ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯಲ್ಲಿ ಖರ್ಗೆ ಮೇಲೆ ಬಿತ್ತು ಪ್ರಧಾನಿ ಮೋದಿ ಕಣ್ಣು!

|
Google Oneindia Kannada News

Recommended Video

ಕಲಬುರ್ಗಿಯಲ್ಲಿ ನಡೆದ ಮೋದಿ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ನಾಮಸ್ಮರಣೆ

ಕಲಬುರಗಿ, ಮೇ 3: ತಾವು ನಿಂತ ನೆಲಕ್ಕೆ ಸಂಬಂಧಿಸಿದ ವ್ಯಕ್ತಿ, ಪರಿಸರ, ಸಮಸ್ಯೆ ಮುಂತಾದ ಸಂಗತಿಗಳನ್ನು ಪ್ರಸ್ತಾಪಿಸುವ ಮೂಲಕ ಅಲ್ಲಿನ ಜನರನ್ನು ಸೆಳೆಯುವುದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತಂತ್ರಗಳಲ್ಲಿ ಒಂದು.

ಗುರುವಾರ ಕಲಬುರಗಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಭಾಷಣದ ನಡುವೆ ಅನೇಕ ಬಾರಿ ಎಳೆದು ತಂದರು. ಕಲಬುರಗಿಯಲ್ಲಿ ಆಳವಾದ ರಾಜಕೀಯ ನೆಲೆ ಹೊಂದಿರುವ ಖರ್ಗೆ ಅವರಿಗೆ ಕಾಂಗ್ರೆಸ್‌ನಲ್ಲಿ ಅನ್ಯಾಯವಾಗಿದೆ ಎನ್ನುವ ಮೂಲಕ ಭಾವನಾತ್ಮಕವಾಗಿ ಜನರ ಮೇಲೆ ಪ್ರಭಾವ ಬೀರಲು ಮುಂದಾದರು. ಜತೆಗೆ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ದಲಿತ ಬ್ರ್ಯಾಂಡ್‌ಅನ್ನೂ ಬಳಸಿಕೊಂಡರು.

narendra modi speech on mallikarjun kharge in kalaburagi

ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಕೆಲವು ಅಂಶಗಳು ಇಲ್ಲಿವೆ...

ಕನ್ನಡ ಸ್ವಾಭಿಮಾನ ಮರೆತರೇ ಖರ್ಗೆ?: ಹಿಂದಿ ಭಾಷಣಕ್ಕೆ ಟೀಕೆಕನ್ನಡ ಸ್ವಾಭಿಮಾನ ಮರೆತರೇ ಖರ್ಗೆ?: ಹಿಂದಿ ಭಾಷಣಕ್ಕೆ ಟೀಕೆ

* ಕಾಂಗ್ರೆಸ್ ದಲಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಅವರ ಬಗ್ಗೆ ಕಾಳಜಿಯಿಲ್ಲ.

* ಕಳೆದ ವಿಧಾನಸಭೆ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿ ದಲಿತ ಸಮುದಾದವರ ದಿಕ್ಕುತಪ್ಪಿಸಿತು. ಗುಪ್ತ ಮತದಾನದ ರೂಪದಲ್ಲಿ ಖರ್ಗೆ ಬದಲು ಬೇರೆಯವರನ್ನು ಸಿಎಂ ಮಾಡಿದರು.

* ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮಲ್ಲಿಕಾರ್ಜುನ ಖರ್ಗೆಯವರ ಪರಿವಾರದ ಆಸ್ತಿ ನೆನೆಸಿಕೊಂಡರೆ ಗಾಬರಿಯಾಗುತ್ತದೆ.

ಕುದಿಯುತ್ತಿರುವ ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ ಮೋದಿಕುದಿಯುತ್ತಿರುವ ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ ಮೋದಿ

* ದಲಿತರನ್ನು ಉದ್ಧಾರ ಮಾಡುವ ಬದಲು ಕಾಂಗ್ರೆಸ್ ನವರು ಸ್ವಂತ ಉದ್ಧಾರವನ್ನೇ ಕಾಯಕ ಮಾಡಿಕೊಂಡಿದ್ದಾರೆ.

* ಕಲಬುರಗಿಗೂ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರಿಗೂ ವಿಶೇಷ ಸಂಬಂಧವಿದೆ. ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳಲು ನಿರಾಕರಿಸಿದ್ದರು. ಆದರೆ ಪಟೇಲರು ಅವರನ್ನು ಮಣಿಸಿ ಭಾರತದಲ್ಲಿ ಸೇರಿಸಿಕೊಂಡರು. ಅಂತಹ ಪಟೇಲರನ್ನು ಕೂಡ ಕಾಂಗ್ರೆಸ್ ಸ್ಮರಿಸಿಕೊಳ್ಳುವ ಕೆಲಸ ಮಾಡಲಿಲ್ಲ.

* ಕಲಬುರಗಿಯನ್ನು ತೊಗರಿ ಕಣಜ ಎನ್ನುತ್ತಾರೆ. ಇಡೀ ದೇಶದಲ್ಲಿಯೇ ಇಲ್ಲಿನ ತೊಗರಿ ಬ್ರ್ಯಾಂಡೆಡ್ ಆಗಿದೆ. ದೇಶದಲ್ಲಿ ಅರ್ಧದಷ್ಟು ತೊಗರಿ ಬೆಳೆ ಇಲ್ಲಿನ ರೈತರ ಪರಿಶ್ರಮವಾಗಿದೆ. ಆದರೆ ಇಲ್ಲಿನ ಸರ್ಕಾರಕ್ಕೆ ತೊಗರಿ ಬೆಳೆಗಾರರ ಸಂಕಷ್ಟ ಅರ್ಥ ಮಾಡಿಕೊಳ್ಳುವ ಸೌಜನ್ಯವೂ ಇಲ್ಲ.

English summary
Prime minister Narendra Modi attacked congress for using Dalit brand to gain power. Kharge was sidelined by congress after the election, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X