ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಹಿತ್ಯ ಸಮ್ಮೇಳನ; ಕಲಬುರಗಿಯಲ್ಲಿ ಎಲ್ಲೇ ಸಂಚರಿಸಿದರೂ 5 ರು ಬಸ್ ದರ

|
Google Oneindia Kannada News

ಕಲಬುರಗಿ, ಫೆಬ್ರವರಿ 5: ಕಲಬುರಗಿಯಲ್ಲಿ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಆರಂಭವಾಗಿದೆ. ನುಡಿಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಹಿ ಸುದ್ದಿ ನೀಡಿದೆ.

ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನ ಮುಗಿಯುವವರೆಗೆ, ಪ್ರಯಾಣಿಕರು ಕಲಬುರಗಿ ನಗರದಲ್ಲಿ ಎಲ್ಲಿಗೇ ಸಂಚರಿಸಿದರೂ 5 ರುಪಾಯಿ ಮಾತ್ರ ಟಿಕೆಟ್ ದರವನ್ನು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿಗದಿಪಡಿಸಿದೆ. ಇದರಿಂದ ಜನಸಾಮಾನ್ಯರು ಸಮ್ಮೇಳನ ನಡೆಯುವ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಹೋಗಿ ಬರಲು ಅನುಕೂಲ ಆಗಿದೆ.

85 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕಳೆಗಟ್ಟಿದ ಕಲಬುರಗಿ85 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕಳೆಗಟ್ಟಿದ ಕಲಬುರಗಿ

ನಗರದ ಎಲ್ಲ ಪ್ರದೇಶಗಳಿಂದ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಈಶಾನ್ಯ ಸಾರಿಗೆ ಬಸ್‌ಗಳು ಸಂಚರಿಸಲಿವೆ. ಯಾರೇ ಪ್ರಯಾಣಿಕರೂ ನಗರದಲ್ಲಿ ಎಲ್ಲಿಯೇ ಹತ್ತಿ ಇಳಿದರೂ ಕೇವಲ 5 ರುಪಾಯಿ ನಿಗದಿಪಡಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಮ್ ತಿಳಿಸಿದ್ದಾರೆ.

Only 5 Rupees Bus Fair In Kalaburagi Sahitya Sammelana

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಹಾಕಲಾಗಿರುವ ಶ್ರೀವಿಜಯ ಮುಖ್ಯವೇದಿಕೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಿ ಸಾಹಿತ್ಯ ಜಾತ್ರೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದಾರೆ. ಕಲಬುರಗಿಯಲ್ಲಿ ನುಡಿಜಾತ್ರೆ ಕಳೆಗಟ್ಟಿದೆ.

English summary
Only 5 Rupees Bus Fair In Kalaburagi Sahitya Sammelana. North East Karnataka Road Transport Corporation Announced It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X