ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸದರಾದ ಮೊದಲ ದಿನವೇ ಕೇಂದ್ರ ಸಚಿವರಾಗುವ ಆಕಾಂಕ್ಷೆ ವ್ಯಕ್ತಪಡಿಸಿದ ಉಮೇಶ್ ಜಾಧವ್

|
Google Oneindia Kannada News

ಕಲಬುರಗಿ, ಮೇ 24: ನಾನಾಗಿಯೇ ಕೇಂದ್ರದಲ್ಲಿ ಸಚಿವ ಸ್ಥಾನ ಕೇಳುವುದಿಲ್ಲ ಅವರಾಗಿಯೇ ನೀಡಿದಲ್ಲಿ, ನಿಭಾಯಿಸಲು ಸಿದ್ಧನಿದ್ದೇನೆ ಅರ್ಹನಿದ್ದೇನೆ ಎಂದು ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಸಚಿವ ಕೊಟ್ಟರೆ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸಿದ್ಧನಿದ್ದೇನೆ. ಆದರೆ ನಾನಗಿಯೇ ಕೇಳುವುದಿಲ್ಲ, ಹಲವು ಕಾಂಗ್ರೆಸ್ ಸ್ನೇಹಿತರು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಸುಳಿವು ನೀಡಿದರು.

ಇನ್ನೊಂದು ದಿನದಲ್ಲಿ ರಾಜ್ಯ ಸರ್ಕಾರದ ಕತೆ ಗೋವಿಂದ! ಉಮೇಶ್ ಜಾಧವ್ ಇನ್ನೊಂದು ದಿನದಲ್ಲಿ ರಾಜ್ಯ ಸರ್ಕಾರದ ಕತೆ ಗೋವಿಂದ! ಉಮೇಶ್ ಜಾಧವ್

ನಮಗೆ ಮೈತ್ರಿ ಬೀಳಿಸುವ ಯಾವ ಅಗತ್ಯವೂ ಇಲ್ಲ, ಎನ್ನುತ್ತಾ ಸಂಸದರಾಗಿ ಮೊದಲ ದಿನವೇ ಕೇಂದ್ರ ಸಚಿವರಾಗುವ ಆಕಾಂಕ್ಷೆಯನ್ನು ಹೊರಹಾಕಿದ್ದಾರೆ. ಅವರು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಯಸಾಧಿಸಿದ್ದರು.

Newly elected MP Umesh Jadhav eying on union minister post

ಒಂದೊಮ್ಮೆ ಜಾಧವ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದರೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡುವುದು ಸುಲಭವಾಗುತ್ತದೆ, ಕಾಂಗ್ರೆಸ್‌ನ ಅತೃಪ್ತ ನಾಯಕರು ಬಿಜೆಪಿಗೆ ಬರುವುದರಲ್ಲಿ ಯಾವ ಸಂಶಯವೂ ಇಲ್ಲ ಎಂಬ ಕುರಿತು ಬಿಜೆಪಿ ಹೈಕಮಾಂಡ್ ಕೂಡ ಆಲೋಚಿಸಿದಂತಿದೆ. ಶೀಘ್ರ ಬಿಜೆಪಿ ಹೈಕಮಾಂಡ್ ಬಳಿ ಮಾತನಾಡಲು ನಿರ್ಧರಿಸಿದ್ದೇನೆ ಎಂದು ಉಮೇಶ್ ಜಾಧವ್ ತಿಳಿಸಿದರು.

English summary
Newly elected MP from Kalaburagi Umesh Jadhav expecting union ministry and he says that Capable to handle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X