• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈಶಾನ್ಯ ಸಾರಿಗೆಯಿಂದ ನಾನ್ ಎಸಿ ಸ್ಲೀಪರ್ ಬಸ್‍ ಟಿಕೆಟ್ ದರ ಆಫರ್

|

ಕಲಬುರಗಿ, ಜನವರಿ 03: ಪ್ರಯಾಣಿಕರ ಕೋರಿಕೆ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕೆಳಕಂಡ ಮಾರ್ಗಗಳಲ್ಲಿ ಪ್ರೋತ್ಸಾಹದಾಯಕ ದರದಲ್ಲಿ ನೂತನವಾಗಿ ನಾನ್ ಎಸಿ ಸ್ಲೀಪರ್ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮರಾವ್.ಎಂ. ಅವರು ತಿಳಿಸಿದ್ದಾರೆ.

ಯಾದಗಿರಿಯಿಂದ ಬೆಂಗಳೂರಿಗೆ ಸಂಜೆ 7 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ರೂ.850 ಇರುತ್ತದೆ. ಶಕ್ತಿನಗರದಿಂದ ಬೆಂಗಳೂರಿಗೆ ರಾತ್ರಿ 8.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ 775 ರೂ.ಇರುತ್ತದೆ. ರಾಯಚೂರದಿಂದ ಬೆಂಗಳೂರಿಗೆ ರಾತ್ರಿ 9.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ 750 ರೂ.ಇರುತ್ತದೆ.

ಮಂತ್ರಾಲಯದಿಂದ ಬೆಂಗಳೂರಿಗೆ ರಾತ್ರಿ 10.45 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ 680 ರೂ.ಹಾಗೂ ಬೆಂಗಳೂರಿನಿಂದ ರಾಯಚೂರಿಗೆ ರಾತ್ರಿ 7.45 ಗಂಟೆಗೆ ಹೊರಡಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

English summary
North East Karnataka Regional Transport corporation to run NON AC Sleeper Bus Transport with offer price on Ticket fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X