ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ-ಬೀದರ್ ರೈಲು ಮಾರ್ಗ ವಿದ್ಯುತೀಕರಣಕ್ಕೆ ಒಪ್ಪಿಗೆ

|
Google Oneindia Kannada News

ಕಲಬುರಗಿ, ಅಕ್ಟೋಬರ್ 28 : ಕಲಬುರಗಿ-ಬೀದರ್ ನಡುವಿನ ರೈಲು ಮಾರ್ಗದ ವಿದ್ಯುತ್ತೀಕರಣಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಸುಮಾರು 127 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ.

ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ 110 ಕಿ. ಮೀ. ರೈಲು ಮಾರ್ಗದ ವಿದ್ಯುತ್ತೀಕರಣಕ್ಕೆ ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದ್ದು, 2020ರ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಕಲಬುರಗಿ-ಬೀದರ್ ರೈಲು ಮಾರ್ಗದ ವಿಶೇಷತೆಗಳುಕಲಬುರಗಿ-ಬೀದರ್ ರೈಲು ಮಾರ್ಗದ ವಿಶೇಷತೆಗಳು

ಕೆಲವು ದಿನಗಳ ಹಿಂದೆ ಬೀದರ್ ಸಂಸದ ಭಗವಂತ ಖೂಬಾ ಮತ್ತು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ರೈಲು ಮಾರ್ಗದ ವಿದ್ಯುತ್ತೀಕರಣ ಕಾಮಗಾರಿಗಾಗಿ ಮನವಿ ಸಲ್ಲಿಸಿದ್ದರು. ಕೇಂದ್ರ ಸಚಿವರು ಮನವಿಗೆ ತ್ವರಿತವಾಗಿ ಸ್ಪಂದಿಸಿದ್ದಾರೆ.

ಬೀದರ್-ಕಲಬುರಗಿ ರೈಲ್ವೆ ಮಾರ್ಗ ಲೋಕಾರ್ಪಣೆಬೀದರ್-ಕಲಬುರಗಿ ರೈಲ್ವೆ ಮಾರ್ಗ ಲೋಕಾರ್ಪಣೆ

Railway Department Approved For Kalaburagi Bidar Line Electrification

ಕಲಬುರಗಿ-ಬೀದರ್ ರೈಲು ಮಾರ್ಗ ವಿದ್ಯುತ್ತೀಕರಣವಾದರೆ ಹೆಚ್ಚಿನ ರೈಲು ಸಂಚಾರಕ್ಕೆ ಅನುಕೂಲವಾಗಲಿದೆ. ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಸಂಚಾರ ಹೆಚ್ಚಾಗಿ ಈ ಭಾಗದ ಅಭಿವೃದ್ಧಿಗೆ ಸಹಾಯಕವಾಗಲಿದೆ.

ವಿಜಯಪುರ-ಯಶವಂತಪುರ ರೈಲು; ವೇಳಾಪಟ್ಟಿ, ನಿಲ್ದಾಣಗಳುವಿಜಯಪುರ-ಯಶವಂತಪುರ ರೈಲು; ವೇಳಾಪಟ್ಟಿ, ನಿಲ್ದಾಣಗಳು

ಕಲಬುರಗಿ-ಬೀದರ್ ರೈಲು ಮಾರ್ಗವನ್ನು 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 13 ನಿಲ್ದಾಣಗಳನ್ನು ಹೊಂದಿರುವ ಈ ಮಾರ್ಗದ ಕಾಮಗಾರಿಯನ್ನು 383 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿತ್ತು. ಯೋಜನೆ ಪೂರ್ಣಗೊಳ್ಳುವಾಗ 1,542 ಕೋಟಿ ರೂ. ವೆಚ್ಚವಾಗಿತ್ತು.

1999ರಲ್ಲಿ ಈ ರೈಲು ಮಾರ್ಗದ ಕಾಮಗಾರಿ ಆರಂಭಿಸಲಾಗಿತ್ತು. ಅನುದಾನದ ಕೊರತೆಯಿಂದ ಯೋಜನೆ ವಿಳಂಬವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾದ ಬಳಿಕ ಅನುದಾನ ಬಿಡುಗಡೆ ಮಾಡಿಸಿ, ಯೋಜನೆಗೆ ವೇಗ ನೀಡಿದ್ದರು.

ಕಲಬುರಗಿ ಬೀದರ್ ರೈಲು ಮಾರ್ಗದಲ್ಲಿ 2 ಕಿ. ಮೀ. ಸುರಂಗ ಮಾರ್ಗವಿದೆ. ಮರಗುತ್ತಿ ಬಳಿ ಸುರಂಗದೊಳಗೆ ರೈಲು ಸಂಚಾರ ನಡೆಸುತ್ತದೆ. ಈ ಮಾರ್ಗವನ್ನು ಈಗ ವಿದ್ಯುತ್ತೀಕರಣ ಮಾಡಲು ಒಪ್ಪಿಗೆ ಸಿಕ್ಕಿದೆ.

English summary
Railway department approved for the Kalaburagi-Bidar line electrification. 110 km line will be electrification in the cost 127 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X