ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ನಗರದಲ್ಲಿ ನೂರಾರು ವ್ಯಾಪಾರಿಗಳಿಂದ ದಿಢೀರ್ ಪ್ರತಿಭಟನೆ

|
Google Oneindia Kannada News

ಕಲಬುರಗಿ, ಮೇ 30: ಕಲಬುರಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿ ಶುಕ್ರವಾರ ಸಂಜೆ ತರಕಾರಿ ವ್ಯಾಪಾರಿಗಳಿಂದ ದಿಢೀರ್ ಪ್ರತಿಭಟನೆ ನಡೆಸಲಾಯಿತು.

Recommended Video

ಕೊರೊನ ಶಂಕಿತರ ರಕ್ತದ ಸ್ಯಾಂಪಲ್ ಕದ್ದೊಯ್ದ ಕೋತಿಗಳು | Oneindia Kannada

ತರಕಾರಿ ವ್ಯಾಪಾರಕ್ಕೆ ಅವಕಾಶ ಕೊಡದೇ ಇರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ದಿಢೀರ್ ಪ್ರತಿಭಟನೆ ನಡೆಸಿ, ಶಾಸಕಿ ಖನೀಜ್ ಫಾತೀಮಾ ಮತ್ತು ಅವರ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಗೆ ಪ್ರವೇಶಿಸುವ ಅಕ್ರಮ ವಲಸಿಗರ ಮೇಲೆ ನಿಗಾ ವಹಿಸಿಕಲಬುರಗಿ ಜಿಲ್ಲೆಗೆ ಪ್ರವೇಶಿಸುವ ಅಕ್ರಮ ವಲಸಿಗರ ಮೇಲೆ ನಿಗಾ ವಹಿಸಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಅನೇಕ ದಿನಗಳಿಂದ ವ್ಯಾಪಾರ ಬಂದ್ ಮಾಡಲಾಗಿತ್ತು. ಆದರೂ ತಮ್ಮ ಸಮಸ್ಯೆಗೆ ಒಂದು ದಿನವೂ ಸ್ಪಂದಿಸದ ಶಾಸಕಿ ಖನೀಜ್ ಫಾತೀಮಾ ವಿರುದ್ಧ ತರಕಾರಿ ವ್ಯಾಪಾರಸ್ಥರು ಪ್ರತಿಭಟಿಸಿದರು.

Protest By Vegetable Vendors In Kalaburagi City

ಪೊಲೀಸರ ಮೌಖಿಕ ಒಪ್ಪಿಗೆ ಹಿನ್ನೆಲೆಯಲ್ಲಿ ವ್ಯಾಪಾರವನ್ನು ಪುನರಾರಂಭಿಸಿದ್ದರು. ಆದರೆ ಶುಕ್ರವಾರ ಸಂಜೆ ಮತ್ತೆ ವ್ಯಾಪಾರ ಸ್ಥಗಿತಗೊಳಿಸುವಂತೆ ಪೊಲೀಸರು ಹೇಳಿದ್ದರಿಂದ ಆಕ್ರೋಶಗೊಂಡ ತರಕಾರಿ ವ್ಯಾಪಾರಸ್ಥರು ಪ್ರತಿಭಟಿಸಿದರು.

ಕಲಬುರಗಿ: ಬಿಸಿಎಂ ಅಧಿಕಾರಿಗೆ ಶಾಸಕ ರೇವೂರು ಬೆಂಬಲಿಗರಿಂದ ಬೆದರಿಕೆ ಕರೆಕಲಬುರಗಿ: ಬಿಸಿಎಂ ಅಧಿಕಾರಿಗೆ ಶಾಸಕ ರೇವೂರು ಬೆಂಬಲಿಗರಿಂದ ಬೆದರಿಕೆ ಕರೆ

ಪ್ರತಿಭಟನಾ ಸ್ಥಳ ಸೂಪರ್ ಮಾರ್ಕೆಟ್ ಗೆ ಆಗಮಿಸಿದ್ದ ಶಾಸಕಿ ಖನೀಜ್ ಫಾತೀಮಾ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಪ್ರತಿಭಟನಾ ಸ್ಥಳದಿಂದ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ ಕಾಲ್ಕಿತ್ತಿದ್ದಾರೆ.

English summary
Vegetable vendors were protesting at a supermarket in Kalaburagi city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X