ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡವ ಶ್ರೀಮಂತರೆನ್ನುವ ಭೇದವಿರದ ಹಿಂದೂಸ್ತಾನದ ಕನಸು ಕಂಡ ರಾಹುಲ್

|
Google Oneindia Kannada News

ಕಲಬುರಗಿ, ಮಾರ್ಚ್ 18: ಎಲ್ಲರೂ ಸಮಾನರಾಗಿರುವ ಒಂದು ಹಿಂದೂಸ್ತಾನವನ್ನು ನಿರ್ಮಾಣ ಮಾಡುತ್ತೇವೆ, ಅಲ್ಲಿ ಬಡವ ಶ್ರೀಮಂತನೆಂಬ ಬೇಧಭಾವವಿಲ್ಲ ಎಲ್ಲರೂ ಸಮಾನರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಕಲಬುರಗಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯು ನಾನು ನಿಮ್ಮ ಚೌಕೀದಾರ ಎನ್ನುತ್ತಾ ದೇಶವನ್ನು ಕೊಳ್ಳೆ ಹೊಡೆಯಲು ಬಿಟ್ಟಿದ್ದಾರೆ. ಆದರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇದ್ಯಾವುದಕ್ಕೂ ಆಸ್ಪದವಿಲ್ಲ ಎಂದು ಹೇಳಿದರು.

ಎಲ್ಲರನ್ನೂ ಸಮಾನವಾಗಿ ನೋಡುವ ದೇಶವನ್ನು ನಿರ್ಮಾಣ ಮಾಡುತ್ತೇವೆ, ಅಂಬಾನಿ, ವಿಜಯ್ ಮಲ್ಯರಂತವರಿಗೆ ಸಾಲ ನೀಡಿದರೆ ಬಡವರಿಗೂ ಸಾಲ ನೀಡುತ್ತೇವೆ. ಶ್ರೀಮಂತರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆತರೆ ಬಡವರಿಗೂ ಒಳ್ಳೆಯ ವಿದ್ಯಾಭ್ಯಾಸ ನೀಡುತ್ತೇವೆ ಎಂದು ಭರವಸೆ ನೀಡಿದರು.

Rahul to address rally in Kalaburagi:LIVE

ಬಡವರಿಗೆ ಕನಿಷ್ಠ ವೇತನವನ್ನು ನೀಡುತ್ತೇವೆ, ಆದಾಯ ಮಿತಿ ರೇಖೆಯನ್ನು ಸಿದ್ಧಪಡಿಸಲಾಗುತ್ತದೆ, ಆ ರೇಖೆಗಿಂತ ಯಾರು ಕಡಿಮೆ ಇದ್ದಾರೆ ಅಂಥವರಿಗೆ ಕನಿಷ್ಠ ವೇತನ ನೀಡಲಾಗುತ್ತದೆ. ಹಾಗಾಗಿ ಯಾರೂ ಕೂಡ ಹಸಿವಿನಿಂದ ಬಳಲುವ ಪ್ರಶ್ನೆಯೇ ಇಲ್ಲ ಎಂದರು.

ಇನ್ನು ರೈತರ ಕೃಷಿ ಉತ್ಪನ್ನಗಳಿಗಾಗಿ ಕಾರ್ಖಾನೆಗಳನ್ನು ನಿರ್ಮಾಣ ಮಾಡುತ್ತೇವೆ, ಸೋಯಾ ಬೀನ್ ಬೆಳೆಯುವ ಕಡೆಯಲ್ಲಿ ಅದರ ತೈಲದ ಕಾರ್ಖಾನೆ, ಟೊಮೆಟೋ ಬೆಳೆಯುವ ಕರೆಯಲ್ಲಿ ಟೊಮೆಟ್ ಕೆಚಪ್ ತಯಾರಿಸುವ ಕಾರ್ಖಾನೆಯನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಕಲಬುರಗಿ ಸಮಾವೇಶ ಬಳಿಕ ಸಂಜೆ ಬೆಂಗಳೂರಿಗೆ ವಾಪಸಾಗಲಿರುವ ಅವರು, ಮಾನ್ಯತಾ ಟೆಕ್‌ಪಾರ್ಕ್‌ನ ಆಂಪಿ ಥೀಯೇಟರ್‌ನಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಉದ್ಯಮಿಗಳೊಂದಿಗಿನ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

Newest FirstOldest First
2:42 PM, 18 Mar

ಆರ್‌ಬಿಐ ಕೇಳದೆ ನೋಟು ಅಮಾನ್ಯ ಮಾಡ್ತಾರೆ, ಒಬ್ಬರೇ ವ್ಯಕ್ತಿ ದೇಶವನ್ನಾಳಬೇಕು ಎನ್ನುವ ಮನೋಭಾವನೆ ಮೋದಿಯದ್ದು, ಅವರು ಭಾಷಣದಲ್ಲಿ ಹೇಳ್ತಾರೆ, ನಾನು ಬರುವ ಮೊದಲು ಆನೆ ಮಲಗಿತ್ತು, ಅಂದರೆ ಅವರು ಬರುವ ಮುನ್ನ ದೇಶದಲ್ಲಿ ಏನೂ ಆಗಿಲ್ಲ, ಅವರೊಬ್ಬರೇ ದೇಶವನ್ನು ನಡೆಸುವ ಕನಸು ಕಾಣುತ್ತಿದ್ದಾರೆ- ರಾಹುಲ್
2:40 PM, 18 Mar

ಭಾರತದ ಸಂವಿಧಾನವನ್ನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಮುಟ್ಟಲು ನಾವು ಬಿಡುವುದಿಲ್ಲ- ರಾಹುಲ್
2:39 PM, 18 Mar

ಒಂದು ಹಿಂದೂಸ್ತಾನ ಇರಬೇಕು, ಶ್ರೀಮಂತರ ಬಳಿ ಯಾವ ರೀತಿ ನಡೆದುಕೊಳ್ಳುತ್ತೇವೋ ಅದೇ ರೀತಿ ಬಡವರನ್ನೂ ನೋಡಿಕೊಳ್ಳುವ ದೇಶವನ್ನು ನಿರ್ಮಾಣ ಮಾಡುತ್ತೇವೆ, ಶ್ರೀಮಂತರಿಗೆ ಸಾಲ ನೀಡಿದರೆ ಬಡವರಿಗೂ ಕೂಡ ಸಾಲ, ಬಡವರಿಗೂ ಕಾಲೇಜು, ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸುತ್ತೇವೆ, ಈ ಜವಾಬ್ದಾರಿಯನ್ನು ನಿರ್ವಹಿಸಲು ನಾವು ತಯಾರಿದ್ದೇವೆ - ರಾಹುಲ್
2:35 PM, 18 Mar

ರೈತರ ಜೀವನವನ್ನು ಬದಲಿಸಲು ಎಲ್ಲಾ ಪ್ರಯತ್ನ ಮಾಡುತ್ತೇವೆ. ಫುಡ್ ಪ್ರೊಸೆಸ್ಸಿಂಗ್ ಪ್ಲಾಂಟ್ ನಿರ್ಮಿಸುತ್ತೇವೆ, ಟೊಮೆಟೊ ಬೆಳೆದರೆ ಕೆಚೆಪ್ ಕಾರ್ಖಾನೆ, ಸೋಯಾ ಬೀನ್ ಬೆಳೆದರೆ ಸೋಯಾಬೀನ್ ಎಣ್ಣೆ ತಯಾರಿಸುವ ಕಾರ್ಖಾನೆಯನ್ನು ನಿರ್ಮಿಸುತ್ತೇವೆ- ರಾಹುಲ್
2:34 PM, 18 Mar

2019ರಲ್ಲಿ ಗಬ್ಬರ್ ಸಿಂಗ್ ಸರ್ಕಾರ ಹೋಗಲಾಡಿಸಿ ನಿಜವಾದ ಜಿಎಸ್‌ಸ್ಟಿಯನ್ನು ತರುತ್ತೇವೆ, 5 ತೆರಿಗೆ ಇರಲ್ಲ, ಒಂದೇ ತೆರಿಗೆ ಇರುತ್ತದೆ, ಜೆಡಿಎಸ್ ಜೊತೆಗೆ ಚುನಾವಣೆ ಎದುರಿಸಲು ಹೋಗುತ್ತಿದ್ದೇವೆ ಗೆಲುವು ನಮ್ಮದಾಗುತ್ತದೆ ಎನ್ನುವ ಭರವಸೆ ಇದೆ-ರಾಹುಲ್
2:32 PM, 18 Mar

ಕಳ್ಳರು ಬ್ಯಾಂಕ್‌ನ ಹಿಂದಿನ ಬಾಗಿಲಿನಿಂದ ಬಂದು ಎಸಿ ರೂಮಿನಲ್ಲಿ ಕುಳಿತು ತಮ್ಮ ಕಪ್ಪು ಹಣವನ್ನು ಬದಲಾಯಿಸಿಕೊಂಡಿದ್ದರು, ಯಾರೂ ಕೂಡ ಸರದಿಯಲ್ಲಿ ನಿಂತು ಸಾಮಾನ್ಯ ಜನರಂತೆ ಹಣ ಪಡೆದಿಲ್ಲ- ರಾಹುಲ್
2:31 PM, 18 Mar

ಹಿಂದೂಸ್ತಾನದ ಇತಿಹಾಸದಲ್ಲಿ ನಿರುದ್ಯೋಗವನ್ನು ಹೋಗಲಾಡಿಸಿದ ನಿದರ್ಶನ ಎಲ್ಲೂ ಇಲ್ಲ- ರಾಹುಲ್
Advertisement
2:30 PM, 18 Mar

ಕನಿಷ್ಠ ವೇತನ ನೀಡುತ್ತೇವೆ, ಆದಾಯ ಮಿತಿ ರೇಖೆಯನ್ನು ಸಿದ್ಧಪಡಿಸಲಾಗುತ್ತದೆ, ಆ ರೇಖೆಗಿಂತ ಯಾರು ಕಡಿಮೆ ಇದ್ದಾರೆ ಅಂಥವರಿಗೆ ಕನಿಷ್ಠ ವೇತನ ನೀಡಲಾಗುತ್ತದೆ- ರಾಹುಲ್
2:28 PM, 18 Mar

ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದೆವು ಅದನ್ನು ಮನ್ನಾ ಮಾಡಿದ್ದೇವೆ, ಕೇವಲ ಕರ್ನಾಟಕ ಮಾತ್ರವಲ್ಲ ಪಂಜಾಬ್, ಛತ್ತೀಸ್ ಗಢ ಇನ್ನಿತರೆ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ- ರಾಹುಲ್
2:26 PM, 18 Mar

ಕಳ್ಳತನದಲ್ಲಿ ಸಿಕ್ಕಿಹಾಕಿಕೊಳ್ಳುವ ಮೊದಲು ಕೇವಲ ನರೇಂದ್ರ ಮೋದಿ ಚೌಕೀದಾರ್‌ ಆಗಿದ್ದರು, ಆದರೆ ಎಲ್ಲರ ಎದುರು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡ ಬಳಿಕ ದೇಶದ ಎಲ್ಲರೂ ಚೌಕೀದಾರರಾದರೇ ಎಂದು ರಾಹುಲ್ ಪ್ರಶ್ನೆ
2:25 PM, 18 Mar

ರಫೇಲ್ ಡೀಲ್ ಕುರಿತು ಫ್ರಾನ್ಸ್ ರಾಷ್ಟ್ರಪತಿ ಹೇಳುತ್ತಾರೆ ನನಗೆ ಗೊತ್ತಿಲ್ಲ, ಮೋದಿ ಅನಿಲ್ ಅಂಬಾನಿಗೆ ಕಾಂಟ್ರ್ಯಾಕ್ಟ್ ಕೊಡಬೇಕು ಎಂದು, ಹಾಗಾಗಿ ನೀಡಿದೆ. ಹಾಗಾದರೆ ಗೇಟ್ ತೆಗೆದು ಕಳ್ಳರನ್ನು ಇವರೇ ಒಳಗೆ ಬಿಟ್ಟುಕೊಂಡಿದ್ದಷ್ಟೇ ಅಲ್ಲದೆ 30 ಸಾವಿರ ಕೋಟಿ ಕಳ್ಳತನ ಮಾಡು ಎಂದು ಕೂಡ ಹೇಳಿಕೊಟ್ಟಿದ್ದರು-ರಾಹುಲ್ ಗಾಂಧಿ
2:22 PM, 18 Mar

ಚೌಕೀದಾರ್ ಪ್ರಧಾನಮಂತ್ರಿಯಾಗ್ತಾರೆ ಮೊದಲ ಕೆಲಸ ಫ್ರಾಂನ್ಸ್‌ಗೆ ಹೋಗ್ತಾರೆ ಅನಿಲ್ ಅಂಬಾನಿನೂ ಅವರ ಜೊತೆ ಹೋಗ್ತಾರೆ, ಆದರೆ ಸಾಮಾನ್ಯ ಜನರನ್ನೂ ಅವರೊಂದಿಗೆ ಫ್ರಾನ್ಸ್‌ಗೆ ಕರೆದುಕೊಂಡು ಹೋಗಬಹುದಿತ್ತಲ್ಲ- ರಾಹುಲ್ ಗಾಂಧಿ
Advertisement
2:20 PM, 18 Mar

ಮೋದಿ ಅನಿಲ್ ಅಂಬಾನಿ, ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ ಇವರ ಚೌಕೀದಾರರಾಗಿದ್ದರು-ರಾಹುಲ್ ಗಾಂಧಿ
2:19 PM, 18 Mar

ಚೌಕೀದಾರ್ ಚೋರ್ ಹೇ ನಾಳೆ, ನಾಡಿದ್ದು ನರೇಂದ್ರ ಮೋದಿ ಇಡೀ ದೇಶವನ್ನು ಚೌಕೀದಾರನನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ-ರಾಹುಲ್ ಗಾಂಧಿ
2:08 PM, 18 Mar

ಜನರಿಗೆ ಭಾಷಣದಿಂದ ಹೊಟ್ಟೆ ತುಂಬಲ್ಲ, ಜನರಿಗೆ ಐದು ವರ್ಷದಲ್ಲಿ ಏನು ಮಾಡಿದ್ದೀರಾ ಎನ್ನುವುದನ್ನು ಲೆಕ್ಕ ಕೊಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಏನು ಹೇಳಿದ್ರಿ, ಏನು ಮಾಡಿದ್ದೀರ ಎನ್ನುವುದರ ಬಗ್ಗೆ ಉತ್ತರ ಕೊಡಿ- ಮಲ್ಲಿಕಾರ್ಜುನ ಖರ್ಗೆ
2:05 PM, 18 Mar

ಕಲಬುರಗಿಯಲ್ಲಿ ಮೋದಿ ಮಾತನಾಡುವ ವೇಳೆ ಕಲಬುರಗಿ ಜನರಿಗೆ ಏನು ಕೊಟ್ಟಿದ್ದೇನೆ, ಏನು ಕೊಡುತ್ತೇನೆ ಎನ್ನುವುದು 40 ನಿಮಿಷದ ಭಾಷಣದಲ್ಲಿ ಒಂದು ಬಾರಿಯೂ ಹೇಳಿಲ್ಲ -ಮಲ್ಲಿಕಾರ್ಜುನ ಖರ್ಗೆ
1:54 PM, 18 Mar

ಮೋದಿ ಖರ್ಗೆಯವರನ್ನು ಟಾರ್ಗೆಟ್ ಮಾಡಿದ್ದಾರೆ, ನರೇಂದ್ರ ಮೋದಿ, ಷಾ ಯಾರೇ ಟಾರ್ಗೆಟ್ ಮಾಡಿದ್ದರೂ ಕಲಬುರಗಿ ಜನತೆ ಒಳ್ಳೆಯ ಉತ್ತರವನ್ನೇ ನೀಡುತ್ತಾರೆ ಎನ್ನುವ ನಂಬಿಕೆ ಇದೆ- ಸಿದ್ದರಾಮಯ್ಯ
1:53 PM, 18 Mar

ಮತ್ತೊಮ್ಮೆ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ, ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರಿಗೆ ಮತ ಹಾಕಿ ಲೋಕಸಭೆಗೆ ಕಳುಹಿಸಿಕೊಡಿ- ಸಿದ್ದರಾಮಯ್ಯ
1:50 PM, 18 Mar

ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು, ಆದರೆ ಕೇವಲ 27 ಲಕ್ಷವಷ್ಟೇ ಉದ್ಯೋಗ ನೀಡಿದ್ದಾರೆ ಎನ್ನುವ ವರದಿ ಇದೆ-ಸಿದ್ದರಾಮಯ್ಯ
1:49 PM, 18 Mar

ಅಭಿವೃದ್ಧಿ ಬಗ್ಗೆ ಮೋದಿ ಚರ್ಚೆ ಮಾಡಲ್ಲ, ಐದು ವರ್ಷದಲ್ಲಿ ಏನು ಸಾಧನೆ ಮಾಡಿದ್ದೇವೆ, ಯಾವ ಸಭೆಯಲ್ಲೂ ಪ್ರಸ್ತಾಪ ಇಲ್ಲ, ಭಾವನಾತ್ಮಕ ವಿಚಾರ ಪ್ರಸ್ತಾಪಿಸಿ ಸಮಾಜಕ್ಕೆ, ದೇಶಕ್ಕೆ ಸಂಬಂಧ ವಿಲ್ಲದೆರುವತಹ ವಿಷಯಗಳನ್ನು ಪ್ರಸ್ತಾಪ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.-ಸಿದ್ದರಾಮಯ್ಯ
1:48 PM, 18 Mar

ಮೋದಿಯವರು ಮಾತನಾಡುವುದು ಬಿಟ್ಟರೆ, ಭಾಷಣ ಮಾಡುವುದು ಬಿಟ್ಟರೆ, ಮನ್‌ ಕಿ ಬಾತ್ ಹೇಳುವುದು ಬಿಟ್ಟರೆ ಅವರ ಸಾಧನೆ ಐದು ವರ್ಷದಲ್ಲಿ ಶೂನ್ಯ, ಬಾಯಿ ಬಡಾಯಿ ಸಾಧನೆ-ಶೂನ್ಯ- ಸಿದ್ದರಾಮಯ್ಯ
1:47 PM, 18 Mar

ಕರ್ನಾಟಕದಲ್ಲಿ ಲೋಕಸಭೆಗೆ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲನೇ ಹಂತ ಏಪ್ರಿಲ್ 18, ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಏಪ್ರಿಲ್ 23ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ-ಸಿದ್ದರಾಮಯ್ಯ
1:47 PM, 18 Mar

ನಮ್ಮ ಕಾರ್ಯಕರ್ತರು ಈ ಬಾರಿ ದೃಢವಾದ ಸಂಕಲ್ಪ ಮಾಡಬೇಕು, ದೇಶದಲ್ಲಿ ಬಿಜೆಪಿ ಸರ್ಕಾರವಿದೆ ಅವರ ಆಡಳಿತ ಕೊನೆಗಾಣಬೇಕು ಮತ್ತೆ ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಅಧಿಕಾರ ಹಿಡಿಯ ಬೇಕು. ಅದಕ್ಕಾಗಿ ಕಾರ್ಯಕರ್ತರು ಸಂಕಲ್ಪ ಮಾಡಿ, ಚುನಾವಣೆಯಲ್ಲಿ ಹೋರಾಟ ಮಾಡಬೇಕು ಎಂದು ಮನವಿ- ಸಿದ್ದರಾಮಯ್ಯ
1:39 PM, 18 Mar

ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಚೌಕೀದಾರ್ ಘೋಷಿಸಿಕೊಂಡಿದ್ದಾರೆ. ಚೌಕೀದಾರ್ ಎಂದರೆ ಭ್ರಷ್ಟಾಚಾರ ನಿಗ್ರಹ ಮಾಡುವವರು ಎಂದರ್ಥ. ಆದರೆ ಹಾಡಹಗಲೇ ಅವರು ಯಾವ ರೀತಿ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆಡಿಯೋ ನಿಮ್ಮ ಮುಂದಿದೆ, ಬಿಎಸ್‌ವೈಗೆ ಆ ಅರ್ಹತೆಯೇ ಇಲ್ಲ, ಕೂಡಲೇ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು- ದಿನೇಶ್ ಗುಂಡೂರಾವ್
1:28 PM, 18 Mar

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗಿ
1:26 PM, 18 Mar

ಕಲಬುರಗಿಯ ಎನ್‌ವಿ ಆಟದ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮ
1:25 PM, 18 Mar

ವೇದಿಕೆಯತ್ತ ರಾಹುಲ್ ಗಾಂಧಿ ಆಗಮನ
1:17 PM, 18 Mar

ಹೆಣ್ಣು ಮಕ್ಕಳ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದು ಬಿಜೆಪಿ. ಕೇಂದ್ರದ ಮೂಗಿಗೆ ತುಪ್ಪ ಹಚ್ಚುವ ಯೋಜನೆ ಉಜ್ವಲ ಯೋಜನೆಯಿಂದ ಹೆಣ್ಣುಮಕ್ಕಳಿಗೆ ಹೇಗೆ ಉಪಯೋಗವಾಗುತ್ತೆ? ಮೊದಲ ಸಿಲಿಂಡರ್ ಉಚಿತ ನೀಡಿ, 2ನೇ ಸಿಲಿಂಡರ್ ಗೆ ಹಣ ಕೇಳುವ ನೀವು ದೇಶದ ಹೆಣ್ಣು ಮಕ್ಕಳಿಗೆ ಮಾಡಿದ ಮೋಸ ಅಲ್ಲವೇ?- ಡಾ ಪುಷ್ಪಾ ಅಮರ್‌ನಾಥ್‌
1:17 PM, 18 Mar

ಸ್ವಾತಂತ್ರ್ಯಾನಂತರ ಮೂಲ ಸೌಕರ್ಯ, ಕೃಷಿ, ಶಿಕ್ಷಣ, ವಿಜ್ಞಾನ, ಸಂಪರ್ಕ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ದೇಶವನ್ನು ಸದೃಢವಾಗಿ ಕಟ್ಟಿದ್ದು ಕಾಂಗ್ರೆಸ್. ಸುಳ್ಳು, ಭ್ರಷ್ಟಾಚಾರದಲ್ಲಿ ಮುಳುಗಿರುವ ನರೇಂದ್ರ ಮೋದಿ ಯವರ ಸರ್ಕಾರ ಸಂಪೂರ್ಣ ವಿಫಲ ಆಡಳಿತ ನೀಡಿದೆ. ದೇಶದ ಆಶಾಕಿರಣ ಕಾಂಗ್ರೆಸ್ ಮಾತ್ರ-ಈಶ್ವರ್ ಖಂಡ್ರೆ

English summary
As a part of his campaign for the Lok Sabha elections, All India Congress Committee (AICC) president Rahul Gandhi will address a public meeting here on Monday, Minister for Social welfare Priyank Kharge has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X