ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುದಿಯುತ್ತಿರುವ ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ ಮೋದಿ

By Manjunatha
|
Google Oneindia Kannada News

ಕಲಬುರಗಿ, ಮೇ 03: ನೆಹರು ಅವರು ಕರ್ನಾಟಕದ ವೀರಪುತ್ರ ಫೀಲ್ಡ್‌ ಫಾರ್ಷಲ್ ಕಾರಿಯಪ್ಪ ಅವರನ್ನು ಗೂಂಡಾ ಎಂದು ಕರೆದಿದ್ದರು, ಅಂತಹ ಪಕ್ಷದವರಿಗೆ ನೀವು ಓಟು ಹಾಕುತ್ತೀರಾ? ಎಂದು ಮೋದಿ ಪ್ರಶ್ನಿಸಿದರು.

ಕಲಬುರಗಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ನೆಹರು ಸೇರಿದಂತೆ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಈ ವರೆಗೂ ಸೈನಿಕರಿಗೆ ಗೌರವ ಸಲ್ಲಿಸಿಯೇ ಇಲ್ಲ ಎಂದರು.

ಕಲ್ಬುರ್ಗಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ವಿಶೇಷ ಸಂಬಂಧವಿದೆ. ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಲ್ಲಳು ನಿರಾಕರಿಸಿದ್ದರು, ಆದರೆ ಪಟೇಲರು ಅವರನ್ನು ಮಣಿಸಿ ಭಾರತದಲ್ಲಿ ಸೇರಿಸಿಕೊಂಡರು.ಅಂಥಾ ಪಟೇಲರನ್ನು ಕೂಡಾ ಕಾಂಗ್ರೆಸ್ ನೆನೆಸಿಕೊಳ್ಳುವ ಕೆಲಸ ಮಾಡಲಿಲ್ಲ ಅಂತಹವರಿಗೆ ಮತ ಹಾಕುತ್ತೀರಾ ಎಂದರು.ಕಲಬುರಗಿಯಲ್ಲಿ ಈಗ 43.04 ಗರಿಷ್ಠ ತಾಪಮಾನ. ಈ ಅತಿಯಾದ ಬಿಸಿಲಿನ ಝಳದ ನಡುವೆಯೂ ಮೋದಿ ಅವರ ಭಾಷಣ ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಿದ್ದರು. ಟವೆಲ್‌ಗಳಲ್ಲಿ, ಕರವಸ್ತ್ರಗಳಲ್ಲಿ ಬೆವರು ಒರೆಸಿಕೊಳ್ಳುತ್ತಲೇ ಮೋದಿ ಅವರ ಮಾತುಗಳನ್ನು ಆಲಿಸಿದರು.

ಬಿಸಿಲಿನಲ್ಲಿ ನಿಂತಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಬೇಕೆಂಬ ಧೃಡ ನಿರ್ಧಾರದಿಂದ ಬಿಸಿಲಿನ ಝಳವನ್ನು ಲೆಕ್ಕಿಸದೆ ನೀವಿಲ್ಲಿ ಬಂದಿದ್ದೀರಾ ನಿಮಗೆಲ್ಲಾ ನನ್ನ ಧನ್ಯವಾದಗಳು ಎಂದರು.

Narendra Modi speech in Kalaburgi Live

Newest FirstOldest First
1:19 PM, 3 May

ಸ್ವಚ್ಛ, ಸುಂದರ, ಶಾಂತಿಯುತ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ, ಯಡಿಯೂರಪ್ಪ ಅವರ ಕೈ ಬಲಪಡಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಹೇಳಿ ಮೋದಿ ಅವರು ಕಲಬುರಗಿಯಲ್ಲಿ ತಮ್ಮ ಭಾಷಣ ಮುಗಿಸಿದರು.
1:18 PM, 3 May

ಬಿಜೆಪಿಯು ಎಲ್ಲ ಸಮುದಾಯದ, ಮಹಿಳೆ, ಪುರುಷರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಇಟ್ಟುಕೊಂಡು ಕಾರ್ಯ ಮಾಡುತ್ತಿದೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ಹಾಕಿ, ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ.
1:17 PM, 3 May

ವೀರ ಸೈನಿಕರನ್ನು ಕೂಡಾ ಗೂಂಡಾಗಳು ಎಂದು ಕಾಂಗ್ರೆಸ್ ಕರೆದಿದೆ.ಸೈನಿಕರನ್ನೂ ಕೂಡಾ ಅವಮಾನ ಮಾಡಿದ್ದು ಕಾಂಗ್ರೆಸ್.ಪ್ರತೀ ಕ್ಷಣ ದೇಶದ ರಕ್ಷಣೆಗೆ ನಿಲ್ಲುವ ಅವರಿಗೆ ಅವಮಾನ ಮಾಡಿದ್ದು ಘೋರ ಅಪರಾಧ.ಈ ಅಪರಾಧಕ್ಕೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲೇಬೇಕಿದೆ
1:17 PM, 3 May

ಕಾಂಗ್ರೆಸ್‌ನವರು ಸೇನೆಯನ್ನು ಅವಮಾನಿಸಿದರು, ವಂದೇ ಮಾತರಂ ಗೀತೆಗೂ ಅವಮಾನಿಸಿದರು, ಇಂಥವರಿಂದ ದೇಶ ಭಕ್ತಿ ಅಪೇಕ್ಷಿಸಲು ಸಾಧ್ಯವಿಲ್ಲ
1:17 PM, 3 May

ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದೇವೆ. ಆದರೆ ಕಾಂಗ್ರೆಸ್ ನಾಚಿಕೆ ಇಲ್ಲದೆ, ಸರ್ಜಿಕಲ್ ಸ್ಟ್ರೈಕ್ ಮಾಡಿದ ಬಗ್ಗೆ ಸಾಕ್ಷಿ ಕೇಳುತ್ತಿದ್ದಾರೆ. ದಾಳಿ ಮಾಡಲು ಕ್ಯಾಮರಾ ಹಿಡಿದುಕೊಂಡು ಹೋಗಬೇಕಾ, ಗನ್ ಹಿಡಿದುಕೊಂಡು ಹೋಗಬೇಕಾ?
1:16 PM, 3 May

ಕಲಬುರಗಿಯನ್ನು ತೊಗರಿ ಕಣಜ ಎನ್ನುತ್ತಾರೆ.ಇಡೀ ದೇಶದಲ್ಲಿಯೇ ಇಲ್ಲಿನ ತೊಗರಿ ಬ್ರ್ಯಾಡೆಂಡ ಆಗಿದೆ. ದೇಶದಲ್ಲಿ ಅರ್ಧದಷ್ಟು ತೊಗರಿ ಬೆಳೆ ಇಲ್ಲಿನ ರೈತರ ಪರಿಶ್ರಮವಾಗಿದೆ.ಆದರೆ,ಇಲ್ಲಿನ ಸರ್ಕಾರಕ್ಕೆ ತೊಗರಿಬೆಳೆಗಾರರ ಸಂಕಷ್ಟ ಅರ್ಥ ಮಾಡಿಕೊಳ್ಳುವ ಸೌಜನ್ಯವೂ ಇಲ್ಲ
1:14 PM, 3 May

ಆದಿವಾಸಿ, ಪರಿಶಿಷ್ಟ ಪಂಗಡ, ಜಾತಿಗಳ ಸಮುದಾಯಕ್ಕೆ ನಮ್ಮ ಸರ್ಕಾರ ನೀಡಿದಷ್ಟು ಪ್ರಾಮುಖ್ಯತೆ ಯಾರೂ ನೀಡಿಲ್ಲ, ನಾವು ಅವರ ಜೀವನ ಸುಧಾರಿಸುವ ಪ್ರಯತ್ನ ಮಾಡಿದ್ದೇವೆ, ಆದರೆ ಕರ್ನಾಟಕ ಸರ್ಕಾರ ದಲಿತರಿಗಾಗಿ ಹಣ ಎತ್ತಿಡುತ್ತದೆ ಆದರೆ ಖರ್ಚು ಮಾಡುವುದಿಲ್ಲ.
Advertisement
1:11 PM, 3 May

ದೆಹಲಿಯಲ್ಲಿ ಕ್ಯಾಂಡಲ್ ಮಾರ್ಚ್ ಮಾಡುವ ಜನರಿಗೆ (ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ) ಅವರಿಗೆ ಕೇಳುತ್ತೇನೆ, ಇಲ್ಲೇ ಪಕ್ಕದ ಬೀದರ್‌ನಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಆದಾಗ ನಿಮ್ಮ ಕಾಳಜಿ ಎಲ್ಲಿ ಹೋಗಿತ್ತು.
1:11 PM, 3 May

ಎಲ್ಲೆಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುತ್ತದೆಯೋ ಅಲ್ಲೆಲ್ಲಾ ಆಯಾ ಸಚಿವರ ಕುಟುಂಬ ಮಾತ್ರ ಬೆಳೆಯುತ್ತದೆ. ನಿಮಗೆ ಅಂದಾಜಿದೆಯಾ ಖರ್ಗೆ ಅವರ ಸಂಪತ್ತು ಎಷ್ಟಿದೆ ಎಂದು?
1:10 PM, 3 May

ದಲಿತರ ಪರ ಸರ್ಕಾರ ನಮ್ಮದು ಎಂದು ಬೀಗುವ ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಹೇಳುತ್ತಿದ್ದರು ನಾವು ಖರ್ಗೆಯನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು. ಆದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ ಈಗ ಮತ್ತೆ ದಲಿತರ ಮಾತನಾಡುತ್ತಿದ್ದಾರೆ.
1:10 PM, 3 May

ಈ ಚುನಾವಣೆ ಯಾರನ್ನೂ ಶಾಸಕರಾಗಿ, ಮಂತ್ರಿಯನ್ನಾಗಿ ಮಾಡುವುದರ ಬಗ್ಗೆ ಕುರಿತಂತೆ ಅಲ್ಲ. ಈ ಚುನಾವಣೆ ಕರ್ನಾಟಕದ ಯುವಕರ ಭವಿಷ್ಯದ ಬಗ್ಗೆ, ರೈತರ ಹಿತಾಸಕ್ತಿಯ ಬಗ್ಗೆ, ಹೆಣ್ಣು ಮಕ್ಕಳ ಸುರಕ್ಷತೆಯ.
1:10 PM, 3 May

ಕಲ್ಬುರ್ಗಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ವಿಶೇಷ ಸಂಬಂಧವಿದೆ. ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಲ್ಲಳು ನಿರಾಕರಿಸಿದ್ದರು, ಆದರೆ ಪಟೇಲರು ಅವರನ್ನು ಮಣಿಸಿ ಭಾರತದಲ್ಲಿ ಸೇರಿಸಿಕೊಂಡರು.ಅಂಥಾ ಪಟೇಲರನ್ನು ಕೂಡಾ ಕಾಂಗ್ರೆಸ್ ನೆನೆಸಿಕೊಳ್ಳುವ ಕೆಲಸ ಮಾಡಲಿಲ್ಲ ಅಂತಹವರಿಗೆ ಮತ ಹಾಕುತ್ತೀರಾ ಎಂದರು.
Advertisement

English summary
Prime minster Narendra Modi speech at Kalaburgi, He fires on Nehru and congress and said Congress never respect Soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X