ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ನಡುವೆ ಕಲಬುರಗಿಯ ರಾವೂರ ಗ್ರಾಮದಲ್ಲಿ ಜಾತ್ರೆ, ರಥೋತ್ಸವ

|
Google Oneindia Kannada News

ಕಲಬುರ್ಗಿ, ಏಪ್ರಿಲ್ 16: ಲಾಕ್‌ಡೌನ್ ನಡುವೆ ಕಲಬುರಗಿಯಲ್ಲಿ ರಥೋತ್ಸವ ನಡೆಸಿರುವ ಘಟನೆ ನಡೆದಿದೆ. ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಗ್ರಾಮಸ್ಥರು ರಥೋತ್ಸವ ಮಾಡಿದ್ದಾರೆ.

Recommended Video

ರೆಡ್ ಝೋನ್ ನಡುವೆ ಕಲಬುರಗಿಯ ರಾವೂರ ಗ್ರಾಮದಲ್ಲಿ ರಥೋತ್ಸವ

ಪ್ರತಿ ವರ್ಷ ಈ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಜಾತ್ರೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಕೊರೊನಾ ಭೀತಿ ಇದ್ದರೂ, ಜನ ಜಾತ್ರೆ ಮಾಡುವುದನ್ನು ಬಿಟ್ಟಿಲ್ಲ. ಬೆಳ್ಳಗೆ ಆರು ಗಂಟೆಗೆ ರಾವೂರ ಊರಿನ ಜನ ರಥೋತ್ಸವ ಮಾಡಿದ್ದಾರೆ. ಮಾಸ್ಕ್‌ ಬಳಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರೂ ಸಂಖ್ಯೆಯ ಜನರು ಇದರಲ್ಲಿ ಭಾಗಿಯಾಗಿದ್ದಾರೆ.

Ravura Village People Did Rathotsava In Lockdown Period

ಕಲಬುರಗಿಯಲ್ಲಿ ಕೊರೊನಾಗೆ ಮೂರನೇ ಬಲಿಕಲಬುರಗಿಯಲ್ಲಿ ಕೊರೊನಾಗೆ ಮೂರನೇ ಬಲಿ

ಕಲಬುರಗಿ ಜಿಲ್ಲೆಯಲ್ಲಿ 3 ಜನ ಕೊರೊನಾಗೆ ಬಲಿಯಾಗಿದ್ದಾರೆ. 18 ಜನರಿಗೆ ಸೋಂಕಿದೆ. ಜಿಲ್ಲೆಯನ್ನು ರೆಡ್ ಜೋನ್ ಅಂತ ಘೋಷಿಸಲಾಗಿದೆ. ಆದರೂ ಜಾತ್ರೆ ಹಾಗೂ ರಥೋತ್ಸವ ಮಾಡುವ ಮೂಲಕ ಗ್ರಾಮಸ್ಥರು ಲಾಕ್‌ಡೌನ್ ನಿಯಮವನ್ನು ಮುರಿದಿದ್ದಾರೆ.

ಸೀಲ್ ಡೌನ್ ಮಾಡಿರುವ ಪ್ರದೇಶದಿಂದ ಮೂರು ಕಿಲೋ ಮೀಟರ್‌ದಲ್ಲಿರುವ ರಾವೂರು ಗ್ರಾಮ ಇದೆ. ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು‌ ತಗುಲಿದೆ. ಇಷ್ಟೆಲ್ಲಾ ಅಪಾಯ ನಡುವೆ ಜನ ಜಾತ್ರೆ ಮಾಡಿದ್ದಾರೆ. ಜನ ಜಾತ್ರೆ, ರಥೋತ್ಸವ ಮಾಡಿರುವ ಘಟನೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

English summary
Kalaburagi Ravura village people did Siddalingershwara rathotsava in lockdown period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X