ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಬಾಣಿ ದಿರಿಸಿನಲ್ಲಿ ಪ್ರಚಾರ, ಮತದಾರರನ್ನು ಸೆಳೆದ ಸಂಸದೆ ಶೋಭಾ

|
Google Oneindia Kannada News

ಚಿಂಚೋಳಿ ಮೇ 12 2019: ಚಿಂಚೋಳಿ ಉಪಚುನಾವಣೆಯನ್ನು ಗೆಲ್ಲಲೇ ಬೇಕು ಎನ್ನುವ ಪಣ ತೊಟ್ಟಿರುವ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ತಮ್ಮ ಬಿರುಸಿನ ಪ್ರಚಾರ ಕಾರ್ಯವನ್ನು ಮುಂದುವರೆಸಿದ್ದಾರೆ.

ಕ್ಷೇತ್ರದ ಉಸ್ತುವಾರಿಗಳಾದ ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಜೊತೆಗೂಡಿ ಸೂಗೂರು ಗ್ರಾಮದಲ್ಲಿ ಸುನಿಲ ವಲ್ಲಾಪುರೆಜಿ, ಅಮರನಾಥ ಪಾಟೀಲ, ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ ಜೊತೆಗೂಡಿ ಪ್ರಚಾರ ನಡೆಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಚಾಕಾರ ವೆತ್ತದೆ ಇರುವ ಕಾಂಗ್ರೆಸ್ ನಾಯಕರು ಕೇವಲ ವೈಯಕ್ತಿಯ ತೆಜೋವಧೆಗೆ ಇಳಿದಿದ್ದಾರೆ. ಉಮೇಶ್ ಜಾಧವ್ ಅವರು ತಮ್ಮ ಸ್ವಾಭೀಮಾನಕ್ಕಾಗಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸಂಖ್ಯಾಬಲ 104 ರಿಂದ 106ಕ್ಕೇರಿಕೆ: ಶೋಭಾ ಕರಂದ್ಲಾಜೆ ವಿಶ್ವಾಸಬಿಜೆಪಿ ಸಂಖ್ಯಾಬಲ 104 ರಿಂದ 106ಕ್ಕೇರಿಕೆ: ಶೋಭಾ ಕರಂದ್ಲಾಜೆ ವಿಶ್ವಾಸ

ಚಿಂಚೋಳಿ ಕ್ಷೇತ್ರ ರಾಜ್ಯದ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ. ಖರ್ಗೆ ಅವರು ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಅಭಿವೃದ್ದಿಪರ ಚರ್ಚೆ ಮಾಡಿ ಎಂದರು.

ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ ಮಾತನಾಡಿ

ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ ಮಾತನಾಡಿ

ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ ಮಾತನಾಡಿ, ಅವಿನಾಶ್ ಜಾಧವ್ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಜೋಡೆತ್ತುಗಳು. ಜೊಡೆತ್ತುಗಳ ನೊಗ ಕಳಚಿ ಬಿದ್ದಿದೆ. ಚಿಕಿತ್ಸೆ ನೆಪದಲ್ಲಿ ರೆಸಾರ್ಟ್ ವಾಸ್ತವ್ಯ ಮಾಡುತ್ತಿದ್ದಾರೆ. ಹೊರಗೆ ಬಂದು ಜನರ ಕಷ್ಟಕ್ಕೆ ಸ್ಪಂದಿಸಿ, ರಾಜಕೀಯ ಎಂದರೆ ವಿಶ್ರಾಂತಿ ಪಡೆಯುವ ಆಶ್ರಮ ಅಲ್ಲ. ಮಗನ ಗೆಲುವಿಗಾಗಿ ದೇಗುಲಕ್ಕೆ ಹೋಗುವ ಸಿಎಂ ಜನರ ಕಷ್ಟ ಅರಿಯುವ ಕಾರ್ಯ ಮಾಡಿಲ್ಲ ಎಂದರು.

ಶೋಭಾ ಕರಂದ್ಲಾಜೆ ಪ್ರಚಾರ

ಶೋಭಾ ಕರಂದ್ಲಾಜೆ ಪ್ರಚಾರ

ಮತ್ತೊಂದೆಡೆ, ಮಾಜಿ ಸಚಿವ ಶೋಭಾ ಕರಂದ್ಲಾಜೆ ಅವರು ಕೂಡ್ಲೀ ಗ್ರಾಮದಿಂದ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದರು. ಲಂಬಾಣಿ ಮಹಿಳೆಯರ ಡ್ರೆಸ್ ಧರಿಸಿ ಲಂಬಾಣಿ ನೃತ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಹಾಗೂ ಎಲ್ಲರ ಗಮನ ಸೆಳೆಯಿತು.

ನಮ್ಮ ಸರ್ಕಾರ ಲಂಬಾಣಿ ನಿಗಮ ಸ್ಥಾಪಿಸಿತ್ತು

ನಮ್ಮ ಸರ್ಕಾರ ಲಂಬಾಣಿ ನಿಗಮ ಸ್ಥಾಪಿಸಿತ್ತು

ಯಡಿಯೂರಪ್ಪ ಸರಕಾರ ಮೊದಲ ಬಾರಿಗೆ ಲಂಬಾಣಿ ನಿಗಮ ಸ್ಥಾಪನೆ ಮಾಡಿತ್ತು. ಜಾಧವ್ ಬಿಜೆಪಿ ಸೇರಿದ ಮೇಲೆ ಆನೆ ಬಲ ಬಂದಂತಾಗಿದೆ. ನಮ್ಮ ಶಾಸಕರ ಬಲ 106 ಕ್ಕೆ ಏರಲಿದೆ. ಕಾಂಗ್ರೆಸ್ ಪಕ್ಷ ಒಳಗಿನಿಂದಲೇ ಕುಸಿದು ಹೋಗುತ್ತಿದೆ. ಸಶಕ್ತ ದೇಶ ಹಾಗೂ ಸಶಕ್ತ ಕರ್ನಾಟಕಕ್ಕೆ ಬಿಜೆಪಿ ಗೆ ಬೆಂಬಲಿಸುವಂತೆ ಮನವಿ ಮಾಡಿದರು. ಲಂಬಾಣಿ ಧಿರಿಸು ಧರಿಸಿದ್ದ ಮಹಿಳೆಯರು ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ

ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ

ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇದಕ್ಕಾಗಿ ಚಿಂಚೋಳಿಯ ಮತದಾರರು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಅವರನ್ನು ಅಭೂತಪೂರ್ವ ಅಂತರದಿಂದ ಗೆಲ್ಲಿಸಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಕುಮಾರಿ ಶೋಭಾ ಕರಂದ್ಲಾಜೆಯವರ ಜೊತೆಯಲ್ಲಿ ಯುವ ನಾಯಕರಾದ ದೊಡ್ಡಪ್ಪ ಗೌಡ ಪಾಟೀಲ್ ನರಿಬೊಳ, ಶ್ರೀಮತಿ ಶಶಿಕಲಾ ಟೆಂಗಳಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡರು.

English summary
Former minister, MP Shobha Karandlaje with Lambani attire and dancing to folk tunes attracted voters and campaigned for Chincholi BJP candidate Dr. Avinash Jadhav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X