ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಕಲಬುರಗಿ-ಕೊಲ್ಹಾಪುರ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ

|
Google Oneindia Kannada News

ಕಲಬುರಗಿ, ಸೆಪ್ಟೆಂಬರ್ 16: ಕಲಬುರಗಿ ರೈಲು ನಿಲ್ದಾಣದಲ್ಲಿ ಕಲಬುರಗಿ-ಕೊಲ್ಹಾಪುರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಇಷ್ಟು ದಿನ ಸೊಲ್ಹಾಪುರ-ಮೀರಜ್ ನಡುವೆ ಸಂಚಾರ ನಡುವೆ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ವಿಸ್ತರಣೆ ಮಾಡಲಾಗಿದೆ.

ಶುಕ್ರವಾರ ಕಲಬುರಗಿ ರೈಲು ನಿಲ್ದಾಣದಲ್ಲಿ ಧಾರವಾಡ ಸಂಸದ, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಕಲಬುರಗಿ ಮತ್ತು ಶ್ರೀ ಛತ್ರಪತಿ ಸಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

Breaking; ಶಿವಮೊಗ್ಗ-ಬೆಂಗಳೂರು ನಡುವೆ ಡೆಮು ರೈಲು, ವೇಳಾಪಟ್ಟಿ Breaking; ಶಿವಮೊಗ್ಗ-ಬೆಂಗಳೂರು ನಡುವೆ ಡೆಮು ರೈಲು, ವೇಳಾಪಟ್ಟಿ

ಬಹಳ ದಿನಗಳಿಂದ ಕಲಬುರಗಿಯ ಜನರು ಕಲಬುರಗಿ-ಕೊಲ್ಹಾಪುರ ರೈಲು ಸಂಚಾರಕ್ಕೆ ಬೇಡಿಕೆ ಇಟ್ಟಿದ್ದರು. ಕಲಬುರಗಿ ಸಂಸದ ಉಮೇಶ್ ಜಾಧವ್ ಸಹ ಹಲವಾರು ಬಾರಿ ಕೇಂದ್ರ ಸಚಿವರ ಬಳಿ ಈ ಕುರಿತು ಮನವಿ ಮಾಡಿದ್ದರು.

Fact Check; ಪಿಪಿಪಿ ಮಾದರಿಯಲ್ಲಿ ಪ್ಯಾಸೆಂಜರ್‌ ರೈಲು ಸಂಚಾರ? Fact Check; ಪಿಪಿಪಿ ಮಾದರಿಯಲ್ಲಿ ಪ್ಯಾಸೆಂಜರ್‌ ರೈಲು ಸಂಚಾರ?

Pralhad Joshi Flag Off For Kalaburagi Kolhapur Train

ವೇಳಾಪಟ್ಟಿ; ಕಲಬುರಗಿ-ಕೊಲ್ಹಾಪುರ ನೇರ ರೈಲು ಕಲಬುರಗಿ ನಗರದಿಂದ ಪ್ರತಿದಿನ ಮುಂಜಾನೆ 6.40ಕ್ಕೆ ಹೊರಡಲಿದೆ. ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರಕ್ಕೆ ತಲುಪಲಿದೆ. ಕೊಲ್ಹಾಪುರದಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದ್ದು, ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ.

IRCTC: ರೈಲು ತಡವಾಗಿ ಬಂದರೆ ಟೀ, ಕಾಫಿ, ಆಹಾರ, ಉಪಹಾರ ಉಚಿತ! ಹೇಗೆ? IRCTC: ರೈಲು ತಡವಾಗಿ ಬಂದರೆ ಟೀ, ಕಾಫಿ, ಆಹಾರ, ಉಪಹಾರ ಉಚಿತ! ಹೇಗೆ?

ಈ ರೈಲು ಸಂಚಾರದಿಂದ ಗಾಣಗಾಪುರದ ದತ್ತಾತ್ರೇಯ, ಪಂಡರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಗಳಿಗೆ ತೆರಳುವ ಭಕ್ತರಿಗೆ ಸಹಾಯಕವಾಗಲಿದೆ. ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ನೇರ ರೈಲಿಗೆ ಹಲವು ದಿನಗಳಿಂದ ಜನರು ಬೇಡಿಕೆ ಇಡುತ್ತಿದ್ದರು.

Pralhad Joshi Flag Off For Kalaburagi Kolhapur Train

ಸೊಲ್ಹಾಪುರ-ಮೀರಜ್ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದ ರೈಲನ್ನು ಇದೀಗ ಕಲಬುರಗಿ ಹಾಗೂ ಕೊಲ್ಹಾಪುರದವರೆಗೆ ಎರಡೂ ಮಾರ್ಗಗಳಲ್ಲಿ ವಿಸ್ತರಣೆ ಮಾಡಲಾಗಿದೆ.

ನಿಲ್ದಾಣಗಳು; ಕಲಬುರಗಿಯಿಂದ ಹೊರಡುವ ರೈಲು 7.05ಕ್ಕೆ ಗಾಣಗಾಪುರ, 7.46ಕ್ಕೆ ಅಕ್ಕಲಕೋಟ, 8.25ಕ್ಕೆ ಸೋಲಾಪುರ, 9.30ಕ್ಕೆ ಕುರುಡ್ವಾಡಿ, 10.20ಕ್ಕೆ ಪಂಡರಾಪುರ, 12.45 ಮೀರಜ್, 1.10ಕ್ಕೆ ಜೈಸಿಂಗ್‌ಪುರ, 1.25ಕ್ಕೆ ಹತ್ಕಣಂಗಲೆ ಮೂಲಕ ಕೊಲ್ಹಾಪುರ ತಲುಪಲಿದೆ.

ಕೊಲ್ಹಾಪುರದಿಂದ ಹೊರಡುವ ರೈಲು 3.25ಕ್ಕೆ ಹತ್ಕಣಂಗಲೆ, 3.40ಕ್ಕೆ ಜೈಸಿಂಗ್‌ಪುರ, 4.35ಕ್ಕೆ ಮೀರಜ್, 6.45ಕ್ಕೆ ಪಂಡರಪುರ, 7.40ಕ್ಕೆ ಕುರುಡ್ವಾಡಿ, 8.55ಕ್ಕೆ ಸೋಲಾಪುರ, 9.32ಕ್ಕೆ ಅಕ್ಕಲಕೋಟ, 10.10ಕ್ಕೆ ಗಾಣಗಾಪುರ ಮೂಲಕ ಕಲಬುರಗಿಗೆ ತಲುಪಲಿದೆ.

English summary
At Kalaburagi railway station union minister Pralhad Joshi flagged off for Kalaburagi and Kolhapur train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X