• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ ಪ್ರವಾಹ; ಸೈಯದ್ ಚಿಂಚೋಳಿ ಗ್ರಾಮ ಸ್ಥಳಾಂತರಕ್ಕೆ ಸೂಚನೆ

|

ಕಲಬುರಗಿ, ಅಕ್ಟೋಬರ್ 16: ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಕಂದಾಯ ಸಚಿವ ಅರ್. ಅಶೋಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರವಾಹದಿಂದಾಗಿ ಗ್ರಾಮ ಮುಳುಗಡೆಯಾಗಿದೆ.

ಶುಕ್ರವಾರ ಸಚಿವ ಆರ್. ಅಶೋಕ ಕಲಬುರಗಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಇತ್ತೀಚೆಗೆ ಸುರಿದ ಮಳೆ ಮತ್ತು ಭೋಸಗಾ ಕೆರೆ ಪ್ರವಾಹದಿಂದ ಹಾನಿಗೊಳಗಾದ ಸೈಯದ್ ಚಿಂಚೋಳಿ ಗ್ರಾಮಕ್ಕೆ ಅವರು ಭೇಟಿ ನೀಡಿ, ಜನರ ಮಾತು ಮಾತುಕತೆ ನಡೆಸಿದರು.

ಕಲಬುರಗಿ; 4819 ಮನೆಗೆ ಹಾನಿ, 48 ಕಾಳಜಿ ಕೇಂದ್ರ ಆರಂಭ

ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕಾಳಜಿ ಕೇಂದ್ರಕ್ಕೂ ಸಚಿವರು ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು. ಗ್ರಾಮ ಸ್ಥಳಾಂತರ ಸಂಬಂಧ ಗ್ರಾಮಕ್ಕೆ ಹತ್ತಿರದಲ್ಲಿಯೇ 11 ಎಕರೆ ಪ್ರದೇಶ ಗುರುತಿಸಲಾಗಿದೆ. ಗ್ರಾಮಸ್ಥರು ಒಪ್ಪಿದಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಆಯುಕ್ತರಿಗೆ ಸೂಚಿಸಿದರು.

ಕಲಬುರಗಿ; ಮಳೆ, ಪ್ರವಾಹ, ಸಹಾಯವಾಣಿ ಸಂಖ್ಯೆಗಳು

"ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಮೂರು ಹೊತ್ತು ಊಟದ ಜೊತೆಗೆ ಮೊಟ್ಟೆ, ಮಲಗಲು ಹೊದಿಕೆ, ಟವೆಲ್, ಸ್ಯಾನಿಟೈಸರ್ ನೀಡಬೇಕು. ಮಹಿಳೆಯರಿಗೆ ಸೀರೆ ಸಹ ನೀಡುವಂತೆ" ಅಧಿಕಾರಿಗಳಿಗೆ ಸಚಿವರು ನಿರ್ದೇಶ ನೀಡಿದರು.

ಕಲಬುರಗಿ ಭೀಮಾ ನದಿ ಪಾತ್ರದ 148 ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ

ಎನ್‌ಡಿಆರ್‌ಎಫ್ ತಂಡ ರವಾನೆ: "ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಮುಂಬೈ ಕರ್ನಾಟಕದ ಬೆಳಗಾವಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕಳೆದ ಮೂರು ದಶಕದಲ್ಲಿ ಕಾಣದ ಭೀಕರ ಮಳೆಯಾಗಿದ್ದು,ರಕ್ಷಣಾ ಕಾರ್ಯಕ್ಕಾಗಿ ಎನ್. ಡಿ. ಆರ್. ಎಫ್. ತಂಡ ಕಳುಹಿಸಲಾಗಿದೆ" ಎಂದರು.

"ಕರ್ನಾಕಟದ ಒಟ್ಟು 173 ತಾಲೂಕುಗಳನ್ಬು ಪ್ರವಾಹ ಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ನೆರೆ ಪರಿಹಾರ ಕಾರ್ಯ ನಡೆಯುತ್ತಿದ್ದು, ಕಲಬುರಗಿ ಜಿಲ್ಲೆಯ 11 ತಾಲೂಕುಗಳು ಸಹ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಸೇರಿವೆ" ಎಂದು ಅಶೋಕ್ ವಿವರಣೆ ನೀಡಿದರು.

50 ಸಾವಿರ ಪರಿಹಾರ: "ಪ್ರಕೃತಿ ವಿಕೋಪಕ್ಕೆ ತುತ್ತಾದ ಮನೆಗಳ ದುರಸ್ತಿಗೆ 50 ಸಾವಿರ ರೂ. ಮತ್ತು ಸಂಪೂರ್ಣ ಮನೆ ಕುಸಿತ ಪ್ರಕರಣದಲ್ಲಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ಕೃಷಿ, ತೋಟಗಾರಿಕೆ ಬೆಳೆಗಳ ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ" ಎಂದು ಆರ್. ಅಶೋಕ ಹೇಳಿದರು.

English summary
Karnataka revenue minister R. Ashok directed the officials to shift Syed Chincholi village. Kalaburagi district Syed Chincholi village hit to flood every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X