ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈದರಬಾದ್ ಕರ್ನಾಟಕ ಹಿಂದುಳಿಯಲು ಖರ್ಗೆ ಕಾರಣ: ವಿ ಸೋಮಣ್ಣ

|
Google Oneindia Kannada News

ಚಿಂಚೋಳಿ ಮೇ 7: ಕಲಬುರರ್ಗಿ ಜಿಲ್ಲೆ ಸೇರಿದಂತೆ ಹೈದರಾಬಾದ ಕರ್ನಾಟಕ ಹಿಂದುಳಿಯಲು ಮಲ್ಲಿಕಾರ್ಜುನ ಖರ್ಗೆ ಅವರೆ ಕಾರಣ. ಚಿಂಚೋಳಿ ಅಭಿವದ್ದಿಗಾಗಿ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಅವರಿಗೆ ಮತ ನೀಡಿ ಅಭಿವದ್ದಿಗೆ ಕೈಜೋಡಿಸಿ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ತಾಲೂಕಿನ ಐನೋಳ್ಳಿ, ಕೊಳ್ಳೂರ, ನಾಗಾಯಿದಲಾಯಿ, ದೇಗಲಮಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಸುಮಾರು 50 ವರ್ಷಗಳಿಂದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಆಗಿದ್ದರು. ಆದರೂ ಹೈಕ ವಿಭಾಗ ಅಭಿವದ್ದಿ ಹೊಂದಿಲ್ಲ ಇಲ್ಲಿಯ ಜನ ಅಭಿವದ್ದಿಯಿಂದ ವಂಚಿರಾಗಿರಲು ಮಲ್ಲಿಕಾರ್ಜುನ ಖರ್ಗೆ ಅವರೆ ಹೊಣೆ ಎಂದರು.

ಕುಂದಗೋಳ, ಚಿಂಚೋಳಿ ಚುನಾವಣೆ ಗೆಲ್ಲುತ್ತೇವೆ : ಯಡಿಯೂರಪ್ಪಕುಂದಗೋಳ, ಚಿಂಚೋಳಿ ಚುನಾವಣೆ ಗೆಲ್ಲುತ್ತೇವೆ : ಯಡಿಯೂರಪ್ಪ

ಚಿಂಚೋಳಿಯಲ್ಲಿ ಕಾಂಗ್ರೆಸ್-ಬಿಜೆಪಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಹೆಸರಿಗೆ ಮಾತ್ರ ಇದ್ದಾರೆ. ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೆ ಅಭ್ಯರ್ಥಿ ಅಭಿವದ್ಧಿಯಿಂದ ವಂಚಿತರಾದ ಚಿಂಚೋಳಿ ಮತದಾರ ಪ್ರಭುಗಳು ಮೇ 19 ರಂದು ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಅವರಿಗೆ ಮತ ನೀಡಿ ಎಂದರು.

Mallikarjun Kharge is responsible for Hyderabad Karnataka backward : V Somanna

ಮಾಜಿ ಸಚಿವ ಸುನೀಲ್ ವಲ್ಯಾಪೂರ ಮಾತನಾಡಿ, ದೇಶಕ್ಕೆ ಸ್ವಾತಂತ್ರ ದೊರಕಿದ್ದಾಗಿನಿಂದ ಚಿಂಚೋಳಿ ಅಭಿವದ್ದಿ ಕಂಡಿರಲಿಲ್ಲ. ಈ ಹಿಂದೆ ನಾನು ಇಲ್ಲಿಯ ಶಾಸಕನಾಗಿದ್ದಾಗ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಚಿಂಚೋಳಿಯಿಂದ ಬೀದರ, ಚಿಂಚೋಳಿ-ಮಿರಿಯಾಣ, ಚಿಂಚೋಳಿ-ಸೇಡಂ, ಚಂಚೋಳಿ-ಮಹಾಗಾಂವ ಮತ್ತು ಚಿಮ್ಮಇದಲಾಯಿದಿಂದ ಹುಮನಾಬಾದ ವರಗೆ ರಸ್ತೆ ಅಭಿವದಿ ಹೊಂದಿವೆ. ಪ್ರತಿ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಸುವರ್ಣಗ್ರಾಮ ಸೇರಿದಂತೆ ಅನೇಕ ಜನ ಪರ ಯೋಜನೆಗಳ ಮೂಲಕ ಅಭಿವದ್ದಿ ಹೊಂದಿದೆ ಎಂದರು.

ಕಾಂಗ್ರೆಸ್ ಶಾಸಕರ ಮೇಲೆ ಕೆ.ಸಿ.ವೇಣುಗೋಪಾಲ್ ಅಸಮಾಧಾನ! ಕಾಂಗ್ರೆಸ್ ಶಾಸಕರ ಮೇಲೆ ಕೆ.ಸಿ.ವೇಣುಗೋಪಾಲ್ ಅಸಮಾಧಾನ!

ಉಪಚುನಾವಣೆಯಲ್ಲಿ ಸುನೀಲ್ ವಲ್ಯಾಪೂರ ಟಿಕೇಟ್ ತರುತ್ತಾರೆ ಯಡಿಯೂರಪ್ಪನವರು ಅವರು ಕೈಬಿಡುವುದಿಲ್ಲ ಎಂದು ಕ್ಷೇತ್ರ ಜನತೆ ಮಾತನಾಡುತ್ತಿದ್ದರು. ಆದರೆ ಉಮೇಶ ಜಾಧವ ಚಿಂಚೋಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಹೈಕಮಾಂಡ್ ಜತೆ ಒಪ್ಪಂದ ಮಾಡಿಕೊಂಡ ಕಾರಣ ಯಡಿಯೂರಪ್ಪನವರು ಮತ್ತೆ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂದು ನಾನು ನನ್ನ ಕ್ಷೇತ್ರ ತ್ಯಾಗ ಮಾಡಿದ್ದೇನೆ. ತಾವುಗಳು ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಲು ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಅವಿನಾಶ ಜಾಧವ ಅವರಿಗೆ ಹೆಚ್ಚಿನ ಮತ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ತಾಲೂಕಾಧ್ಯಕ್ಷ ಬೀಮಶೆಟ್ಟಿ ಮುರುಡಾ, ಮಾಜಿ ತಾಲೂಕಾಧ್ಯಕ್ಷ ಶಶಿಧರ ಸೂಗೂರ, ಲಕ್ಷ್ಮಣ ಅವಂಟಿ, ಸಂತೋಷ ಗಡಂತಿ, ಅಲ್ಲಂಪ್ರಭು ಹುಲಿ, ಗಿರಿರಾಜ ನಾಟೀಕಾರ, ಸಂಗಾರೆಡ್ಡಿ ಭಂಟವಾರ, ಸುನೀಲ್ ಹಳ್ಳಿ, ವಿಷ್ಣುಕಾಂತ ಮೂಲಗಿ, ವಿಶ್ವನಾಥರೆಡ್ಡಿ ಚಿಮ್ಮನಚೋಡ, ಲಾಲಬಾಹುದ್ಧೂರ ಶಾಸ್ತ್ರಿ, ಸುಭಾಷ ನಾಯಿನೋರ ಸೇರಿದಂತೆ ಅನೇಕರು ಇದ್ದರು.

English summary
Former minister V Somanna lashes out at Mallikarjun Kharge at Chincholi. Kharge is responsible for under development status of Hyderabad Karnataka and BJP can develop this region he said. He was campaigning for Avinash Jadhav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X