ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ'ಸಿಎಂ' ಟ್ವೀಟ್ ಬಗ್ಗೆ ಕಾಲೆಳೆದ ಅರವಿಂದ ಲಿಂಬಾವಳಿ

|
Google Oneindia Kannada News

ಚಿಂಚೋಳಿ, ಮೇ 16: 'ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು' ಎಂದು ಇತ್ತೀಚೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿರುವ ಟ್ವೀಟ್ ಬಗ್ಗೆ ಶಾಸಕ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿದ್ದಾರೆ. ಇದು ವಿಶ್ವಾಸದ ಪ್ರೀತಿಯೋ.. ಕಾಲೆಳೆಯೋ ಪ್ರಿತಿಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದು ಟ್ವೀಟ್ ಗುದ್ದಿಗೆ ತಣ್ಣಗಾದ ಕುಮಾರಸ್ವಾಮಿ ಮತ್ತು 'ಸಿಎಂ' ಚರ್ಚೆ ಸಿದ್ದು ಟ್ವೀಟ್ ಗುದ್ದಿಗೆ ತಣ್ಣಗಾದ ಕುಮಾರಸ್ವಾಮಿ ಮತ್ತು 'ಸಿಎಂ' ಚರ್ಚೆ

ಚಿಂಚೋಳಿ ಬಿಜೆಪಿ ಅಭ್ಯರ್ಥಿ ಡಾ ಅವಿನಾಶ್ ಜಾಧವ್ ಪರ ಪ್ರಚಾರದಲ್ಲಿ ತೊಡಗಿರುವ ಅವರು ಇಂದು ಗ್ರಾಮಗಳಲ್ಲಿ ಬೋವಿ ಸಮುದಾಯದ ಮುಖಂಡರುಗಳ ಆಂತರಿಕ ಸಭೆಯನ್ನು ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಈ ಟ್ವೀಟ್ ಗಳ ಸಮರ ನೋಡಿದರೆ ಇದು ಚುನಾವಣೆ ಪ್ರಚಾರವೋ ಅಥವಾ ನಿಮ್ಮ ಕಿತ್ತಾಟವೋ ಗೊತ್ತಾಗುತ್ತಿಲ್ಲ. ಈ ರೀತಿ ಕಿತ್ತಾಟದಲ್ಲಿ ತೋಡಗಿಕೊಂಡಿದ್ದರೆ ಜನರು ವೋಟ್ ಹಾಕಲಿದ್ದಾರೆ ಎಂದು ಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕನಿಷ್ಠ ಉಪಚುನಾವಣೆಯಲ್ಲಾದರೂ ಒಂದಾಗುತ್ತಾರೆ ಅಂದುಕೊಂಡಿದ್ದಿವಿ. ಆದರೆ ಈ ಕಿತ್ತಾಟ ನೋಡಿದಲ್ಲಿ ಚುನಾವಣೆಯ ನಂತರ ಸರಕಾರ ಉಳೀಯುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಮತ್ತಷ್ಟು ಉಪಚುನಾವಣೆಗಳು ಬರಬಹುದಾಗಿದೆ. ಬಿಜೆಪಿ ಬೆಂಬಲಕ್ಕೆ ಹಲವು ನಾಯಕರು ರಾಜೀನಾಮೆ ನೀಡಬಹುದಾಗಿದೆ. ಉಪಚುನಾವಣೆಗಳು ಬರುವುದು ಖಚಿತ ಎಂದ ಅವರು, ರಮೇಶ್ ಜಾರಕಿಹೊಳಿ ಮಾತ್ರವಲ್ಲಾ ಬೇರೆಯವರೂ ಬರಬಹುದು. ಕಾಂಗ್ರೆಸ್ ಸಂಖ್ಯಾಬಲ ಕಡಿಮೆಯಾಗೋದು ಖಚಿತ ಎಂದರು.

MLA Arvind Limbavali reaction to Siddaramaiahs tweets

ಮೊದಲು ಕಾಂಗ್ರೆಸ್ ತನ್ನ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲಿ. ನಂತರ ಆಪರೇಷನ್ ಹಸ್ತಮಾಡಲಿ. ಸಿ ಪಿ ಯೋಗೀಶ್ವರ್ ಹಾಗೂ ರಮೇಶ್ ಜಾರಕಿಹೋಲಿ ಭೇಟಿ ವೈಯಕ್ತಿ. ಕೇಂದ್ರ ಬಿಜೆಪಿ ನಾಯಕರು ಸರಕಾರವನ್ನು ಅಭದ್ರಗೊಳಿಸುವ ಕಾರ್ಯಕ್ಕೆ ಕೈ ಹಾಕಬೇಡಿ ಎಂದು ಹೇಳಿದ್ದಾರೆ. ಆದರೆ ತಾನಾಗಿಯೇ ಸರಕಾರ ಬಿದ್ದರೆ ನಾವು ಸರಕಾರ ರಚನೆ ಮಾಡಲಿದ್ದೇವೆ ಎಂದರು.

ಬಿಜೆಪಿ ಅಭ್ಯರ್ಥಿ ಡಾ ಅವಿನಾಶ್ ಜಾಧವ್ ಬಹುಮತದಿಂದ ಗೆಲ್ಲುವುದು ಸ್ಪಷ್ಟ. ವೃತ್ತಿಯಿಂದ ವೈದ್ಯರಾಗಿರುವ ಅವರು ಚಿಂಚೋಳಿ ಕ್ಷೇತ್ರದ ಆರೋಗ್ಯವನ್ನು ಸುಧಾರಿಸುತ್ತಾರೆ ಎಂದರು.

English summary
MLA Arvind Limbavali reacted to former CM Siddaramaiah's series of tweets and asked whether these tweets show your strength or flaws of your party. Limbavali is campaigning for Chincholi By election BJP candidate Dr. Avinash Jadhav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X