ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಕುತಂತ್ರ ಮಾಡಿಯೇ ಅನೇಕ ರಾಜ್ಯಗಳಲ್ಲಿ ಅಧಿಕಾರ ಪಡೆದಿದೆ: ಮಲ್ಲಿಕಾರ್ಜುನ ಖರ್ಗೆ

|
Google Oneindia Kannada News

ಕಲಬುರಗಿ, ಜು.2: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ಪತನಕ್ಕೆ ಬಿಜೆಪಿಯ ಕುತಂತ್ರ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರ ಒಂದೇ ಅಲ್ಲ, ಬಹುತೇಕ ಕಡೆ ಕುತಂತ್ರದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಕ್ಷಾಂತರ ನಿಷೇಧ ಕಾಯ್ದೆ ಕಠಿಣವಾಗಬೇಕು. ಶಾಸಕರನ್ನು ಪಕ್ಷಾಂತರಗೊಳಿಸುವ ಕೆಲಸ ಮಾಡಬಾರದು ಇಂದಿಲ್ಲ. ಈ ನಿಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕಠಿಣ ಮಾದರಿಯಲ್ಲಿ ಹೊರತರಬೇಕಿದೆ. ಇದು‌ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಮಾಡಬೇಕಾದ ಕೆಲಸ," ಎಂದು ಖರ್ಗೆ ತಿಳಿಸಿದರು.

Breaking; ಕಲಬುರಗಿಯಲ್ಲಿ ಮೊದಲ ವೈಮಾನಿಕ ತರಬೇತಿ ಕೇಂದ್ರ ಆರಂಭBreaking; ಕಲಬುರಗಿಯಲ್ಲಿ ಮೊದಲ ವೈಮಾನಿಕ ತರಬೇತಿ ಕೇಂದ್ರ ಆರಂಭ

ನಮ್ಮ ಮೈತ್ರಿಕೂಟ ಜನರಿಂದ ಅಧಿಕಾರ ಕಳೆದುಕೊಂಡಿಲ್ಲ. ಬಿಜೆಪಿಯ ಕುತಂತ್ರದಿಂದ ಅಧಿಕಾರ ಕಳೆದುಕೊಂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಹೊಡೆತವಾಗಲಿದೆ. ಮೋದಿಯವರಿಗೆ ಲೋಕಸಭೆಯಲ್ಲಿ 330ಕ್ಕಿಂತ ಹೆಚ್ಚು ಸ್ಥಾನ ಬಂದಿದ್ದರೂ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ತೃಪ್ತಿಯಿಲ್ಲ ಎಂದರು.

Kalaburagi: Many state bjp came into power on conspiracy says mallikarjun kharge

ಕಾಂಗ್ರೆಸ್ ಬಗ್ಗೆ ವಿದೇಶದಲ್ಲಿ ಮೋದಿ ಮಾತಾಡ್ತಾರೆ

ರಾಜಸ್ಥಾನದ ಕನ್ಹಯ್ಯ ಲಾಲ್ ಹತ್ಯೆ ಘಟನೆ ನಾವೆಲ್ಲರೂ ತೀವ್ರವಾಗಿ ಖಂಡಿಸಿದ್ದೇವೆ. ಯಾರೇ ತಪ್ಪು ಮಾಡಲಿ, ಯಾವ ಪಂಗಡದವನೇ ಆಗಿರಲಿ. ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಲೇಬೇಕೆಂದು ಹೇಳಿದರು. ಆರೋಪಿಗಳಿಗೆ ಪಾಕಿಸ್ತಾನದ ಜೊತೆ ನಂಟಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಇಂತಹ ವಿಷಯ ಮಾತಾಡಿ ಅಂದರೆ ಪ್ರಧಾನಿ ಮೋದಿ ಬಾಯಿನೇ ತೆರೆಯಂಗಿಲ್ಲ. ಆದರೆ, ಕಾಂಗ್ರೆಸ್ ಬಗ್ಗೆ ವಿದೇಶದಲ್ಲಿ ಮೋದಿ ಮಾತಾಡ್ತಾರೆ ಎಂದು ಟೀಕಿಸಿದರು.

Kalaburagi: Many state bjp came into power on conspiracy says mallikarjun kharge

ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, "ಮಹಾರಾಷ್ಟ್ರದಲ್ಲಿ ಮಹಾವಿಕಾಸ್​ ಆಘಾಡಿ ಸರ್ಕಾರ ಪತನ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ವಿಷಯವಾಗಿ ಮಾತನಾಡಿ, ಯಾರೇ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದರೂ ಐದು ವರ್ಷ ಸ್ಪರ್ಧಿಸದಂತಹ ಕಾಯ್ದೆ ಜಾರಿಯಾಗಬೇಕೆಂದು," ಒತ್ತಾಯಿಸಿದ್ದಾರೆ.

Recommended Video

ಬಂಗಾರದ ಮನುಷ್ಯನ ಗೋಲ್ಡನ್ ಹಾರ್ಟ್: Neeraj Chopra ವಿನಮ್ರತೆ ನೋಡಿ ನೆಟ್ಟಿಗರು ಫಿದಾ |*Sports |OneIndia Kannada

English summary
Maharastra coalition government has not lost power from the people. Because of BJP conspiracy loose power: Leader of Opposition in Rajya Sabha Mallikarjuna Kharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X