ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

PM Modi Visit To Kalaburagi: ಕನ್ನಡದಲ್ಲಿ ಮೋದಿ ಟ್ವೀಟ್, ಹಬ್ಬದ ವಾತಾವರಣ!

|
Google Oneindia Kannada News

ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಬೆನ್ನೆಲ್ಲೆ ಕಲ್ಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿರುವುದು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿದೆ.

'ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು' ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

Karnataka Cold Weather : ಕರ್ನಾಟಕದ ಈ ಭಾಗದಲ್ಲಿ ಮುಂದಿನ 4-5 ದಿನ ಉಷ್ಣಾಂಶ ಇಳಿಕೆ, ಅಧಿಕ ಚಳಿ ಸೃಷ್ಟಿKarnataka Cold Weather : ಕರ್ನಾಟಕದ ಈ ಭಾಗದಲ್ಲಿ ಮುಂದಿನ 4-5 ದಿನ ಉಷ್ಣಾಂಶ ಇಳಿಕೆ, ಅಧಿಕ ಚಳಿ ಸೃಷ್ಟಿ

ಮೋದಿ ಅವರ ಟ್ವೀಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ಗಂಟೆಯಲ್ಲಿ 124.3K ಜನ ಮೋದಿ ಅವರ ಕನ್ನಡದಲ್ಲಿ ಮಾಡಿದ ಟ್ವೀಟ್ ಅನ್ನು ಮೆಚ್ಚಿಕೊಂಡಿದ್ದಾರೆ.

Prime Minister Modi tweeted in Kannada

ಇದರಿಂದ ಜನರಲ್ಲಿ ಮೋದಿಯನ್ನು ಆಹ್ವಾನಿಸುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಜನವರಿ 19ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ಅಲ್ಲಿಂದ ಯಾದಗಿರಿ ಜಿಲ್ಲೆ ಹುಣಸಗಿ ತಲೂಕು ಕೊಡೆಕಲ್‌ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ.

Prime Minister Modi tweeted in Kannada

ಕಲಬುರಗಿಯ ಹಿರಿಯ ಕಲಾವಿದ ವಿಶ್ವೇಶ್ವರಯ್ಯ ಭೋವಿ. ಕಲಬುರಗಿಗೆ ಜ.19ರಂದು ಭೇಟಿ ನೀಡುತ್ತಿರುವ ಪ್ರಧಾನಿ ಮೋದಿಗೆ ಅವರು ತಾನು ನಿರ್ಮಿಸಿದ ಮೂರ್ತಿಯನ್ನು ಉಡುಗೊರೆಯಾಗಿ ಅರ್ಪಿಸಲು ಮುಂದಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪ್ರಧಾನಿಯನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ.

English summary
A festive atmosphere has been created in Kalburgi and Yadgiri districts ahead of Prime Minister Narendra Modi's arrival tomorrow. Meanwhile, Prime Minister Narendra Modi's tweet in Kannada has added to the excitement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X