ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾಮೀಜಿ ಸನ್ಯಾಸತ್ವ ಬಿಟ್ಟು ಸಂಸಾರಿಯಾಗಿದ್ದು ಯಾಕೆ?

By Ananthanag
|
Google Oneindia Kannada News

ಕಲಬುರಗಿ, ನವೆಂಬರ್, 7 : ಈ ಸಂಸಾರ ಸಾಕಾಗೋಗಿದೆ.! ಸನ್ಯಾಸತ್ವ ತಗೋಬೇಕು ಅಂತಿದೀನಿ, ಅಂತ ಸಾಮಾನ್ಯವಾಗಿ ಹೇಳುವ ಮಾತೊಂದಿದೆ. ಅದರೆ ಇಲ್ಲಿ ಸನ್ಯಾಸತ್ವವನ್ನು ಬಿಟ್ಟು ಸಂಸಾರಿಯಾದ ಸ್ವಾರಸ್ಯಕರ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ಪ್ರಣಾವಾನಂದ ಸ್ವಾಮೀಜಿ ಸೋಮವಾರ ಸನ್ಯಾಸಾಶ್ರಮದಿಂದ ನಿವೃತ್ತಿ ಹೊಂದಿ ಗೃಹಸ್ಥಾಶ್ರಮಕ್ಕೆ ಪ್ರವೇಶ ಪಡೆದಿದ್ದಾರೆ. ಸೋಮವಾರ ಬೆಳಿಗ್ಗೆ 11.45ರ ಶುಭ ಮುಹೂರ್ತದಲ್ಲಿ ಕೇರಳ ಮೂಲದ ಮೀರಾ ಎಂಬ ವಧುವಿನ ಕೈ ಹಿಡಿದಿದ್ದಾರೆ. [ಸ್ವಾಮೀಜಿಗಳಾಗುವುದೆಂದರೆ ಅಪರಿಗ್ರಹದ ಪರಾಕಾಷ್ಠೆ!]

Pranavananda swamyji Retire to sanyasashrama

ನಗರದ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ ವಿವಾಹ ಮಹೋತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಮಠಾಧೀಶರು ಹಾಗೂ ಪೂಜ್ಯ ಶರಣಬಸಪ್ಪ ಅಪ್ಪ ಸಾಕ್ಷಿಯಾಗಿದ್ದಾರೆ.

ಮದುವೆಗೂ ಮುನ್ನ ರವಿವಾರ ರಾತ್ರಿ ಯುವತಿಗೆ ಶರಣ ಬಸವೇಶ್ವರ ಸಂಸ್ಥಾನದ ಪೂಜ್ಯ ದೊಡ್ಡಪ್ಪ ಅಪ್ಪ ಅವರಿಂದ ಲಿಂಗ ದೀಕ್ಷೆ ನೀಡಲಾಗಿದೆ. ಲಿಂಗದೀಕ್ಷೆ ನೀಡುವ ಸಂದರ್ಭದಲ್ಲಿ ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು. [ಶುಭಸಂಕಲ್ಪ : ಚಿಂತೆ ಬಿಸಾಕು, ಧೈರ್ಯದಿಂದ ಬದುಕು]

Pranavananda swamyji Retire to sanyasashrama

ವಿವಾಹಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ನಮ್ಮದು ಸಾಂಸರಿಕ ಮಠ ಹೀಗಾಗಿ ಮದುವೆ ನಂತರ ಪೀಠ ಹಾಗೂ ಹಿಂದುತ್ವ ಪ್ರತಿಪಾದನೆಯನ್ನು ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.

Pranavananda swamyji Retire to sanyasashrama

ಸಂಸಾರ ಸಾಗರವನ್ನು ದಾಟಿ ಸನ್ಯಾಸತ್ವವನ್ನು ಪಡೆಯುವುದು ಹಿಂದೂ ಸಂಪ್ರದಾಯ ಆದರೆ ಇಲ್ಲಿ ಸ್ವಲ್ಪ ತಿರುಗುಮುರುಗಾಗಿದೆ.

English summary
Pranavananda swamyji Retire to sanyasashrama on monday. marry to the bride meera in kalburagi Sri Sharna bsaveshwara temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X