ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನನ್ನು ಸೋಲಿಸಲು ಭಾರಿ ರಣತಂತ್ರ ಹೆಣೆಯಲಾಗುತ್ತಿದೆ: ಖರ್ಗೆ

|
Google Oneindia Kannada News

Recommended Video

Lok Sabha Elections 2019: ಮಲ್ಲಿಕಾರ್ಜುನ್ ಖರ್ಗೆ ಸೋಲಿಸಲು ತಂತ್ರ ರೂಪಿಸಿದ ಮೋದಿ | Oneindia Kannada

ಕಲಬುರಗಿ, ಏಪ್ರಿಲ್ 08: ನನ್ನನ್ನು ಸೋಲಿಸಲು ಭಾರಿ ರಣತಂತ್ರ ಹೆಣೆಯಲಾಗುತ್ತಿದೆ, ದಿಲ್ಲಿಯಿಂದ ಗಲ್ಲಿಯವರೆಗೆ ನನ್ನನ್ನು ಸೋಲಿಸುವ ಯತ್ನಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಲಬುರಗಿ ಕ್ಷೇತ್ರದ ಚಿತ್ತಾಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಇಲ್ಲಿ ಚುನಾವಣೆಗೆ ನಿಂತಿರುವುದು ಮೋದಿ ಅಲ್ಲ, ನಾನು ಮತ್ತು ನನ್ನ ವಿರುದ್ಧ 11 ಜನ ಎಂದು ಖರ್ಗೆ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಆಸ್ತಿ ವಿವರ: ಖರ್ಗೆ ಬಳಿ ಕಾರಿಲ್ಲ! ಮಲ್ಲಿಕಾರ್ಜುನ ಖರ್ಗೆ ಆಸ್ತಿ ವಿವರ: ಖರ್ಗೆ ಬಳಿ ಕಾರಿಲ್ಲ!

ನನ್ನ ವಿರುದ್ಧ ಸೋತವರೇ ನನ್ನನ್ನು ಸೋಲಿಸುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ, ಸೋತವರೆಲ್ಲಾ ಸಂಘ ಕಟ್ಟಿಕೊಂಡು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ, ಆದರೆ ಅವರನ್ನು ಕಲಬುರಗಿಯ ಜನ ಸೋಲಿಸಲಿದ್ದಾರೆ ಎಂದು ಹೇಳಿದರು.

Many leaders trying to defeat me in elections: Mallikarjun Kharge

ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಕೇಳಲು ಬಂದಿದ್ದೇನೆ, ಆದರೆ ಕೆಲವರು ಮೋದಿ ಹೆಸರು ಹೇಳಿ ಮತಕೇಳುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ಸಿನವರೇ ನನ್ನನ್ನು ಗೆಲ್ಲಿಸುತ್ತಾರೆ: ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾಧವ್ ಕಾಂಗ್ರೆಸ್ಸಿನವರೇ ನನ್ನನ್ನು ಗೆಲ್ಲಿಸುತ್ತಾರೆ: ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾಧವ್

ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ ಎಲ್ಲರ ಖಾತೆಗೆ ಹದಿನೈದು ಲಕ್ಷ ಹಾಕುತ್ತೇನೆ ಎಂದಿದ್ದರಲ್ಲ, ಯಾರಿಗಾದರೂ ಹಣ ಬಂದಿದೆಯೇ ಎಂದು ಖರ್ಗೆ ಪ್ರಶ್ನಿಸಿದರು. ಎರಡು ಕೋಟಿ ಉದ್ಯೋಗ ಕೊಡ್ತೀನಿ ಎಂದಿದ್ದರು, ಕೇಂದ್ರ ಸರ್ಕಾರದ 30 ಲಕ್ಷ ಉದ್ಯೋಗಗಳನ್ನು ಸಹ ಭರ್ತಿ ಮಾಡಲಿಲ್ಲ ಎಂದು ಅವರು ಆರೋಪಿಸಿದರು.

ನಾಲ್ಕು ಸುತ್ತು ಕೇಸರಿ ಕೋಟೆ: ಮಲ್ಲಿಕಾರ್ಜುನ ಖರ್ಗೆಗೆ ಗೆಲುವು ಸುಲಭದ ತುತ್ತಲ್ಲ ನಾಲ್ಕು ಸುತ್ತು ಕೇಸರಿ ಕೋಟೆ: ಮಲ್ಲಿಕಾರ್ಜುನ ಖರ್ಗೆಗೆ ಗೆಲುವು ಸುಲಭದ ತುತ್ತಲ್ಲ

ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಅವರ ಎದುರಾಳಿಯಾಗಿ ಬಿಜೆಪಿಯಿಂದ ಉಮೇಶ್ ಜಾಧವ್ ಅವರು ಸ್ಪರ್ಧಿಸಿದ್ದಾರೆ.

English summary
Many leaders of Delhi also trying to defeat me in elections said congerss leader Mallikarjun Kharge. He is contesting from Kalburagi constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X