• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಲಬರ್ಗಾ ವಿವಿಯಲ್ಲಿ ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಲೀಕ್, ಪರೀಕ್ಷೆ ಮುಂದೂಡಿಕೆ

By ಕಲಬುರಗಿ ಪ್ರತಿನಿಧಿ
|

ಕಲಬುರಗಿ, ನವೆಂಬರ್ 9: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಶ್ನೆ ಪತ್ರೆ ಸೋರಿಕೆ ಸದ್ದು ಮಾಡುತ್ತಿದೆ. ಇದೀಗ ಎರಡನೇ ಬಾರಿಗೆ ವಿವಿಯ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ ಬಹಿರಂಗವಾಗಿದೆ.

ಬಿ.ಕಾಂ. ಮೂರನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ಇಂದು ವಿವಿ ಪರೀಕ್ಷೆಯನ್ನೇ ಮುಂದೂಡಿದೆ.

ಅಂದುಕೊಂಡಂತೆ ನಡೆದಿದ್ದರೆ ಇಂದು ಮಧ್ಯಾಹ್ನ ಬಿಸಿನೆಸ್ ಸ್ಟಡೀಸ್ ಆ್ಯಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪರೀಕ್ಷೆ ನಡೆಯಬೇಕಾಗಿತ್ತು. ಆದರೆ ಪರೀಕ್ಷೆಗೂ ಮೊದಲೇ ವಾಟ್ಸಪ್ ನಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡುತ್ತಿತ್ತು. ಪರೀಕ್ಷೆ ಬರೆಯಲೆಂದು ಬಂದ ವಿದ್ಯಾರ್ಥಿಗಳು ನೈಜ ಪ್ರಶ್ನೆ ಪತ್ರಿಕೆಯೇ ವಾಟ್ಸಾಪ್ ನಲ್ಲಿ ಹರಿದಾಡಿದ ಪ್ರಶ್ನೆ ಪತ್ರಿಕೆ ಎಂಬುದನ್ನು ಗುರುತು ಹಿಡಿದಿದ್ದರು. ಈ ಸಂದರ್ಭ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ಖಚಿತಪಟ್ಟಿದೆ.

ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರೊ. ಡಿ.ಕೆ. ಮದರಿ‌ ಹೇಳಿಕೆ ನೀಡಿದ್ದಾರೆ. ಇದೇ ವಿವಿಯಲ್ಲಿ ಎರಡು ದಿನಗಳ ಹಿಂದೆ ಬಿ.ಕಾಂ 3 ನೇ ಸೆಮಿಸ್ಟರ್ ನ ಸ್ಟಾಟಿಸ್ಟಿಕ್ ಪ್ರಶ್ನೆ ಪತ್ರಿಕೆ ಬಹಿರಂಗವಾಗಿತ್ತು. ಆಗಲೂ ಪರೀಕ್ಷೆಯನ್ನು ಮುಂದೂಡಲಾಗಿತ್ತು

ಹೀಗೆ ಸತತ ಎರಡು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಹಿನ್ನಲೆಯಲ್ಲಿ ಸೈಬರ್ ಕ್ರೈಮ್ ಗೆ ಪೊಲೀಸರಿಗೆ ದೂರು ನೀಡಲಾಗುವುದು‌. ಇದರಲ್ಲಿ ಭಾಗಿಯಾಗಿರುವ ಪ್ರಾಧ್ಯಾಪಕರು ಅಥವಾ ಪ್ರಾಚಾರ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮದರಿ ಹೇಳಿದ್ದಾರೆ.

ಇಂದು 140 ಪರೀಕ್ಷಾ ಕೇಂದ್ರಗಳಲ್ಲಿ 7949 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ಇವರೆಲ್ಲಾ ಇದೀಗ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿದೆ.

English summary
The question paper is leaking at Gulbarga University. For the second time question paper has been revealed before the examination. Because of question paper leak B.Com third semester examination has been postponed today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X