ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಪದಗ್ರಹಣ: ಟಿವಿಯಲ್ಲಿ 10ಲಕ್ಷ ಜನರನ್ನು ಸೇರಿಸುವುದು ತಾಕತ್ ಅಲ್ಲ

|
Google Oneindia Kannada News

ಕಲಬುರಗಿ, ಜುಲೈ 2: ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ವಾಕ್ಸಮರ ಮುಂದುವರಿದಿದೆ.

Recommended Video

Corona Cases,Hassan ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ , ಆತಂಕದಲ್ಲಿ ಜನಗಳು | Oneindia Kannada

ಡಿಕೆಶಿ ಪದಗ್ರಹಣ ಸಮಾರಂಭದ ಬಗ್ಗೆ ವ್ಯಂಗ್ಯವಾಡಿರುವ ಸಚಿವ ಜಾರಕಿಹೊಳಿ,"ಹತ್ತು ಲಕ್ಷ ಜನರನ್ನು ಸೇರಿಸಿ ತಾಕತ್ ಪ್ರದರ್ಶಿಸಬೇಕಿತ್ತು. ಟಿವಿಯಲ್ಲಿ ಲಕ್ಷ ಲಕ್ಷ ಜನ ನೋಡುತ್ತಾರೆಂದರೆ, ಅದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ"ಎಂದು ಹೇಳಿದರು.

 ಸಚಿವರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯ ಸಚಿವರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯ

ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನಾ ಬ್ಯಾರೇಜ್ ಗೆ ಭೇಟಿ ನೀಡುವ ವೇಳೆ ಮಾತನಾಡಿದ ಸಚಿವರು, "ಜನರ ಮುಂದೆ ಪದಗ್ರಹಣ ಮಾಡದೇ, ಬರೀ ಟಿವಿ ಮುಂದೆ ಪ್ರಮಾಣವಚನ ಸ್ವೀಕರಿಸಿದ್ದಾರೆ"ಎಂದು ಜಾರಕಿಹೊಳಿ ಲೇವಡಿ ಮಾಡಿದರು.

Minister Ramesh Jarkiholi Comment On DK Shivakumar Oath Taking Ceremony

"ಡಿ.ಕೆ.ಶಿವಕುಮಾರ್ ಅವರ ಶಕ್ತಿ ಏನೆಂದು ನನಗೆ ತಿಳಿದಿದೆ. ಅವರೊಂದು ಪಕ್ಷದ ರಾಜ್ಯಾಧ್ಯಕ್ಷರು ಅಷ್ಟೇ..ನಾನು ಅವರ ಮಿತ್ರನಲ್ಲ"ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಆರೋಪ, ಪ್ರತ್ಯಾರೋಪ ತೀರಾ ಕೆಳಮಟ್ಟಕ್ಕೆ ಹೋಗಿತ್ತು. ಜಾರಕಿಹೊಳಿಯನ್ನು ಡಿಕೆಶಿ ಪರೋಕ್ಷವಾಗಿ 'ಮೆಂಟಲ್'ಎಂದಿದ್ದರು. ಅದಕ್ಕೆ ಜಾರಕಿಹೊಳಿ, ಬಾಡಿ ಲಾಂಗ್ವೇಜ್ ನೋಡಿದರೆ ಯಾರು ಮೆಂಟಲ್ ಎನ್ನುವುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದರು.

ಇಷ್ಟೇ ಅಲ್ಲದೇ, ರಮೇಶ್ ಜಾರಕಿಹೊಳಿ ಬೆಂಗಳೂರಿನ ಪಾಶ್ ಏರಿಯಾ ಎಂದೇ ಕರೆಯಲ್ಪಡುವ ಸದಾಶಿವ ನಗರದಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಇದು, ಡಿ.ಕೆ.ಶಿವಕುಮಾರ್ ಅವರ ಮನೆಯ ಹಿಂದಿನ ಮನೆಯಾಗಿದೆ.

English summary
Minister Ramesh Jarkiholi Comment On DK Shivakumar Oath Taking Ceremony,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X