ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.18ರಂದು ಖರ್ಗೆ ತವರು ಕಲಬುರಗಿಯಲ್ಲಿ ರಾಹುಲ್ ಸಮಾವೇಶ

|
Google Oneindia Kannada News

Recommended Video

Lok Sabha Elections 2019: ಖರ್ಗೆ ತವರು ಕಲಬುರಗಿಯಲ್ಲಿ ರಾಹುಲ್ ಸಮಾವೇಶ | Oneindia Kannada

ಕಲಬುರಗಿ, ಮಾರ್ಚ್ 13 : ಹಲವು ಕಾರಣಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ಗುಲ್ಬರ್ಗ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ಸೋಲಿಸಬೇಕು ಎಂದು ಬಿಜೆಪಿ ಪಣ ತೊಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ. ಮಾ.6ರಂದು ನರೇಂದ್ರ ಮೋದಿ ಸಮಾವೇಶ ನಡೆದಿತ್ತು. ಮಾ.18ರಂದು ರಾಹುಲ್ ಆಗಮಿಸಲಿದ್ದಾರೆ.

ಖರ್ಗೆ ಸೋಲಿಸಲು ಒಂದಾದ ಮೂವರು ನಾಯಕರು!ಖರ್ಗೆ ಸೋಲಿಸಲು ಒಂದಾದ ಮೂವರು ನಾಯಕರು!

ಬುಧವಾರ ಗುಲ್ಬರ್ಗ (ಕಲಬುರಗಿ) ಕ್ಷೇತ್ರಕ್ಕೆ ಡಾ.ಉಮೇಶ್ ಜಾಧವ್ ಅವರು ಬಿಜೆಪಿ ಅಭ್ಯರ್ಥಿ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಖರ್ಗೆಯನ್ನು ಕಟ್ಟಿಹಾಕಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ಕಣಕ್ಕೆಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ಕಣಕ್ಕೆ

ಗುಲ್ಬರ್ಗದ ಚುನಾವಣೆ ನರೇಂದ್ರ ಮೋದಿ v/s ಮಲ್ಲಿಕಾರ್ಜುನ ಖರ್ಗೆ, ಮಲ್ಲಿಕಾರ್ಜುನ ಖರ್ಗೆ v/s ಡಾ.ಉಮೇಶ್ ಜಾಧವ್ ನಡುವಿನ ಹೋರಾಟವಾಗಿದೆ. ಏಪ್ರಿಲ್ 23ರಂದು ಕಲಬುರಗಿ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಯಾರಿಗೆ ಗೆಲುವು ಎಂಬುದು ಮೇ 23ರಂದು ತೀರ್ಮಾನವಾಗಲಿದೆ.....

ಕಲಬುರಗಿಗೆ ಬಂದರೂ ಖರ್ಗೆ ಹೆಸರೆತ್ತಲಿಲ್ಲ ಮೋದಿ, ಕಾರಣ ಏನಿರಬಹುದು?ಕಲಬುರಗಿಗೆ ಬಂದರೂ ಖರ್ಗೆ ಹೆಸರೆತ್ತಲಿಲ್ಲ ಮೋದಿ, ಕಾರಣ ಏನಿರಬಹುದು?

ಸೋಲಿಲ್ಲದ ಸರದಾರ

ಸೋಲಿಲ್ಲದ ಸರದಾರ

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದಾರೆ. ಎರಡು ಬಾರಿ ಕಲಬುರಗಿ ಕ್ಷೇತ್ರದಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ. 9 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. 'ಇದು ನನ್ನ ಕೊನೆಯ ಚುನಾವಣೆ' ಎಂದು ಈಗಾಗಲೇ ಅವರು ಘೋಷಣೆ ಮಾಡಿದ್ದಾರೆ.

ಖರ್ಗೆ ಸೋಲಿಸಲು ಬಿಜೆಪಿ ಪಣ

ಖರ್ಗೆ ಸೋಲಿಸಲು ಬಿಜೆಪಿ ಪಣ

ಈ ಬಾರಿಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ಪಣ ತೊಟ್ಟಿದೆ. ಆದ್ದರಿಂದ, 2018ರ ವಿಧಾನಸಭೆ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಡಾ.ಉಮೇಶ್ ಜಾಧವ್ ಅವರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತರಲಾಗಿದೆ. ಖರ್ಗೆ ಅವರ ವಿರುದ್ಧ ಜಾಧವ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

ಒಂದಾಗಿದ್ದಾರೆ ಮೂವರು ನಾಯಕರು

ಒಂದಾಗಿದ್ದಾರೆ ಮೂವರು ನಾಯಕರು

ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಬೇಕು ಎಂದು ಬಿಜೆಪಿಯ ಮೂವರು ನಾಯಕರಾದ ಡಾ.ಉಮೇಶ್ ಜಾಧವ್, ಬಾಬೂರಾವ್ ಚಿಂಚಿನಸೂರು, ಮಾಲೀಕಯ್ಯ ಗುತ್ತೇದಾರ್ ಒಂದಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪುತ್ರ ವ್ಯಾಮೋಹ ಜಾಸ್ತಿ ಎಂಬುದು ಎಲ್ಲಾ ನಾಯಕರು ಮಾಡುತ್ತಿರುವ ಆರೋಪವಾಗಿದೆ.

ಮೋದಿ ಸಮಾವೇಶ

ಮೋದಿ ಸಮಾವೇಶ

ಮಾ.6ರಂದು ಕಲಬುರಗಿಯ ಎನ್‌.ವಿ.ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಆದರೆ, ಭಾಷಣದಲ್ಲಿ ಅವರು ಎಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಬಳಸಲಿಲ್ಲ.

ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ

ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ

ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೆಲ್ಲಿಸಿಕೊಂಡು ಬರುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದ್ದರಿಂದ, ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ.18ರಂದು ರಾಹುಲ್ ಗಾಂಧಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಖರ್ಗೆ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಜೆಡಿಎಸ್‌ನ ಬೆಂಬಲ

ಜೆಡಿಎಸ್‌ನ ಬೆಂಬಲ

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ಷೇತ್ರದಲ್ಲಿ ಜೆಡಿಎಸ್‌ ಸಹಕಾರ ಸಿಗಲಿದೆ. 2014ರ ಚುನಾವಣೆಯಲ್ಲಿ ಡಿ.ಜಿ.ಸಾಗರ್ ಎಂಬುವವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 15,690 ಮತಗಳನ್ನು ಪಡೆದಿದ್ದರು. ಈ ಬಾರಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ ಬಲ ಹೆಚ್ಚಲಿದೆ.

English summary
AICC president Rahul Gandhi will addresses election campaign rally in Kalaburagi on March 13, 2019. Kalaburagi hometown for Lok Saha Congress leader Mallikarjun Kharge. Narendra Modi visited Kalaburagi on March 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X