ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು; ಜನರ ಆಕ್ರೋಶ

|
Google Oneindia Kannada News

ಕಲಬುರಗಿ, ನವೆಂಬರ್ 29 : ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಸಂಚಾರ ನಿಲ್ಲಿಸಿದ್ದ ರೈಲು ಡಿಸೆಂಬರ್ 7ರಿಂದ ಆರಂಭವಾಗಲಿದೆ.

ಈ ಹಿಂದೆ ಈ ರೈಲು ಮುಂಬೈನಿಂದ ಆಗಮಿಸಿ ಕಲಬುರಗಿ ಮೂಲಕ ಬೆಂಗಳೂರು ತಲುಪಿ ಅಲ್ಲಿಂದ ನಾಗರಕೋಯಿಲ್‌ಗೆ ಸಂಚಾರ ನಡೆಸುತ್ತಿತ್ತು. ಈ ರೈಲು ಮೂಲಕ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯ ಜನರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು.

ನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ; ಪಟ್ಟಿ ನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ; ಪಟ್ಟಿ

ರೈಲ್ವೆ ಇಲಾಖೆ ಮುಂಬೈ-ನಾಗರಕೋಯಿಲ್ ರೈಲು ಮಾರ್ಗ, ಸಮಯವನ್ನು ಬದಲಾವಣೆ ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. "ಇಲಾಖೆ ಅಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ" ಎಂದು ಸಂಸದ ಉಮೇಶ್ ಜಾಧವ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ-ಲಾತೂರ; ನೂತನ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ ಕಲಬುರಗಿ-ಲಾತೂರ; ನೂತನ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ

Mumbai-Nagercoil Junction Railway Route Change

ರೈಲಿನ ಸಮಯವನ್ನು ಸಹ ಬದಲಾವಣೆ ಮಾಡಲಾಗಿದೆ. ಮೊದಲು ರಾತ್ರಿ 10.30ಕ್ಕೆ ಕಲಬುರಗಿಗೆ ಬರುತ್ತಿದ್ದ ರೈಲು ಬೆಂಗಳೂರಿಗೆ ತೆರಳುವ ಜನರಿಗೆ ಸಹಾಯಕವಾಗಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಮುಂಜಾನೆ 5.38ಕ್ಕೆ ರೈಲು ಕಲಬುರಗಿಗೆ ಬರಲಿದೆ.

ಯಶವಂತಪುರ-ವಾಸ್ಕೋ ನಡುವೆ ಪ್ರತಿದಿನದ ವಿಶೇಷ ರೈಲು ಯಶವಂತಪುರ-ವಾಸ್ಕೋ ನಡುವೆ ಪ್ರತಿದಿನದ ವಿಶೇಷ ರೈಲು

ಮಾರ್ಗ ಬದಲು: ಈ ಮೊದಲು ಮುಂಬೈ-ನಾಗರಕೋಯಿಲ್ ರೈಲು ಯಾದಗಿರಿ, ರಾಯಚೂರು, ಮಂತ್ರಾಲಯಂ ರಸ್ತೆ, ಅಧೋನಿ, ಗುಂತಕಲ್, ಅನಂತಪುರಂ, ಧರ್ಮಾವರಂ, ಪೆನುಗೊಂಡ, ಹಿಂದೂಪುರ ಗೌರಿಬಿದನೂರು ಮೂಲಕ ಬೆಂಗಳೂರಿಗೆ ಹೋಗುತ್ತಿತ್ತು.

ಆದರೆ, ಮಾರ್ಗ ಬದಲಾವಣೆ ಮಾಡಲಾಗಿದ್ದು ಧರ್ಮಾವರಂನಿಂದ ರೈಲು ಕದಿರಿ, ಮದನಪಲ್ಲಿ ರಸ್ತೆ, ಚಿತ್ತೂರು, ಸೇಲಂ, ತಿರುವಲ್ಮೇಲಿ ಮೂಲಕ ನಾಗರಕೋಯಿಲ್ ತಲುಪಲಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿಪ್ರಾಯ ಪಡೆಯದೇ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಲಾಕ್ ಡೌನ್ ಬಳಿಕ ರದ್ದುಗೊಂಡಿರುವ ಸೊಲ್ಹಾಪುರ-ಹಾಸನ ರೈಲನ್ನು ಇನ್ನೂ ಆರಂಭಿಸಿಲ್ಲ. ಬಸವ ಎಕ್ಸ್‌ಪ್ರೆಸ್ ಬಳಿಕ ಬೆಂಗಳೂರಿಗೆ ತೆರಳಲು ಯಾವುದೇ ರೈಲು ಇಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

English summary
Railway department changed the Mumbai-Nagercoil junction railway route which will run from December 7, 2020. People of Kalaburagi upset over the new route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X