ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಲಿತರ ಮನೆ ಊಟ ಎಂಬುದು ಬಿಜೆಪಿಯ ಗಿಮಿಕ್: ಪ್ರಿಯಾಂಕ್ ಖರ್ಗೆ

|
Google Oneindia Kannada News

ಚಿತ್ತಾಪುರ (ಕಲಬುರಗಿ), ಜೂನ್ 3: "ಜನರ ಭರವಸೆಯನ್ನು ಹಾಗೂ ಸಂಪರ್ಕವನ್ನು ಕಳೆದುಕೊಂಡಂಥ ಬಿಜೆಪಿ, ಜನಸಂಪರ್ಕಕ್ಕಾಗಿ ಹೊರಟಿದೆ" ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆ ದೃಷ್ಟಿಯಿಂದ ದಲಿತರ ಮನೆಯಲ್ಲಿ ಊಟ ಎಂದು ಯಡಿಯೂರಪ್ಪ ಗಿಮಿಕ್ ಮಾಡುತ್ತಿದ್ದಾರೆ ಎಂದಿದ್ದಾರೆ.

ಎಸ್ ಸಿಪಿ/ಟಿಎಸ್ ಪಿ ಯೋಜನೆ ಅಡಿಯಲ್ಲಿ ದಲಿತರ ಏಳ್ಗೆಗಾಗಿ ರಾಜ್ಯ ಸರಕಾರ 27 ಸಾವಿರ ಕೋಟಿ ರುಪಾಯಿ ಮೀಸಲಿಟ್ಟಿದ್ದರೆ, ಪ್ರಧಾನಿ ಮೋದಿ ನೇತೃತ್ವದ ಸರಕಾರ ಇಡೀ ದೇಶಕ್ಕೆ ಮೀಸಲಿಟ್ಟಿದ್ದು 45 ಸಾವಿರ ಕೋಟಿ ರುಪಾಯಿ ಮಾತ್ರ. ಇದರಿಂದಲೇ ಇವರಿಗೆ ದಲಿತರ ಬಗ್ಗೆ ಎಂಥ ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.[ಪರೀಕ್ಷೆಯೇ ಬರೆಯದ ಕೇಂದ್ರ ಸರಕಾರಕ್ಕೆ ಅಂಕ ಕೊಡೋದೇನು: ಸಿಎಂ ಸಿದ್ದು]

Now BJP trying to access with People: Priyank Kharge

ರಾಜ್ಯದ ರೈತರ ಶೇ ಐವತ್ತರಷ್ಟು ಸಾಲ ಮನ್ನಾ ಮಾಡಲು ಕಾಂಗ್ರೆಸ್ ಸರಕಾರ ಸಿದ್ಧವಿದೆ. ಬಾಕಿ ಶೇ ಐವತ್ತರಷ್ಟು ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಲಿ. ಅದು ಬಿಟ್ಟು ಯಡಿಯೂರಪ್ಪನವರು ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೊರಟಿದ್ದಾರೆ. ಸಾಲ ಮನ್ನಾ ಮಾಡಿಸಲು ಆಗದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲಿ ಎಂದು ಹೇಳಿದರು.

English summary
BJP lost people faith and access, so now they are trying to get that with Jansaparka campain, said by minister Priyank Kharge in Chittapur, Kalaburagi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X