ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯ ರಟಗಲ್ ರೇವಣಸಿದ್ದೇಶ್ವರ ಜಾತ್ರೆ ರದ್ದು

|
Google Oneindia Kannada News

ಕಲಬುರಗಿ, ಜುಲೈ 22 : ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ರಟಕಲ್ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,966.

'ಭಕ್ತಾರು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಆಗಸ್ಟ್ 10ರಂದು ನಿಗದಿಯಾಗಿದ್ದ ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ' ಎಂದು ದೇವಾಲಯದ ಅಡಳಿತಾಧಿಕಾರಿ ಹಾಗೂ ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ ಆದೇಶದಲ್ಲಿ ತಿಳಿಸಿದ್ದಾರೆ.

ಕಲಬುರಗಿ: ಕೊರೊನಾ ಜೊತೆಗೆ ಎದುರಾಯ್ತು ಮತ್ತೊಂದು ಆತಂಕ!ಕಲಬುರಗಿ: ಕೊರೊನಾ ಜೊತೆಗೆ ಎದುರಾಯ್ತು ಮತ್ತೊಂದು ಆತಂಕ!

ಜಾತ್ರೆಯ ದಿನದಂದು ಸಾಂಪ್ರದಾಯಿಕವಾಗಿ ದೇವಾಲಯದ ಸಿಬ್ಬಂದಿ ಮತ್ತು ಅರ್ಚಕರಿಂದ ಪೂಜೆ ಸಲ್ಲಿಸಲಾಗುತ್ತದೆ. ಅಂದು ಸಾರ್ವಜನಿಕರು ಮತ್ತು ಭಕ್ತಾಧಿಗಳು ದೇವಾಲಯಕ್ಕೆ ಬರಬಾರದು ಎಂದು ಮನವಿ ಮಾಡಲಾಗಿದೆ.

ಕಲಬುರಗಿಯಲ್ಲಿ ಲಾಕ್ ವಿಸ್ತರಣೆ ಇಲ್ಲ; ಡಿಸಿ ಆದೇಶ ವಾಪಸ್ ಕಲಬುರಗಿಯಲ್ಲಿ ಲಾಕ್ ವಿಸ್ತರಣೆ ಇಲ್ಲ; ಡಿಸಿ ಆದೇಶ ವಾಪಸ್

Ratkal Revanasiddeshwar Temple Fair Cancelld

ಶ್ರಾವಣ ಮಾಸ ಆರಂಭವಾಗಿದ್ದು ಮಾಸದ ಪ್ರತಿ ಸೋಮವಾರ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆಯುತ್ತಿದ್ದವು. ದೇವಾಲಯದ ಅರ್ಚಕರಿಂದ ಪೂಜೆಗಳು ನಡೆಯಲಿದ್ದು, ಅರ್ಚಕರಲ್ಲದೆ ಬೇರೆ ಭಕ್ತಾಧಿಗಳಿಗೆ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಮದುವೆ ಕುರಿತು ಹೊಸ ಆದೇಶ ಹೊರಡಿಸಿದ ಕಲಬುರಗಿ ಜಿಲ್ಲಾಡಳಿತಮದುವೆ ಕುರಿತು ಹೊಸ ಆದೇಶ ಹೊರಡಿಸಿದ ಕಲಬುರಗಿ ಜಿಲ್ಲಾಡಳಿತ

ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ 99 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,966ಕ್ಕೆ ಏರಿಕೆಯಾಗಿದೆ. ಹಲವು ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಈಗಾಗಲೇ ನಿಷೇಧ ಹೇರಲಾಗಿದೆ.

English summary
Due to Coronavirus outbreak Kalaburagi district administration cancelled the Revanasiddeshwar temple fair at Ratkal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X