ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ತಿಂಗಳಿನಲ್ಲಿ ಗುಲಬರ್ಗಾ ವಿವಿ ಖಾಲಿ ಹುದ್ದೆಗಳ ಭರ್ತಿ

|
Google Oneindia Kannada News

ಕಲಬುರಗಿ, ಫೆಬ್ರವರಿ 24 : " ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಕುಲಪತಿ ಹುದ್ದೆಯನ್ನು ಒಂದು ತಿಂಗಳೊಳಗೆ ತುಂಬಲಾಗುವುದು" ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ ನಾರಾಯಣ ಹೇಳಿದರು.

ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ಸಚಿವರು ಸಭೆ ನಡೆಸುವ ಮುನ್ನ ಮಂಥನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಹಲವಾರು ವಿಚಾರಗಳ ಕುರಿತು ಮಾತನಾಡಿದರು.

ಮೈಸೂರಿನಲ್ಲಿ ಕೆಲಸ ಖಾಲಿ ಇದೆ; 16 ಹುದ್ದೆಗೆ ಅರ್ಜಿ ಹಾಕಿಮೈಸೂರಿನಲ್ಲಿ ಕೆಲಸ ಖಾಲಿ ಇದೆ; 16 ಹುದ್ದೆಗೆ ಅರ್ಜಿ ಹಾಕಿ

"ಕಳೆದ ಎಳೆಂಟು ತಿಂಗಳಿಂದ ಪ್ರಭಾರ ಕುಲಪತಿಗಳೇ ಕಾರ್ಯನಿರ್ವಹಿಸುತ್ತಿರುವುದು ದುರಾದೃಷ್ಟಕರ.
ಈಗಾಗಲೇ ಕುಲಪತಿಗಳ ನೇಮಕಕ್ಕೆ ಸಮಿತಿ ರಚಿಸಲಾಗಿದ್ದು, ನೇಮಕಾತಿ ಪಕ್ರಿಯೆ ಕೈಗೊಳ್ಳಲಾಗುವುದು" ಎಂದರು.

ಕರ್ನಾಟಕ ಪೊಲೀಸ್ ನೇಮಕಾತಿ; 54 ಹುದ್ದೆಗಳಿಗೆ ಅರ್ಜಿ ಹಾಕಿಕರ್ನಾಟಕ ಪೊಲೀಸ್ ನೇಮಕಾತಿ; 54 ಹುದ್ದೆಗಳಿಗೆ ಅರ್ಜಿ ಹಾಕಿ

Recruitment To Fill Gulbarga University Post Soon

"ಕುಲಪತಿ ನೇಮಕ ಸಂಬಂಧದ ಹೊಸ ಕಾಯ್ದೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ. ಹೊಸ ಕಾಯ್ದೆಗೂ ಈಗಿನ ನೇಮಕಕ್ಕೂ ಯಾವುದೇ ಸಂಬಂಧ ಇಲ್ಲ. ಹೊಸ ಕಾಯ್ದೆ ಮುಂದಿನ ವರ್ಷದಿಂದ ಜಾರಿಗೆ ಬಂದರೆ, ರಾಜ್ಯದ ಯಾವುದೇ ವಿವಿಯಲ್ಲಿ ಕುಲಪತಿಗಳ ಹುದ್ದೆ ಖಾಲಿ ಆದ ತಕ್ಷಣ ತುಂಬಲು ಸುಲಭವಾಗುತ್ತದೆ" ಎಂದು ಸಚಿವರು ತಿಳಿಸಿದರು.

ವಿವಿಧ ಇಲಾಖೆಗಳಲ್ಲಿ ಹುದ್ದೆ ಕಡಿತ ಮಾಡಲಿದೆ ಸರ್ಕಾರವಿವಿಧ ಇಲಾಖೆಗಳಲ್ಲಿ ಹುದ್ದೆ ಕಡಿತ ಮಾಡಲಿದೆ ಸರ್ಕಾರ

"ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 183 ಬೋಧಕ ಹಾಗೂ 350 ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಎಲ್ಲಾ ಹುದ್ದೆಗಳ ತ್ವರಿತ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು" ಎಂದು ಸಚಿವರು ಭರವಸೆ ನೀಡಿದರು.

English summary
Karnataka higher education minister C. N. Ashwathnarayan said that vice-chancellor and other other vacant post in Gulbarga university will fill soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X