ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಲ ಗಾಣಗಾಪುರ ದೇವಸ್ಥಾನದ ಐವರು ಅರ್ಚಕರ ವಿರುದ್ಧ ಎಫ್‌ಐಆರ್

|
Google Oneindia Kannada News

ಕಲಬುರಗಿ ಜೂನ್ 24: ದೇವಸ್ಥಾನದ ಹೆಸರಿನಲ್ಲಿ ಅರ್ಚಕರು ಭಕ್ತರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದ ದೇವಲ ಗಾಣಗಾಪುರ ದೇವಸ್ಥಾನದ ಐವರು ಅರ್ಚಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವರು ಕೆಲವು ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರಿ ದೇವಾಲಯವಾಗಿದೆ. ಹೀಗೆ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕಲಬುರಗಿ ಎಸ್ಪಿ ಇಶಾ ಪಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.devalgangapur.com (Shri dattatreya temple.ghanagapur) ಎಂದಿದೆ. ಆದರೆ ಅಧಿಕೃತ ವೆಬ್ ಸೈಟ್ ಹೊರತುಪಡಿಸಿ ಅರ್ಚಕರೇ ಏಳೆಂಟು ನಕಲಿ ವೆಬ್‌ಸೈಟ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಅನೇಕ ಸೇವೆಗಳನ್ನು ಮಾಡಲಾಗುವುದು ಎಂದು ಹಣವನ್ನು ದೋಚಿದ್ದಾರೆ.

Priests cheated millions of rupees in the name of the temple

ಕಲಬುರಗಿ ಜಿಲ್ಲೆ ದೇವಲಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ಮೂಲೆ ಮೂಲೆಗಳಲ್ಲಿ ಭಕ್ತರಿದ್ದು, ಇದನ್ನೇ ಬಂಡವಳ ಮಾಡಿಕೊಂಡ ಗಾಣಗಾಪುರದ ಅರ್ಚಕರು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ದೇವರ ಜೊತೆಗೆ ಭಕ್ತರಿಗೆ ಮೋಸ ಮಾಡಿದ್ದಾರೆ.

Priests cheated millions of rupees in the name of the temple

ಈ ಕುರಿತು ಕಲಬುರಗಿ ಎಸ್‌ಪಿ ಇಶಾ ಪಂತ್ ಮಾತನಾಡಿದ್ದು, "ದೇವಲ ಗಾಣಗಾಪುರ ದೇವಸ್ಥಾನದ ಐವರು ಅರ್ಚಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆಲವು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಇದು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರಿ ದೇವಾಲಯವಾಗಿದೆ. ಹೀಗೆ ಹಣ ಸಂಗ್ರಹಿಸುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ," ಎಂದು ತಿಳಿಸಿದ್ದಾರೆ.

English summary
It has come to light that priests have cheated millions of rupees in the name of the temple. An FIR has been lodged against five priests of Devala Ganagapur Temple in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X