ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಪರೀಕ್ಷೆ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ ಕಾಂಗ್ರೆಸ್ ಶಾಸಕ

|
Google Oneindia Kannada News

ಕಲಬುರಗಿ, ಸೆಪ್ಟೆಂಬರ್ 25 : "ದೋಷಪೂರಿತ ಕೋವಿಡ್ ಪರೀಕ್ಷಾ ವರದಿಗಳು ಅನಗತ್ಯ ಗೊಂದಲ ಸೃಷ್ಠಿಸುತ್ತಿವೆ. ಈ ಹಿನ್ನಲೆಯಲ್ಲಿ ಈ ವಿಚಾರವನ್ನೂ ಸರ್ಕಾರದ ಗಮನಕ್ಕೆ ತರಲಿದ್ದೇನೆ" ಎಂದು ಪ್ರಿಯಾಂಕ್‌ ಖರ್ಗೆ ಫೇಸ್ ಬುಕ್ ಫೋಸ್ಟ್‌ ಹಾಕಿದ್ದಾರೆ.

ಮಾಜಿ ಸಚಿವ, ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್‌ ಖರ್ಗೆ ಶುಕ್ರವಾರ ಹಾಕಿರುವ ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದೆ. ಕೋವಿಡ್ ಪರೀಕ್ಷೆಯ ಬಗ್ಗೆಯೇ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮೂರು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಪ್ರಿಯಾಂಕ್‌ ಖರ್ಗೆ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಮೊದಲು ಅವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೂ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು.

ಕೊರೊನಾ ಇದ್ದರೂ ವಿಧಾನಸಭೆ ಕಲಾಪಕ್ಕೆ ಬಂದರಾ ಪ್ರಿಯಾಂಕ್ ಖರ್ಗೆ?ಕೊರೊನಾ ಇದ್ದರೂ ವಿಧಾನಸಭೆ ಕಲಾಪಕ್ಕೆ ಬಂದರಾ ಪ್ರಿಯಾಂಕ್ ಖರ್ಗೆ?

"ಈ ರೀತಿಯ ದೋಷಪೂರಿತ ಪರೀಕ್ಷಾ ವರದಿಗಳು ಅನಗತ್ಯ ಗೊಂದಲ ಸೃಷ್ಠಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನೂ ಸರ್ಕಾರದ ಗಮನಕ್ಕೆ ತರಲಿದ್ದೇನೆ. ಒಬ್ಬ ಜವಾಬ್ದಾರಿಯುತ ಶಾಸಕನಾಗಿ, ಜನರ ಸಮಸ್ಯೆಗಳನ್ನು ಸರ್ಕಾರಕ ಗಮನಕ್ಕೆ ತರುವುದು ಹಾಗೂ ವಿಧಾನಸಭೆಯ ಅಧಿವೇಶನದಲ್ಲಿ ಕ್ಷೇತ್ರದ ಜನರ ಧ್ವನಿಯಾಗುವುದು ನನ್ನ ಆದ್ಯ ಕರ್ತವ್ಯ" ಎಂದು ಹೇಳಿದ್ದಾರೆ.

ಕೋವಿಡ್ ಚಿಕಿತ್ಸೆ ಬಿಲ್ ಕಟ್ಟಲು ಅರ್ಧ ಎಕರೆ ಹೊಲ ಮಾರಬೇಕು! ಕೋವಿಡ್ ಚಿಕಿತ್ಸೆ ಬಿಲ್ ಕಟ್ಟಲು ಅರ್ಧ ಎಕರೆ ಹೊಲ ಮಾರಬೇಕು!

"ಈ ಕರ್ತವ್ಯವನ್ನು ನಿರ್ವಹಿಸಲು ನಾನು ಆರೋಗ್ಯವಾಗಿರುವೆನೆಂದು ಸ್ಥಾನೀಯ ವೈದ್ಯರ ಸಲಹೆ ನಂತರ ವಿಧಾನಸಭೆಯಲ್ಲಿ ಸರ್ಕಾರವನ್ನು ಜನಪರ ಕೆಲಸ ಮಾಡುವಂತೆ ನನ್ನ ಪ್ರಶ್ನೆಗಳನ್ನು ಕೇಂದ್ರೀಕರಿಸಿದ್ದೇನೆ" ಶಾಸಕರು ಪೋಸ್ಟ್ ಹಾಕಿದ್ದಾರೆ.

ಕೋವಿಡ್ ನೆಪ: ಅಧಿವೇಶನ ಮೊಟಕುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ!ಕೋವಿಡ್ ನೆಪ: ಅಧಿವೇಶನ ಮೊಟಕುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ!

ಫೇಸ್ ಬುಕ್ ಪೋಸ್ಟ್

ಫೇಸ್ ಬುಕ್ ಪೋಸ್ಟ್

'ವಿಧಾನಸಭಾ ಅಧಿವೇಶನ ಪ್ರಾರಂಭವಾಗುವುದಕ್ಕೂ 2 ದಿನಗಳ ಮೊದಲು ಅಂದರೆ ಸೆಪ್ಟೆಂಬರ್ 19ರಂದು ನಾನು ಶಿಷ್ಟಾಚಾರದಂತೆ ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ನನ್ನಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ, ಪರೀಕ್ಷೆಯ ವರದಿಯಲ್ಲಿ ನನಗೆ ಕೊರೋನಾ ಪಾಸಿಟಿವ್ ಇರುವುದಾಗಿ ತಿಳಿದು ಬಂದಿತ್ತು" ಎಂದು ಶಾಸಕರು ಹೇಳಿದ್ದಾರೆ.

ಐಸೊಲೇಷನ್‌ಗೆ ಒಳಗಾದರು

ಐಸೊಲೇಷನ್‌ಗೆ ಒಳಗಾದರು

'ವರದಿ ನನ್ನ ಕೈ ಸೇರಿದ ಕೂಡಲೇ, ಕೆಲದಿನಗಳ ಹಿಂದೆ ನನ್ನನ್ನು ಭೇಟಿಯಾದ ಎಲ್ಲರೂ ಪರೀಕ್ಷೆಗೆ ಒಳಪಡುವಂತೆ ಸಾಮಾಜಿಕ ಜಾಲತಾಣದ ಮುಖಾಂತರ ತಿಳಿಸಿದ್ದೆ ಮತ್ತು ಕೊರೋನಾ ಮಾರ್ಗಸೂಚಿಯಂತೆ ನಾನು ಐಸೋಲೇಷನ್‌ಗೆ ಕೂಡಾ ಒಳಗಾಗಿದ್ದೆ. ಆದರೂ, ನನ್ನಲ್ಲಿ ಕೊರೋನಾ ಸಾಂಕ್ರಾಮಿಕದ ಯಾವುದೇ ಲಕ್ಷಣಗಳು ಕಂಡುಬಾರದ ಕಾರಣ ವೈದ್ಯರ ಸಲಹೆಯಂತೆ ಸೆಪ್ಟೆಂಬರ್ 21 ರಂದು ಮತ್ತೊಮ್ಮೆ ಪರೀಕ್ಷೆಗೆ ಒಳಗಾದೆ' ಎಂದು ಶಾಸಕರು ತಿಳಿಸಿದ್ದಾರೆ.

ಪರೀಕ್ಷೆ ವರದಿ ನೆಗೆಟಿವ್

ಪರೀಕ್ಷೆ ವರದಿ ನೆಗೆಟಿವ್

'ಎರಡನೇ ಬಾರಿಯ ಪರೀಕ್ಷೆಯಲ್ಲಿ ನನಗೆ ಕೊರೋನಾ ನೆಗೆಟಿವ್ ಎಂದು ಫಲಿತಾಂಶ ಬಂದಿತ್ತು. ತದನಂತರ, ವೈರಾಲಾಜಿಸ್ಟ್ ಸಲಹೆಯ ಮೇರೆಗೆ ಮತ್ತೇ ಸೆಪ್ಟೆಂಬರ್ 22 ರಂದು ಮೂರನೇ ಬಾರಿಗೆ RT-PCR ಪರೀಕ್ಷೆಗೂ ಒಳಗಾದೆ. ಈ ಪರೀಕ್ಷಾ ವರದಿಯಲ್ಲಿಯೂ ನನಗೆ ಕೊರೋನಾ ಸೋಂಕು ಇಲ್ಲದಿರುವುದು ದೃಢಪಟ್ಟಿತು' ಎಂದು ಶಾಸಕರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Recommended Video

Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada
ಕಲಾಪದಲ್ಲಿ ಪಾಲ್ಗೊಂಡರು

ಕಲಾಪದಲ್ಲಿ ಪಾಲ್ಗೊಂಡರು

ನನಗೆ ಕೊರೋನಾ ಸೊಂಕು ತಗುಲಿರಲಿಲ್ಲವೆಂದು ವೈದ್ಯರ ನಿರ್ದೇಶನದ ನಂತರವಷ್ಟೇ, ಸ್ಪೀಕರ್ ಕಚೇರಿಗೆ, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಮತ್ತು ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಅವರಿಗೆ ಈ ಕುರಿತಾದ ಅಗತ್ಯ ದಾಖಲೆಗಳನ್ನು ತೋರಿಸಿ, ವೈದ್ಯರ ಅಭಿಪ್ರಾಯವನ್ನು ಅವರಿಗೆ ಮನದಟ್ಟು ಮಾಡಿ ನಾನು ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿದ್ದೇನೆ.

English summary
Former minister and Chittapur MLA Priyank Kharge raised voice against COVID 19 test method.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X