ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿಯಲ್ಲಿ ಸಸ್ಯಸಂತೆ ಆರಂಭ, 2.90 ಲಕ್ಷ ಸಸಿಗಳು ಮಾರಾಟಕ್ಕಿವೆ

By Gururaj
|
Google Oneindia Kannada News

ಕಲಬುರಗಿ, ಜುಲೈ 06 : ಕಲಬುರಗಿಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಸಸ್ಯಸಂತೆ ಆರಂಭಿಸಲಾಗಿದೆ. ಇಲಾಖೆಗೆ ಸೇರಿದ ನರ್ಸರಿಯಲ್ಲಿ ಅಭಿವೃದ್ಧಿಪಡಿಸಿದ ವಿವಿಧ ಕಸಿ/ಸಸಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.

ಐವಾನ್-ಎ-ಶಾಹಿ ಪ್ರದೇಶದಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾದ ಸಸ್ಯ ಸಂತೆಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 'ಜುಲೈ 5 ರಿಂದ 14ರ ವರೆಗೆ ಅತ್ಯಂತ ಕಡಿಮೆ ದರದಲ್ಲಿ ವಿವಿಧ ಕಸಿ/ ಸಸಿಗಳು ಮಾರಾಟಕ್ಕೆ ಇಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು.

ಧಾರವಾಡ : ಸಸ್ಯಸಂತೆಗೆ ಜನಸಾಗರ, ಮಾವಿನ ಗಿಡಕ್ಕೆ ಹೆಚ್ಚು ಬೇಡಿಕೆ ಧಾರವಾಡ : ಸಸ್ಯಸಂತೆಗೆ ಜನಸಾಗರ, ಮಾವಿನ ಗಿಡಕ್ಕೆ ಹೆಚ್ಚು ಬೇಡಿಕೆ

ಸುಮಾರು ಹತ್ತು ದಿನಗಳ ಕಾಲ ನಡೆಯುವ ಈ ಸಂತೆಯಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಜಿಲ್ಲೆಯ ಮಾಲಗತ್ತಿ, ಕೆಸರಟಗಿ, ಹಳ್ಳಿಸಗರ, ಚಿತ್ತಾಪುರ, ಚಂದ್ರಂಪಳ್ಳಿ, ಸೇಡಂ ಮತ್ತು ಕಲಬುರಗಿ ನಗರದ ಬಡೇಪುರ ಹಾಗೂ ಐವಾನ್-ಎ-ಶಾಹಿ ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಬಗೆಯ 2.90 ಲಕ್ಷ ಸಸಿ/ಕಸಿ ಸಸಿಗಳು ಮಾರಾಟಕ್ಕೆ ಲಭ್ಯವಿದೆ.

Sasya Santhe begins in Kalaburagi

ಸಸ್ಯಸಂತೆಯಲ್ಲಿ ವಿತರಣೆಯಾದ ಸಸಿಗಳ ಬಗ್ಗೆ ಏನಾದರೂ ಸಮಸ್ಯೆ ಇದ್ದರೆ ರೈತರು ಹಾರ್ಟಿ ಕ್ಲೀನಿಕ್ ಅಥವಾ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ಕಬ್ಬನ್ ಉದ್ಯಾನದಲ್ಲಿ ಇನ್ನು ಪುಷ್ಪರಾಶಿಯ ನೆರಳು ಬೆಳಕಿನಾಟ! ಕಬ್ಬನ್ ಉದ್ಯಾನದಲ್ಲಿ ಇನ್ನು ಪುಷ್ಪರಾಶಿಯ ನೆರಳು ಬೆಳಕಿನಾಟ!

ನಗರ ಪ್ರದೇಶದಲ್ಲಿ ತೋಟಗಾರಿಕೆ ಉತ್ತೇಜನಕ್ಕಾಗಿ ಟೆರಸ್ ಮೇಲೆ ಇಲಾಖೆಯಿಂದ ತಾರಸಿ ತೋಟ ಕೈಗೊಳ್ಳುವ ಮತ್ತು ಇಲ್ಲಿನ ಪ್ರಮುಖ ಬೆಳೆ ತೊಗರಿಗೆ ಪರ್ಯಾಯವಾಗಿ ಅಧಿಕ ಲಾಭ ನೀಡುವ ತೋಟಗಾರಿಕೆ ಬೆಳೆಗಳನ್ನು ಪಿ.ಪಿ.ಪಿ ಯೋಜನೆಯಡಿ ಬೆಳೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

Sasya Santhe begins in Kalaburagi

ಸಸ್ಯ ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಸಸಿಗಳ ಹೆಸರು, ದರ ಮತ್ತು ಸಂಖ್ಯೆ : 10ರೂ. ದರದ ಕರಿಬೇವು 42, 998, 200 ರೂ. ದರದ ಅಲಂಕಾರಿಕ ಸಸಿಗಳು-26,664, 12ರೂ. ದರದ ನಿಂಬೆ-92,500, 10ರೂ. ದರದ ನುಗ್ಗೆ19, 000, 32ರೂ. ದರದ ಮಾವು 90, 000, 28ರೂ. ದರದ ಸಿತಾಫಲ 5000, 35ರೂ. ದರದ ಸೀಬೆ 13000 ಮತ್ತು 50ರೂ. ದರದ ತೆಂಗು 600.

English summary
Sasya Santhe began in Kalaburagi district. The Department of Horticulture organizing Sasya Santhe programme from 2 year. People who need saplings can visit Horticulture dept nursery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X