ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೆಡೆ ಕೊರೊನಾ: ಇನ್ನೊಂದೆಡೆ ಕಲಬುರಗಿ ಪೆಟ್ರೋಲ್ ಬಂಕ್ ಎದುರು ಜನಸಾಗರ

|
Google Oneindia Kannada News

ಕಲಬುರಗಿ, ಮಾರ್ಚ್ 18: ಕೊರೊನಾ ವೈರಸ್ ಭೀತಿ ಕರ್ನಾಟಕದ ಜಿಲ್ಲೆಗಳ ಪೈಕಿ ಕಲಬುರಗಿಯಲ್ಲಿ ತುಸು ಹೆಚ್ಚಿದೆ. ಏಕೆಂದರೆ ಕರ್ನಾಟಕದ ಮೊದಲ ಕೊರೊನಾ ಬಲಿ ಇದೇ ಜಿಲ್ಲೆಯಲ್ಲಿ ನಡೆದಿದೆ.

ಹಾಗೆಯೇ ಇನ್ನಿಬ್ಬರು ಕೊರೊನಾ ರೋಗಿಗಳು ಕೂಡ ಅಲ್ಲಿಯೇ ಇದ್ದಾರೆ. ಪೆಟ್ರೋಲ್ ಬಂಕ್ ಬಂದ್ ಆಗಲಿವೆ ಎಂಬ ಸುಳ್ಳು ಸುದ್ದಿಯಿಂದಾಗಿ ಜನರು ರಾತ್ರೋ ರಾತ್ರಿ ಬಂಕ್‌ಗಳಿಗೆ ಮುಗಿಬಿದ್ದಿದ್ದರು.

ಚೀನಾದ ವುಹಾನ್ ರೀತಿ ಕಲಬುರಗಿಯಲ್ಲೂ ದಿಗ್ಬಂಧನ: ಏನೆಲ್ಲಾ ಕ್ರಮ?ಚೀನಾದ ವುಹಾನ್ ರೀತಿ ಕಲಬುರಗಿಯಲ್ಲೂ ದಿಗ್ಬಂಧನ: ಏನೆಲ್ಲಾ ಕ್ರಮ?

ಕಲಬುರಗಿ ಬಂಕ್‌ಗಳ ಮುಂದೆ ಮಂಗಳವಾರ ರಾತ್ರಿಯಿಂದ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಜನರು ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಕಲಬುರಗಿಯಲ್ಲಿ ಪೆಟ್ರೋಲ್, ಡೀಸೆಲ್ ಸಿಗೊಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆ ಸುಳ್ಳು ಸುದ್ದಿ ನಂಬಿದ ಜನರು ತಮ್ಮ ದ್ವಿಚಕ್ರ ವಾಹನ ಹಾಗೂ ಕಾರು ತೆಗೆದುಕೊಂಡು ಪೆಟ್ರೋಲ್ ಬಂಕ್ ಎದುರು ಬಂದು ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡಿದ್ದಾರೆ.

People Standing In Queues All Night In Front Of The Kalaburagi Petrol Bunk

ಕಲಬುರಗಿಯಲ್ಲಿ ಕೊರೊನಾದಿಂದಾಗಿ ಲಾಕ್‌ಡೌನ್ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್, ಡಿಸೇಲ್ ಸಿಗಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಅಥವಾ ಇಲ್ಲಿನ ನಗರಸಭೆ ಆಗಲಿ ಯಾವುದೇ ರೀತಿಯ ಪೆಟ್ರೋಲ್ ಬಂಕ್‍ಗಳನ್ನು ಬಂದ್ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನೋಡಿ ತಮ್ಮ ದ್ವಿಚಕ್ರ ವಾಹನ ಹಾಗೂ ಕಾರು ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿಸಲು ಬಂಕ್ ಬಳಿ ಬಂದಿದ್ದಾರೆ.

English summary
People Standing In Queues All Night In Front Of The Kalaburagi Petrol Bunk because of one fake news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X