ಉಗ್ರರ ವಿರುದ್ಧ ದಾಳಿಗಳಾಗಿದ್ದವು ಎಂದು ಖರ್ಗೆ ಹೇಳಿದರು.

Six cross border attacks on terrorists has been conducted in UPA time: Mallikarjun Kharge

ಮೇಲಾಗಿ ಇದು ಸರ್ಕಾರದ ನಿರ್ಧಾರವಲ್ಲ, ಸೈನ್ಯವೇ ಉಗ್ರರನ್ನು ನಿಯಂತ್ರಿಸಲು ಕಾಲ-ಕಾಲಕ್ಕೆ ಇಂತಹಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಖರ್ಗೆ ಹೇಳಿದರು.

ಉಗ್ರರ ಹುಟ್ಟಡಗಿಸೋವರೆಗೂ ಮೋದಿ ಬಿಡೋದಿಲ್ಲ: ಬಿ.ಎಸ್.ಯಡಿಯೂರಪ್ಪ ಉಗ್ರರ ಹುಟ್ಟಡಗಿಸೋವರೆಗೂ ಮೋದಿ ಬಿಡೋದಿಲ್ಲ: ಬಿ.ಎಸ್.ಯಡಿಯೂರಪ್ಪ

ನಾವು ಈ ಮೊದಲೇ ಹೇಳಿದಂತೆ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇರುತ್ತದೆ. ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆದಿರುವ ಈ ದಾಳಿಗೆ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಖರ್ಗೆ ಹೇಳಿದರು.

English summary
Six cross border attacks on terrorists has been conducted in UPA time said congress leader Mallikarjun Kharge. He said it is Army decision not government decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X