ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಟ್ರಂಪ್ ಮೋದಿ ಸ್ನೇಹಿತ ಅಲ್ಲ, ಪ್ರಧಾನಿಗೆ ಸ್ನೇಹಿತರಿರುವುದಿಲ್ಲ'

|
Google Oneindia Kannada News

ಕಲಬುರಗಿ, ಫೆಬ್ರವರಿ 24: "ಪ್ರಧಾನಿ ನರೇಂದ್ರ ಮೋದಿ ಅವರು, ಟ್ರಂಪ್ ತಮ್ಮ ಮಿತ್ರ ಎಂದು ಕೋಟ್ಯಾಂತರ ರೂ ಖರ್ಚು ಮಾಡುವುದು ಎಷ್ಟರ ಮಟ್ಟಿಗೆ ಸರಿ. ಪ್ರಧಾನಿ ಆದವರಿಗೆ ಪ್ರೆಂಡ್ಸ್ ಇರೋಲ್ಲ. ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿರೋದು ವಿಶೇಷ ಲಾಭವೆನಿಲ್ಲ' ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸೋಮವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, "ಗುಜರಾತ್‌ನಲ್ಲಿ ಮುರುಕಲು ಸ್ಲಂ ಮನೆಗಳು ಕಾಣಬಾರದೆಂದು ಅಡ್ಡಗೋಡೆ ಕಟ್ಟಿಸಿದಾರೆ. ಗೋಡೆ ಕಟ್ಟೊದ್ರಿಂದ ಬಡತನ ಮುಚ್ಚಿಹಾಕಲು ಸಾಧ್ಯವಿಲ್ಲ, ಗೋಡೆ ನೋಡಿದ್ರೆ ಗೋತ್ತಾಗುತ್ತೆ ಜನರ ಸ್ಥಿತಿಗತಿ ಹೇಗಿದೆ ಅಂತಾ. ಹಿಂದೆ ಒಬಾಮ ಬಂದಾಗ ಇಷ್ಟೊಂದು ಹಣ ಖರ್ಚಾಗಿದ್ದಿಲ್ಲ, ಇದಕ್ಕೆ ಪ್ರಧಾನಿಯೇ ಉತ್ತರ ನೀಡಬೇಕು' ಎಂದಿದ್ದಾರೆ.

'ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ'ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ

'ನಮ್ಮ ದೇಶಕ್ಕೆ ಹೂಡಿಕೆದಾರರು ಬರುತ್ತಿಲ್ಲಣ ಜಿಡಿಪಿ ಏರಿಕೆ ಆಗ್ತಿಲ್ಲ. 1 ಕೋಟಿ ಜನ ಭಾಗವಹಿಸ್ತಾರೆ ಅಂತಾ ಖುದ್ದು ಟ್ರಂಪ್ ಅವರೆ ಹೇಳಿದ್ರು, ಟ್ರಂಪ್ ಏನು ಭಾರತದಲ್ಲಿ ಚುನಾವಣೆ ಪ್ರಚಾರ ಮಾಡ್ತಿದಾರ? ಅಮೇರಿಕಾ ಮತ್ತು ಇರಾನ್ ಮಧ್ಯೆ ದೊಡ್ಡ ಕಾಳಗ ನಡೆದಿದೆ. ಆದರೆ "ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ತೈಲ ಉತ್ಪನ್ನಗಳ ಬಗ್ಗೆ ಪ್ರಸ್ತಾಪನೆ ಆಗಿಲ್ಲ' ಎಂದರು.

Senior Congress Leader Kharge Opposes Trump India Visit

ಆಗ್ರಾದ ತಾಜ್‌ಮಹಲ್ ನೋಡಿಕೊಂಡು ಟ್ರಂಪ್ ದಂಪತಿ ಹಾಗೂ ಅವರ ಮಗಳು ಇವಾಂಕಾ ಟ್ರಂಪ್ ದೆಹಲಿಗೆ ಪ್ರಯಾಣಿಸಿದರು. ಅವರು ಸೋಮವಾರ ರಾತ್ರಿ ಐಷಾರಾಮಿ ಹೋಟೆಲ್‌ನಲ್ಲಿ ತಂಗಲಿದ್ದಾರೆ.

English summary
Senior Congress Leader Kharge Opposes Trump India Visit. No Use for India ahed of trump visit, he said in kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X